ETV Bharat / city

ಸಿದ್ದರಾಮಯ್ಯ ಪರ್ಸಂಟೇಜ್ ಕಿಂಗ್‌.. ಸಚಿವ ಕೆ ಎಸ್ ​ಈಶ್ವರಪ್ಪ - ಸಿದ್ದರಾಮಯ್ಯ ಆರೋಪಕ್ಕೆ ಈಶ್ವರಪ್ಪ ಪ್ರತಿಕ್ರಿಯೆ

ವಿಧಾನ ಪರಿಷತ್ ಚುನಾವಣೆಯಲ್ಲಿ 16ಕ್ಕೂ ಹೆಚ್ಚು ಸೀಟ್ ಗೆಲ್ಲುವ ವಿಶ್ವಾಸವಿದೆ. ಕಳೆದ ಬಾರಿ ಶಾಸಕರು, ಗ್ರಾಮ ಪಂಚಾಯತ್​ ಸದಸ್ಯರು ಕಮ್ಮಿ ಇದ್ದರು. ಆದರೆ, ಈಗ ನಮ್ಮ ಪಕ್ಷದ ಶಾಸಕರು, ಗ್ರಾಮ ಪಂಚಾಯತ್​ ಸದಸ್ಯರು ಜಾಸ್ತಿ ಇದ್ದಾರೆ. ಗೆಲ್ಲುವ ವಿಶ್ವಾಸವಿದೆ. ಮೈಸೂರಿನಲ್ಲಿ ರಘು ಕೌಟಿಲ್ಯ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಗೆಲ್ಲುವ ವಿಶ್ವಾಸವೂ ಇದೆ..

Minister K S Eshwarappa
ಸಚಿವ ಕೆ ಎಸ್ ಈಶ್ವರಪ್ಪ
author img

By

Published : Nov 20, 2021, 2:46 PM IST

ಮೈಸೂರು: ಪರ್ಸಂಟೇಜ್ ಕಿಂಗ್ ಸಿದ್ದರಾಮಯ್ಯ. ಪರ್ಸಂಟೇಜ್ ಸರ್ಕಾರ ಏನಿದ್ದರೂ ಕಾಂಗ್ರೆಸ್​ನದ್ದಾಗಿದೆ. ಬಿಜೆಪಿ ಸರ್ಕಾರದ್ದಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ ಎಸ್ ಈಶ್ವರಪ್ಪ (Minister K S Eshwarappa) ಅವರು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಕ್ಕೆ ಟಾಂಗ್ ನೀಡಿದರು.

ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಸಚಿವ ಕೆ ಎಸ್ ಈಶ್ವರಪ್ಪ ತಿರುಗೇಟು ನೀಡಿರುವುದು..

ಇಂದು ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಎಲ್ಲಾ ಇಲಾಖೆಯಲ್ಲಿ ಕಾಮಗಾರಿಯ ಗುತ್ತಿಗೆಗೆ 40 ಪರ್ಸೆಂಟ್ ಕಮಿಷನ್ ತೆಗೆದುಕೊಳ್ಳುತ್ತಿದ್ದಾರೆ ಎಂಬ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯೆ ನೀಡಿದರು.

ಸಿದ್ದರಾಮಯ್ಯ ಎಷ್ಟು ಪರ್ಸೆಂಟ್ ಕಮಿಷನ್ ತೆಗೆದುಕೊಂಡಿದ್ದಾರೆ ಎನ್ನುವುದಕ್ಕೆ‌‌ ಚಾಮುಂಡೇಶ್ವರಿಯಲ್ಲಿ ಅವರು ಸೋತಿದ್ದೇ ಸಾಕ್ಷಿ. ಎಷ್ಟು ಪರ್ಸೆಂಟ್ ತೆಗೆದುಕೊಳ್ಳುತ್ತಿದ್ದರು ಎಂದು ಜನ ತೀರ್ಮಾನ ಮಾಡಿ ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಉರುಳಿಸಿದ್ದಾರೆ ಎಂದು ಟಾಂಗ್​​ ನೀಡಿದರು.

'ಸಿದ್ದರಾಮಯ್ಯ ಪರ್ಸಂಟೇಜ್‌ ಕಿಂಗ್': ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಭ್ರಷ್ಟಾಚಾರ ನಡೆದಿದೆ. ಪರ್ಸಂಟೇಜ್‌ ಕಿಂಗ್ ಸಿದ್ದರಾಮಯ್ಯ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ಪರ್ಸಂಟೇಜ್‌ ಸರ್ಕಾರ : 28 ಸೀಟ್​ನಲ್ಲಿ ಬಿಜೆಪಿ‌‌ ಒಂದೇ ಒಂದು‌ ಸೀಟು ಗೆಲ್ಲಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು. ಆದರೆ, ಅವರಿಗೆ ಒಂದು ಸೀಟು ‌ಗೆಲ್ಲುವ ಸ್ಥಿತಿ ಬಂತು. ‌ಹಾಗಾಗಿ, ಪರ್ಸಂಟೇಜ್‌ ಸರ್ಕಾರ ಏನಿದ್ದರೂ ಕಾಂಗ್ರೆಸ್​ನದ್ದು ಎಂದು ಹೇಳಿದರು.

ದೂರು ನೀಡಿದರೆ ತನಿಖೆ‌ ಮಾಡಿಸುತ್ತೇವೆ : ಗುತ್ತಿಗೆದಾರರು ಪ್ರಧಾನಿಗೆ ಪತ್ರ ಬರೆದಿದ್ದಾರೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿ, ‌ಗುತ್ತಿಗೆದಾರರ ಪತ್ರದ ಬಗ್ಗೆ ನಾನು ಏನೂ ಹೇಳುವುದಿಲ್ಲ. ಸಿದ್ದರಾಮಯ್ಯರ ಆಡಳಿತ ಸಂದರ್ಭದಲ್ಲಿ ಆದ ಕಮಿಷನ್ ಪರ್ಸಂಟೇಜ್‌ ಲೆಕ್ಕ ಇಟ್ಟುಕೊಂಡು ಅವರು ಹೇಳುತ್ತಿದ್ದಾರೆ.‌

ಗುತ್ತಿಗೆದಾರರು ಏಕೆ ಪತ್ರ ಬರೆದರು, ಯಾರಿಗೆ ಪರ್ಸಂಟೇಜ್‌ ಕೊಟ್ಟರು ಎಂದು ದೂರು ನೀಡಿದರೆ ಸಂಬಂಧಪಟ್ಟ ಇಲಾಖೆಯಿಂದ ‌ತನಿಖೆ ಮಾಡಿಸುತ್ತೇವೆ. ಇಂತಹ ಇಲಾಖೆಯಲ್ಲಿ ಇಂತಹ ವ್ಯಕ್ತಿಗಳು, ಇಂತಹ ಅಧಿಕಾರಿಗಳು, ಇಂತಹ ಮಂತ್ರಿಗಳು ಇಷ್ಟು ಪರ್ಸಂಟೇಜ್‌ ತೆಗೆದುಕೊಂಡಿದ್ದಾರೆ.

ಈ ಯೋಜನೆಯಿಂದ ಎಂದು ಒಂದು ದೂರು ಕೊಟ್ಟರೆ ಖಂಡಿತ ಅವರ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ. ಒಂದು ವೇಳೆ ಗುತ್ತಿಗೆದಾರರು ತೊಂದರೆ ಅನುಭವಿಸುತ್ತಿದ್ದರೆ, ಅದನ್ನು ಸಂಬಂಧಪಟ್ಟವರ ಗಮನಕ್ಕೆ ತಂದು ಏನು ಕ್ರಮ‌ ತೆಗೆದುಕೊಳ್ಳಬೇಕೋ ತೆಗೆದುಕೊಳ್ಳುತ್ತೇವೆ‌ ಎಂದು ಭರವಸೆ ನೀಡಿದರು. ‌

ಇದನ್ನೂ ಓದಿ: ಕೇರಳ ಕಣ್ಣೂರು-ಮಂಗಳೂರು ಪ್ಯಾಸೆಂಜರ್ ರೈಲು ಪುನಾರಂಭಕ್ಕೆ ವಿದ್ಯಾರ್ಥಿಗಳ ಒತ್ತಾಯ

ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಅಧಿಕ ಭ್ರಷ್ಟಾಚಾರವಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿ, ನಮ್ಮ ಇಲಾಖೆಯಲ್ಲಿ ನೂರಾರು ಅಭಿವೃದ್ಧಿ ಕಾರ್ಯ ನಡೆಯುತ್ತಿರುವುದರಿಂದ ಸ್ವಾಭಾವಿಕವಾಗಿ ಕಣ್ಣು ‌ಬಿದ್ದಿರುತ್ತದೆ.‌ ನರೇಗಾ ಯೋಜನೆ, ಎನ್​​​ಜಿಒ ಮಿಷನ್​​ನಲ್ಲಿ ದುಡ್ಡು ತೆಗೆದುಕೊಳ್ಳುತ್ತಿದ್ದಾರಾ? ಶೌಚಾಲಯ ಯೋಜನೆಯಲ್ಲಿ ದುಡ್ಡು ತೆಗೆದುಕೊಳ್ಳುತ್ತಿದ್ದಾರಾ ಎಂದು ಸರಿಯಾಗಿ ಹೇಳಬೇಕಲ್ವ?.

ನಾವು ಸ್ವಚ್ಛವಾಗಿದ್ದೇವೆ,‌ ಸ್ಪಷ್ಟವಾಗಿ ಕೆಲಸ ಮಾಡುತ್ತಿದ್ದೇವೆ ಎಂದರು. ರಾಜ್ಯದ ಜನರು, ಚುನಾವಣೆಗಳು ಅಳತೆಗೋಲು. ‌ಎಲ್ಲ ಚುನಾವಣೆಯಲ್ಲಿ ಜನರು ಗೆಲ್ಲಿಸಿಕೊಡುತ್ತಿದ್ದಾರೆ.‌ ಹಾಗಾಗಿ, ಯಾರೋ‌ ಆರೋಪ‌ ಮಾಡಿದರೆ ಅದನ್ನು ಸೀರಿಯಸ್‌ ಆಗಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ ಎಂದು ಹೇಳಿದರು.

ಗ್ರಾಮೀಣಾಭಿವೃದ್ಧಿ ಕೆಲಸ ಮಾಡಿದ್ದೇವೆಂಬ ಶಂಖ ಊದುತ್ತಿದ್ದೇವೆ : ಬಿಜೆಪಿಯವರು ಶಂಖ‌ ಊದುತ್ತಿದ್ದಾರೆ ಎಂಬ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿ, ಗ್ರಾಮೀಣಾಭಿವೃದ್ಧಿ ಕೆಲಸ ಮಾಡಿದ್ದೇವೆ ಎಂಬ ಶಂಖ ಊದುತ್ತಿದ್ದೇವೆ. ಅದಕ್ಕೋಸ್ಕರ‌ ಮತ ನೀಡಿ ಎಂದು ಕೇಳುತ್ತಿದ್ದೇವೆ.‌ ನೇತೃತ್ವ ಇದೆ ಎಂದು ಶಂಖ ಊದುತ್ತಿದ್ದೇವೆ.

ನಿಮಗೆ ಶಂಖ ಊದಲು ಜನ ಇಲ್ಲ. ಅಭಿವೃದ್ಧಿ ಕೆಲಸವನ್ನು ಮಾಡಿಲ್ಲ ಎಂದು ಆರೋಪಿಸಿದರು. ಅಲ್ಲದೇ ಶಂಖ ಊದುತ್ತಿದ್ದೇವೆ ಎಂಬ ಬೊಗಳೆ ಹೇಳುವುದು ಬಿಡಿ ಕುಮಾರಸ್ವಾಮಿ ಎಂದರು. ಇನ್ನೂ ಚುನಾವಣೆಯಲ್ಲಿ ಎಷ್ಟು ಸೀಟು ಗೆಲ್ಲುತ್ತಾರೆ ನೋಡೋಣ, ಆಗ ಗೊತ್ತಾಗುತ್ತೆ ಎಂದು ಹೇಳಿದರು.

ಪರಿಷತ್ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ : ವಿಧಾನ ಪರಿಷತ್ ಚುನಾವಣೆಯಲ್ಲಿ 16ಕ್ಕೂ ಹೆಚ್ಚು ಸೀಟ್ ಗೆಲ್ಲುವ ವಿಶ್ವಾಸವಿದೆ. ಕಳೆದ ಬಾರಿ ಶಾಸಕರು, ಗ್ರಾಮ ಪಂಚಾಯತ್​ ಸದಸ್ಯರು ಕಮ್ಮಿ ಇದ್ದರು. ಆದರೆ, ಈಗ ನಮ್ಮ ಪಕ್ಷದ ಶಾಸಕರು, ಗ್ರಾಮ ಪಂಚಾಯತ್​ ಸದಸ್ಯರು ಜಾಸ್ತಿ ಇದ್ದಾರೆ. ಗೆಲ್ಲುವ ವಿಶ್ವಾಸವಿದೆ. ಮೈಸೂರಿನಲ್ಲಿ ರಘು ಕೌಟಿಲ್ಯ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಗೆಲ್ಲುವ ವಿಶ್ವಾಸವೂ ಇದೆ.

ಪ್ರಧಾನಿ ಮೋದಿ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹಾಗೂ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗ್ರಾಮೀಣಾಭಿವೃದ್ಧಿಗೆ ನೀಡಿರುವ ಯೋಜನೆಗಳು ಹಾಗೂ ಅಭಿವೃದ್ಧಿ ಕಾರ್ಯಗಳೇ ನಮಗೆ ಚುನಾವಣೆ ಗೆಲುವಿಗೆ ಶ್ರೀರಕ್ಷೆ ಎಂದು ಕೆ ಎಸ್ ಈಶ್ವರಪ್ಪ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.