ETV Bharat / city

Save Chamundi hills: ಪ್ರಧಾನಿಗೆ ಪತ್ರ ಬರೆದ ಎಸ್.ಎಲ್. ಭೈರಪ್ಪ

Chamundi hills: ಚಾಮುಂಡಿ ಬೆಟ್ಟದಲ್ಲಿ ಪದೇ ಪದೇ ಭೂಕುಸಿತ ಉಂಟಾಗಿ, ಬೆಟ್ಟಕ್ಕೇ ಅಪಾಯ ಭೀತಿ ಇರುವ ಕಾರಣ ಅದನ್ನು ಕೇಂದ್ರ ಸರ್ಕಾರ ಉಳಿಸಬೇಕು ಎಂದು ಖ್ಯಾತ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

bhairappa wrote letter to pm
ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ
author img

By

Published : Nov 23, 2021, 2:27 PM IST

ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಪದೇ ಪದೇ ಭೂಕುಸಿತ ಉಂಟಾಗಿ, ಬೆಟ್ಟಕ್ಕೇ ಅಪಾಯ ಭೀತಿ ಇರುವ ಕಾರಣ ಅದನ್ನು ಕೇಂದ್ರ ಸರ್ಕಾರ ಉಳಿಸಬೇಕು ಎಂದು ಕಾಂದಬರಿಕಾರ ಎಸ್.ಎಲ್. ಭೈರಪ್ಪ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.

ತೀರ್ಥಕ್ಷೇತ್ರಗಳ ಪುನಶ್ಚೇತನ, ಆಧ್ಯಾತ್ಮ ಮತ್ತು ಪಾರಂಪರಿಕ ವರ್ಧನೆ ಯೋಜನೆಯಡಿ(ಪ್ರಸಾದ) ಚಾಮುಂಡಿ ಬೆಟ್ಟದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಸಲ್ಲಿಸಿರುವ ಪ್ರಸ್ತಾವನೆ ನೋಡಿ ನೋವುಂಟಾಗಿದೆ. ಬೆಟ್ಟದ ನೈಸರ್ಗಿಕ ಸೌಂದರ್ಯ ಉಳಿಯಬೇಕು. ಆಧುನಿಕ ಶೈಲಿಯ ಕಟ್ಟಡಗಳು ನಿರ್ಮಾಣವಾಗಬಾರದು. ಪರಿಸರಕ್ಕೆ ಪೂರಕವಾದ ಹೊಸ ಪರಿಕಲ್ಪನೆಯಡಿ ಅಭಿವೃದ್ಧಿ ಕೆಲಸ ನಡೆಯಲಿ ಎಂದು ಪತ್ರದಲ್ಲಿ ಎಸ್.ಎಲ್. ಭೈರಪ್ಪ ಉಲ್ಲೇಖಿಸಿದ್ದಾರೆ.

ಚಾಮುಂಡಿ ಬೆಟ್ಟಕ್ಕೆ ವಿಐಪಿಗಳ ವಾಹನ ಸೇರಿದಂತೆ ಎಲ್ಲಾ ಖಾಸಗಿ ವಾಹನಗಳ ಪ್ರವೇಶ ನಿರ್ಬಂಧಿಸಿ ಎಲೆಕ್ಟ್ರಿಕ್ ಬಸ್ ಸಂಚಾರ ಆರಂಭಿಸಬೇಕು. ದೇವಸ್ಥಾನದ ಆಡಳಿತ ಮಂಡಳಿಯವರು ಮಾತ್ರ ಪೂಜಾ ಸಾಮಗ್ರಿಗಳನ್ನು ಮಾರಾಟ ಮಾಡಬೇಕು. ಇತರರಿಗೆ ಅವಕಾಶ ನೀಡಬಾರದು. ಬೆಟ್ಟದಲ್ಲಿ ವಾಸಿಸುತ್ತಿರುವ ಜನಸಂಖ್ಯೆ 4 ಸಾವಿರ ದಾಟಿದೆ. ಅಲ್ಲಿನ ನಿವಾಸಿಗಳನ್ನು ಸ್ಥಳಾಂತರಿಸಿ, ಮೈಸೂರು ನಗರದಲ್ಲಿ ಪುನರ್ವಸತಿ ಕಲ್ಪಿಸಬೇಕು. ಅರ್ಚಕರು ದೇವಸ್ಥಾನದ ಸಿಬ್ಬಂದಿಗೆ ಮಾತ್ರ ಬೆಟ್ಟದಲ್ಲಿ ವಾಸಿಸಲು ಅವಕಾಶ ನೀಡಬೇಕು ಎಂದು ಪತ್ರದಲ್ಲಿ ಕೋರಿದ್ದಾರೆ.

ರಾಜ್ಯದಲ್ಲಿ ಈ ಹಿಂದಿದ್ದ ಸರ್ಕಾರ ಬೆಟ್ಟದ ಮೇಲೆ ಮಲ್ಟಿ ಲೆವೆಲ್ ಪಾರ್ಕಿಂಗ್ ಕಟ್ಟಡ, ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿದ ಪರಿಣಾಮ ಯಾತ್ರಾ ಸ್ಥಳವಾಗಿದ್ದ ಚಾಮುಂಡಿ ಬೆಟ್ಟ ವಾಣಿಜ್ಯ ಕೇಂದ್ರವಾಗಿದೆ. ಪ್ರಶಾಂತತೆ ನಾಶವಾಗಿದೆ ಎಂದು ಪ್ರಧಾನಿಗೆ ಬರೆದ ಪತ್ರದಲ್ಲಿ ಎಸ್.ಎಲ್.ಭೈರಪ್ಪ ದೂರಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.