ETV Bharat / city

ಟಿವಿಎಸ್ ಎಕ್ಸ್ ಎಲ್ ಮೊಪೆಡ್ ಅಂದ್ರೆ ಇಷ್ಟ ಅಂತಾ 29 ಬೈಕ್ ಕದ್ದ.. ಕೊನೆಗೂ ಸಿಕ್ಕಿಬಿದ್ದ ಖದೀಮ

ಬರಿ ಮೊಪೆಡ್​ನ್ನು ಚಲಾಯಿಸಲು ಬರುತ್ತಿದ್ದ ವ್ಯಕ್ತಿಯೊಬ್ಬ ಬರಿ ಮೊಪೆಡ್​ನ್ನೇ ಕಳ್ಳತನ ಮಾಡುತ್ತಿದ್ದ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಕಳ್ಳನಿಂದ 29 ಮೊಪೆಡ್​ಗಳನ್ನು ವಶಪಡಿಸಿಕೊಂಡಿದ್ದಾರೆ.

Mysuru police arrested TVS moped bike thief and seized 29 bike
ಟಿವಿಎಸ್ ಎಕ್ಸ್ ಎಲ್ ಮೊಪೆಡ್ ಅಂದ್ರೆ ಇಷ್ಟ, ಅದಕ್ಕೆ 29 ಬೈಕ್ ಕದ್ದು ಸಿಕ್ಕಿಬಿದ್ದ ಖದೀಮ
author img

By

Published : Jun 4, 2022, 4:56 PM IST

ಮೈಸೂರು: ಟಿವಿಎಸ್ ಎಕ್ಸ್ ಎಲ್ ಮೊಪೆಡ್ ಅಂದ್ರೆ, ಕಳ್ಳನಿಗೆ ಎಲ್ಲಿಲ್ಲದ ಅಕ್ಕರೆಯಂತೆ. ಅದಕ್ಕಾಗಿ ಆತ ಬರೋಬ್ಬರಿ 29 ಬೈಕ್ ಕದ್ದು ಪೊಲೀಸರ ಅತಿಥಿಯಾಗಿದ್ದಾನೆ. ಬೈಕ್​ಗಳ ಸಮೇತ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 6.25 ಲಕ್ಷ ರೂ‌ಪಾಯಿ ಬೆಲೆಬಾಳುವ 29 ಟಿವಿಎಸ್ ಎಕ್ಸ್ ಎಲ್ ಸೂಪರ್ ಮೊಪೆಡ್ ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ನಂಜನಗೂಡು ತಾಲೂಕಿನ ಕಂದೇಗಾಲ ಗ್ರಾಮದ ಸಿದ್ಧರಾಜು ಅಲಿಯಾಸ್ ಹೊರೆಯಾಲ ಸಿದ್ಧ ಬಂಧಿತ ಆರೋಪಿಯಾಗಿದ್ದಾನೆ. ಈ ಆರೋಪಿಯು ಜಮೀನಿಗೆ ತೆರಳುವ ರೈತರ ಟಿವಿಎಸ್ ಮೊಪೆಡ್ಗಳನ್ನ ನಕಲಿ ಕೀ ಬಳಸಿ ಕಳ್ಳತನ ಮಾಡಿ ಪುಡಿಗಾಸಿಗೆ ಮಾರಾಟ ಮಾಡುತ್ತಿದ್ದ ಎನ್ನಲಾಗ್ತಿದೆ.

ಟಿವಿಎಸ್ ಎಕ್ಸ್ ಎಲ್ ಮೊಪೆಡ್ ಅಂದ್ರೆ ಇಷ್ಟ, ಅದಕ್ಕೆ 29 ಬೈಕ್ ಕದ್ದು ಸಿಕ್ಕಿಬಿದ್ದ ಖದೀಮ

ಜೂನ್ 2 ರಂದು ನಗರದ ಬೈಪಾಸ್ ರಸ್ತೆಯ ಹೆಜ್ಜಿಗೆ ಸೇತುವೆಯ ಬಳಿ ವಾಹನ ತಪಾಸಣೆ ನಡೆಸುವಾಗ ಆರೋಪಿ ಸಿದ್ಧರಾಜು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಈತನನ್ನು ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ, ನಂಜನಗೂಡು ಪಟ್ಟಣ ವ್ಯಾಪ್ತಿಯಲ್ಲಿ 2, ಚಾಮರಾಜನಗರ ಟೌನ್ ನಲ್ಲಿ 2 ,ಗುಂಡ್ಲುಪೇಟೆ ಟೌನ್ ನಲ್ಲಿ 25 ಟಿವಿಎಸ್ ಮೊಪೆಡ್ ಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ದಿನೇ ದಿನೇ ಹೆಚ್ಚಾಗುತ್ತಿದ್ದ ಮೊಪೆಡ್ ಕಳ್ಳತನ ಪ್ರಕರಣವನ್ನು ಭೇದಿಸಲು ಎಸ್​ ಪಿ ಚೇತನ್ ಅವರ ಆದೇಶದಂತೆ ವೃತ್ತನಿರೀಕ್ಷಕ ಲಕ್ಷ್ಮಿಕಾಂತ ತಳವಾರ್ ಮಾರ್ಗದರ್ಶನದಲ್ಲಿ ತಂಡ ರಚಿಸಲಾಗಿತ್ತು. ತಂಡ ಕಾರ್ಯಾಚರಣೆ ನಡೆಸಿ ಕಳ್ಳನನ್ನು ಬಂಧಿಸಿದೆ. ತಂಡಕ್ಕೆ ಎಸ್ಪಿ ಚೇತನ್ 5000 ರೂ. ಬಹುಮಾನವನ್ನು ಘೋಷಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಗ್ರಾಹಕರೇ ಎಚ್ಚರ..! ಕಡಬದಲ್ಲಿ ಓಡಾಡುತ್ತಿದೆ 100 ರೂ. ಜೆರಾಕ್ಸ್ ನೋಟು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.