ETV Bharat / city

ಮೈಸೂರಿನ ಯಾವ ಪ್ರವಾಸಿ ತಾಣವನ್ನೂ ಸ್ಥಗಿತಗೊಳಿಸುವುದಿಲ್ಲ : ಸಚಿವ ಎಸ್ ಟಿ ಸೋಮಶೇಖರ್

ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಹೆಚ್ಚುತ್ತಿರುವುದರಿಂದ ಕೂಡಲೇ 2 ಲಕ್ಷ ಲಸಿಕೆ ನೀಡುವಂತೆ ಆರೋಗ್ಯ ಸಚಿವರಾದ ಡಾ. ಕೆ. ಸುಧಾಕರ್ ಅವರಿಗೆ ದೂರವಾಣಿಯಲ್ಲಿ ಕೇಳಿದ್ದೇನೆ ಎಂದರು. ಈಗ 1 ಲಕ್ಷ ಲಸಿಕೆ ನೀಡಲಾಗುವುದು..

No tourist places will be shut down
ಎಸ್‌ಟಿ ಸೋಮಶೇಖರ್
author img

By

Published : Apr 5, 2021, 4:49 PM IST

ಮೈಸೂರು : ಯಾವ ಪ್ರವಾಸಿ ತಾಣವನ್ನೂ ಸ್ಥಗಿತಗೊಳಿಸುವುದಿಲ್ಲ. ಆದ್ರೆ, ಕೆಲ ನಿರ್ಬಂಧಗಳನ್ನು ಮಾಡಲು ತೀರ್ಮಾನಿಸಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಹೇಳಿದರು.

ಕೋವಿಡ್ ಪರಿಸ್ಥಿತಿ ಬಗ್ಗೆ ಅಧಿಕಾರಿಗಳ ಸಭೆ ನಡೆಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರವಾಸಿ ತಾಣಗಳನ್ನು ಸ್ಥಗಿತಗೊಳಿಸುವುದಿಲ್ಲ. ಊರ ಹಬ್ಬ, ಸಣ್ಣಪುಟ್ಟ ಜಾತ್ರೆಗಳನ್ನು ಆಯೋಜಿಸಲು ಕೆಲ ನಿರ್ಬಂಧಗಳನ್ನು ಹಾಕಿ ಅನುಮತಿ ನೀಡಲು ನಿರ್ಧರಿಸಿದ್ದೇವೆ ಎಂದರು.

ಜಿಲ್ಲೆಗೆ ಸದ್ಯದಲ್ಲೇ ಇನ್ನೂ 1 ಲಕ್ಷ ಕೋವಿಡ್ ಲಸಿಕೆ ಪೂರೈಕೆಯಾಗಲಿದೆ. 5 ಲಕ್ಷ ಲಸಿಕೆ ಬೇಕು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ರಾಜ್ಯಕ್ಕೆ 15 ಲಕ್ಷ ಲಸಿಕೆ ಬಂದಿವೆ. ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಹೆಚ್ಚುತ್ತಿರುವುದರಿಂದ ಕೂಡಲೇ 2 ಲಕ್ಷ ಲಸಿಕೆ ನೀಡುವಂತೆ ಆರೋಗ್ಯ ಸಚಿವರಾದ ಡಾ. ಕೆ. ಸುಧಾಕರ್ ಅವರಿಗೆ ದೂರವಾಣಿಯಲ್ಲಿ ಕೇಳಿದ್ದೇನೆ ಎಂದರು. ಈಗ 1 ಲಕ್ಷ ಲಸಿಕೆ ನೀಡಲಾಗುವುದು. ಹಂತ ಹಂತವಾಗಿ ಬೇಡಿಕೆಗೆ ಅನುಗುಣವಾಗಿ ಪೂರೈಸಲಾಗುವುದು ಎಂದು ಡಾ. ಸುಧಾಕರ್ ಅವರು ತಿಳಿಸಿರುವುದಾಗಿ ಸಚಿವರು ಹೇಳಿದರು.

ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಎರಡೂ ಪರಿಣಾಮಕಾರಿ ಲಸಿಕೆಗಳು. ಲಸಿಕೆ ಪ್ರಮಾಣ ಹೆಚ್ಚಿಸಲಾಗುತ್ತಿದೆ. ಮಾರುಕಟ್ಟೆ ಮುಂತಾದ ಜನಸಂದಣಿ ಪ್ರದೇಶದಲ್ಲಿ ಕೋವಿಡ್‌ ಪರೀಕ್ಷೆಗಳನ್ನು ಹೆಚ್ಚಿಸಲಾಗುವುದು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.