ಮೈಸೂರು: 'ನೀವು ರಾಜೀನಾಮೆ ನೀಡಿದ್ರೆ, ನಾವು ಯಾರೂ ಕೂಡ ಕೆಲಸ ಮಾಡುವುದಿಲ್ಲ' ಎಂದು ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಅವರ ಕಾರನ್ನು ತಡೆದು ಅಧಿಕಾರಿಗಳು ರಾಜೀನಾಮೆ ಹಿಂಪಡೆಯುವಂತೆ ಮನವಿ ಮಾಡಿದ ಪ್ರಸಂಗ ನಗರದಲ್ಲಿ ನಡೆಯಿತು.
ಕೋವಿಡ್ ಬಗ್ಗೆ ಮಾಹಿತಿ ನೀಡುವುದಾಗಿ ಆಯುಕ್ತೆ ಶಿಲ್ಪಾ ನಾಗ್ ಮಾಧ್ಯಮಗೋಷ್ಟಿ ಕರೆದಿದ್ದರು. ಈ ವೇಳೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಆರೋಪ ಮಾಡಿ, ನನ್ನ ರಾಜೀನಾಮೆಗೆ ಅವರೇ ನೇರ ಕಾರಣ ಎಂದು ಹೇಳಿ ಮಾಧ್ಯಮಗೋಷ್ಟಿಯನ್ನು ದಿಢೀರ್ ಮೊಟಕುಗೊಳಿಸಿ ಮುಗಿಸಿ ಕಾರು ಹತ್ತಿ ಹೊರಟರು.
ಈ ಸಂದರ್ಭದಲ್ಲಿ ಆಯುಕ್ತರ ಕಾರನ್ನು ತಡೆದ ಪಾಲಿಕೆ ಅಧಿಕಾರಿಗಳು, ನೀವು ರಾಜೀನಾಮೆ ನೀಡಬೇಡಿ, ವಾಪಸ್ ಪಡೆಯಿರಿ. ಇಲ್ಲದಿದ್ದರೆ ನಾವು ಯಾರೂ ಕೆಲಸ ಮಾಡುವುದಿಲ್ಲ ಎಂದು ಶಿಲ್ಪಾ ನಾಗ್ ಅವರಲ್ಲಿ ಮನವಿ ಮಾಡಿದರು.
ರಾಜೀನಾಮೆ ವಾಪಸ್ ಪಡೆಯಿರಿ, ಕೈ ಮುಗಿದ ಸೆಕ್ಯುರಿಟಿ ಗಾರ್ಡ್:
ರಾಜೀನಾಮೆ ವಾಪಸ್ ಪಡೆಯಿರಿ ಎಂದು ಭದ್ರತಾ ಸಿಬ್ಬಂದಿ ಕೈ ಮುಗಿದು ನಗರಪಾಲಿಕೆ ಆಯುಕ್ತೆಗೆ ಮನವಿ ಮಾಡಿದರು. ಪಾಲಿಕೆ ಕಚೇರಿ ಮುಂದೆ ನಿಂತಿದ್ದ ಸೆಕ್ಯೂರಿಟಿ ಗಾರ್ಡ್, ದಯವಿಟ್ಟು ನೀವು ರಾಜೀನಾಮೆ ನೀಡಬೇಡಿ ಎಂದು ಮನವಿ ಮಾಡಿದರು ಮನವಿ ಮಾಡಿದರು. ನೀವು ರಾಜೀನಾಮೆ ವಾಪಸ್ ಪಡೆದು, ಕಚೇರಿಗೆ ಮರಳದಿದ್ದಾರೆ, ನಾವು ರಾಜೀನಾಮೆ ನೀಡ್ತೀವಿ ಎಂದರು.