ಮೈಸೂರು : ಅರಮನೆಯ 4 ಸಾಕಾನೆಗಳನ್ನು ಗುಜರಾತ್‌ನ ಪುನರ್ವಸತಿ ಕೇಂದ್ರಕ್ಕೆ ಮಂಗಳವಾರ ರಾತ್ರಿ ಕಳುಹಿಸಲಾಗಿದೆ. ಅರಮನೆಯ 6 ಸಾಕಾನೆಗಳ ಪೈಕಿ ಸೀತಾ, ರೂಬಿ, ಜಮೀನಿ ಹಾಗೂ ರಾಜೇಶ್ವರಿ ಆನೆಗಳನ್ನು ಗುಜರಾತ್‌ನ ಪುನರ್ವಸತಿ ಕೇಂದ್ರಕ್ಕೆ ಮೂರು ತಿಂಗಳ ಹಿಂದೆ ಕಳುಹಿಸಲು ನಿರ್ಧಾರಿಸಲಾಗಿತ್ತು. ಆದರೆ, ದಸರಾ ಹಾಗೂ ತಾಂತ್ರಿಕ ಸಮಸ್ಯೆ ಕಾರಣಗಳಿಂದ ಕಳುಹಿಸಲು ಸಾಧ್ಯವಾಗಿರಲಿಲ್ಲ.
ಆನೆಗಳ ಆರೋಗ್ಯ ವರದಿಯನ್ನು ಕೇಂದ್ರ ಅರಣ್ಯ ಇಲಾಖೆ, ಗುಜರಾತ್ ಅರಣ್ಯ ಇಲಾಖೆ ಹಾಗೂ ರಾಜ್ಯ ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳಿಗೆ ಮೈಸೂರು ಡಿಎಫ್ಒ ಕರಿಕಾಳನ್ ಅವರು ಕಳುಹಿಸಿದ್ದರು.
ವರದಿಯನ್ನು ಪರಿಶೀಲಿಸಿದ ಅಧಿಕಾರಿಗಳು ಸಮಗ್ರವಾಗಿ ಚರ್ಚಿಸಿ, ಆನೆಗಳನ್ನು ಮಂಗಳವಾರ ರಾತ್ರಿ ಕಳುಹಿಸಿಕೊಟ್ಟಿದ್ದಾರೆ. ಅರಮನೆಯಲ್ಲಿ ಪ್ರೀತಿ ಹಾಗೂ ಚಂಚಲ್ ಎಂಬ ಆನೆಗಳನ್ನು ಉಳಿಸಿಕೊಳ್ಳಲಾಗಿದೆ.