ETV Bharat / city

ಪ್ರತಾಪ್​​ ಸಿಂಹ ವಿರುದ್ಧ ಮೈಸೂರು ವಕೀಲರ ಸಂಘದಿಂದ ಪ್ರತಿಭಟನೆ - Lawyers Association protest against Pratap Singh

ತಾಲೂಕು ಕೋರ್ಟ್​​​ನಲ್ಲಿ ಪ್ರಾಕ್ಟೀಸ್ ಮಾಡಿದ್ದ ಸಿದ್ದರಾಮಯ್ಯಗೆ ಎಕಾನಮಿ ಹೇಗೆ ಅರ್ಥವಾಗುತ್ತೆ? ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆ ಖಂಡಿಸಿ ಮೈಸೂರು ವಕೀಲರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.

Mysore Lawyers Association protest against Pratap Singh
ಪ್ರತಾಪ್​​ ಸಿಂಹ ವಿರುದ್ಧ ಮೈಸೂರು ವಕೀಲರ ಸಂಘದಿಂದ ಪ್ರತಿಭಟನೆ
author img

By

Published : Jun 7, 2022, 2:52 PM IST

ಮೈಸೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಲಾಯರ್ ಗಿರಿ ಬಗ್ಗೆ ಹಗುರವಾಗಿ ಮಾತನಾಡಿರುವ ಸಂಸದ ಪ್ರತಾಪ್ ಸಿಂಹ ಹೇಳಿಕೆ ಖಂಡಿಸಿ, ಇಂದು ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ವಕೀಲರು ಪ್ರತಿಭಟನೆ ನಡೆಸಿದರು‌.

ಪ್ರತಾಪ್​​ ಸಿಂಹ ವಿರುದ್ಧ ಮೈಸೂರು ವಕೀಲರ ಸಂಘದಿಂದ ಪ್ರತಿಭಟನೆ

ನ್ಯಾಯಾಲಯದ ಮುಂಭಾಗ ಇರುವ ಗಾಂಧೀಜಿ ಪುತ್ಥಳಿ ಮುಂದೆ ಜಮಾಯಿಸಿದ ವಕೀಲರು, ಪ್ರತಾಪ್ ಸಿಂಹ ಸಾರ್ವಜನಿಕವಾಗಿ ಕ್ಷಮೆ ಕೇಳುವವರೆಗೆ ಯಾವುದೇ ಕಾರ್ಯಕ್ರಮಗಳಿಗೂ ಅವರಿಗೆ ಆಹ್ವಾನ ನೀಡುವುದಿಲ್ಲ. ಈ ದೇಶಕ್ಕೆ ವಕೀಲರ ಕೊಡುಗೆ ಅಪಾರವಾದುದು. ಪ್ರತಾಪ್ ಸಿಂಹ ವಕೀಲ ವೃತ್ತಿಯನ್ನು ಹೀಯಾಳಿಸಿದ್ದಾರೆ ಎಂದು ಕಿಡಿಕಾರಿದರು.

ಅವರ ರಾಜಕೀಯ ಲಾಭಕ್ಕಾಗಿ ನಮಗೆ ಅವಮಾನ ಮಾಡಿದ್ದಾರೆ. ಚುನಾವಣಾ ಪ್ರಚಾರಕ್ಕೆ ಬರುವ ಬಿಜೆಪಿಯವರನ್ನು ನಮ್ಮ ಕೋರ್ಟ್ ಅವರಣಕ್ಕೆ ಬಿಡುವುದಿಲ್ಲ ಎಂದು ಎಚ್ಚರಿಕೆ ರವಾನಿಸಿದರು.

ಇದನ್ನೂ ಓದಿ: ತಾಲೂಕು ಕೋರ್ಟ್​​​ನಲ್ಲಿ ಪ್ರ್ಯಾಕ್ಟೀಸ್ ಮಾಡಿದ್ದ ಸಿದ್ದರಾಮಯ್ಯಗೆ ಎಕಾನಮಿ ಹೇಗೆ ಅರ್ಥವಾಗುತ್ತೆ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.