ಮೈಸೂರು : ಸಂಸದ ಪ್ರತಾಪ್ ಸಿಂಹ ಹಾಗೂ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ನಡುವೆ ಕ್ರೆಡಿಟ್ ವಾರ್ ಮುಂದುವರೆದಿದೆ. ಇಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಕತ್ತೆ ಮತ್ತು ಹಂದಿಗಳ ಜೊತೆ ಸಂಸದ ಪ್ರತಾಪ್ ಸಿಂಹ ಕಚೇರಿಯ ವರೆಗೆ ಮೆರವಣಿಗೆ ಹೊರಟಿದ್ದರು. ಮೈಸೂರು ಅಭಿವೃದ್ಧಿಗೆ ಕಾಂಗ್ರೆಸ್ ಕೊಡುಗೆ ಏನು? ಸಂಸದರೊಂದಿಗೆ ಚರ್ಚೆ ಎಂಬ ಬ್ಯಾನರ್ ಹಿಡಿದು ಮೆರವಣಿಗೆ ಆರಂಭಿಸಿದ್ದರು. ಈ ವೇಳೆ ಪೊಲೀಸರು ವಕ್ತಾರರನ್ನು ಬಂಧಿಸಿದರು, ನಂತರ ಬಿಡುಗಡೆಗೊಳಿಸಿದರು.
ಇದನ್ನೂ ಓದಿ: ಬೆಳೆಗಳು ವಿದೇಶಕ್ಕೆ ರಫ್ತು ಮಾಡುವ ಯೋಜನೆ ಅನುಷ್ಠಾನ: ಬಿ.ಸಿ ಪಾಟೀಲ್