ETV Bharat / city

ಮೈಸೂರು ಚಿನ್ನದಂಗಡಿ ದರೋಡೆ ಪ್ರಕರಣ: ಬಂಧಿತರಿಂದ ಹೊರಬಿತ್ತು ಸ್ಫೋಟಕ ಮಾಹಿತಿ

ಮೈಸೂರು ಚಿನ್ನದಂಗಡಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳು ವಿಚಾರಣೆ ವೇಳೆ ಕೆಲ ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.

Mysuru theft case updates
ಚಿನ್ನದಂಗಡಿ ದರೋಡೆ ಪ್ರಕರಣ: ಬಂಧಿತರಿಂದ ಸ್ಫೋಟಕ ಮಾಹಿತಿ
author img

By

Published : Sep 8, 2021, 2:20 PM IST

ಮೈಸೂರು: ಚಿನ್ನದಂಗಡಿ ದರೋಡೆ ಪ್ರಕರಣದಲ್ಲಿ ಬಂಧಿತರಾದ ಆರೋಪಿಗಳಿಂದ ಸ್ಪೋಟಕ ಮಾಹಿತಿ ಹೊರಬಿದ್ದಿದ್ದು, ವರಮಹಾಲಕ್ಷ್ಮಿ ಹಬ್ಬದ ದಿನ ಮೈಸೂರು ನಗರದ ಮತ್ತೊಂದು ಚಿನ್ನದಂಗಡಿ ದರೋಡೆ ಮಾಡಲು ಯತ್ನಿಸಿ ವಿಫಲವಾದ ಪ್ರಯತ್ನ ನಡೆದಿದೆ ಎಂದು ಪೊಲೀಸ್ ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾರೆ.

ವಿದ್ಯಾರಣ್ಯಪುರಂನ ಅಮೃತ್ ಗೋಲ್ಡ್ ಆ್ಯಂಡ್ ಸಿಲ್ವರ್ ಪ್ಯಾಲೇಸ್ ಚಿನ್ನಭರಣ ಮಳಿಗೆ ದರೋಡೆ ಮಾಡಿ, ಅಮಾಯಕನ ಹತ್ಯೆ ಮಾಡಿ ಆರೋಪಿಗಳು ಪರಾರಿಯಾಗಿದ್ದರು. ಈ ಆರೋಪಿಗಳನ್ನು ಹೊರ ರಾಜ್ಯದಲ್ಲಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಈಗ ಈ ಆರೋಪಿಗಳ ವಿಚಾರಣೆಯಲ್ಲಿ ಹಲವಾರು ವಿಚಾರಗಳು ಹೊರಬರುತ್ತಿವೆ.

Mysuru theft case updates
ಚಿನ್ನದಂಗಡಿ ದರೋಡೆ ಪ್ರಕರಣದ ಆರೋಪಿಗಳು

ವರಮಹಾಲಕ್ಷ್ಮಿ ಹಬ್ಬದ ದಿನ ಘಟನೆ ನಡೆದ ಅದೇ ಪ್ರದೇಶದ ಆಭರಣ ಮಳಿಗೆಗೆ ಹೋಗಿದ್ದ ಆರೋಪಿಗಳು ಒಡವೆ ತೋರಿಸುವಂತೆ ಕೇಳಿದ್ದರು. ಆದರೆ ಅಂಗಡಿಯಲ್ಲಿದ್ದ ಕೆಲಸಗಾರರು ಮಾಲೀಕರಿಲ್ಲದ ಕಾರಣ ಒಡವೆ ತೋರಿಸಲು ನಿರಾಕರಿಸಿದ್ದಾರೆ. ಆದರೂ ಒಡವೆ ತೋರಿಸುವಂತೆ ಪುಸಲಾಯಿಸಿದ್ದರು. ಆದ್ರೆ ವಿಫಲರಾಗಿದ್ದರು ಎಂಬುದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ.

ವಾರವಿಡಿ ದರೋಡೆ ಮಾಡಲು ಅಂಗಡಿ ಹುಡುಕಾಟ!

ಹೆಚ್ಚು ಸಿಬ್ಬಂದಿ ಇಲ್ಲದ ಅಂಗಡಿಯಲ್ಲಿ ದರೋಡೆ ಮಾಡುವುದು ಸುಲಭ ಎಂಬ ಕಾರಣಕ್ಕೆ ಆರೋಪಿಗಳು ಇಂಥ ಅಂಗಡಿಗಾಗಿ ವಾರವಿಡೀ ಹುಡುಕಾಟ ನಡೆಸಿದ್ದರು. ಅಲ್ಲದೇ ಗ್ರಾಹಕರಂತೆ ಭೇಟಿ ನೀಡಿದ್ದರು. ಆದರೆ ಅಂತಹ ಅಂಗಡಿ ಆರೋಪಿಗಳಿಗೆ ದೊರೆತಿರಲಿಲ್ಲ ಎಂದು ಮೂಲಗಳು ತಿಳಿಸಿವೆ.

ಇದೇ ಸಂದರ್ಭದಲ್ಲಿ ನಗರದಲ್ಲಿ ದರೋಡೆಕೋರರಿರುವ ಮಾಹಿತಿ ಸಂಗ್ರಹಿಸುವಲ್ಲಿ ಗುಪ್ತಚರ ವಿಭಾಗ ವಿಫಲವಾಗಿದೆಯೇ ಎಂಬ ಪ್ರಶ್ನೆಯು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಲಾಕ್​ಡೌನ್ ನಂತರ ಅಪರಾಧ ಪ್ರಕರಣಗಳು ಹೆಚ್ಚಾಗುವುದರ ಮಾಹಿತಿಗಳಿದ್ದರೂ ಗುಪ್ತಚರ ಮಾಹಿತಿ ಸಂಗ್ರಹ ಕಾರ್ಯ ನಡೆದಿಲ್ಲ. ಹೊರ ರಾಜ್ಯಗಳಿಂದ ಇನ್ನಷ್ಟು ದರೋಡೆಕೋರರ ತಂಡಗಳು ಬರುವ ಸಾಧ್ಯತೆ ಹೆಚ್ಚಾಗಿದ್ದು, ಇನ್ನಾದರೂ ಗುಪ್ತಚರ ಇಲಾಖೆ ಎಚ್ಚರವಹಿಸಬೇಕಾಗಿದೆ.‌

ಅಂಗಡಿಗೆ ಸೂಕ್ತ ಭದ್ರತೆ ಅವಶ್ಯಕ

ಒಬ್ಬರೇ ಅಂಗಡಿಗಳಲ್ಲಿ ವ್ಯಾಪಾರ ನಡೆಸುವುದು ಅಪಾಯವೆಂದು ಸಾಬೀತಾಗಿದ್ದು, ಆಭರಣದ ಅಂಗಡಿಗಳಲ್ಲಿ ಸಿಸಿಟಿವಿ ಅಳವಡಿಕೆ, ಹೆಚ್ಚುವರಿ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿ ನೇಮಕ ಮಾಡಿಕೊಂಡು ಸೂಕ್ತ ಭದ್ರತೆ ಕಲ್ಪಿಸಿಕೊಳ್ಳಬೇಕು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: "ಅನುಶ್ರೀ ಜೊತೆಗೆ ಮಾದಕ ವಸ್ತು ಸೇವನೆ ಮಾಡಿದ್ದೇವೆ": ಚಾರ್ಜ್​ಶೀಟ್​ನಲ್ಲಿ ಡ್ಯಾನ್ಸರ್ ಕಿಶೋರ್ ಹೇಳಿಕೆ ದಾಖಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.