ಮೈಸೂರು: ಲೋಕ ಸಭೆ ಚುನಾವಣೆ ಹಿನ್ನೆಲೆ ರೌಡಿಶೀಟರ್ಗಳ ಮನೆ ಮೇಲೆ ಪೊಲೀಸರು ದಾಳಿ ನಡೆಸಿ, ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದು, ರೌಡಿ ಶೀಟರ್ಗಳ ಪರೇಡ್ ನಡೆಸಿದ್ದಾರೆ.
ನಗರದ ಸಿಎಆರ್ ಮೈದಾನದಲ್ಲಿ ಪೊಲೀಸರು 86 ರೌಡಿ ಶೀಟರ್ಗಳ ಪರೇಡ್ ನಡೆಸಿದ್ದು, ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ,ಈ ವೇಳೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು ಎಂದು ಕಾನೂನು ಹಾಗೂ ಸುವ್ಯವಸ್ಥೆ ವಿಭಾಗದ ಡಿಸಿಪಿ ಮುತ್ತುರಾಜ್ ಎಚ್ಚರಿಕೆ ನೀಡಿದರು.
ಮತದಾರರು ಯಾವುದೇ ಭಯವಿಲ್ಲದೇ ಮತಗಟ್ಟೆಗಳಿಗೆ ಬರಬೇಕು. ಚುನಾವಣೆ ಹಿನ್ನೆಲೆಯಲ್ಲಿ ಅವರಿಗೆ ಭೀತಿ ಹುಟ್ಟಿಸಬಾರದು, ದುರ್ಬಲರ ಮೇಲೆ ಒತ್ತಡ ಹೇರಬಾರದು. ರಾಜಕೀಯವಾಗಿ ಬಳಸಿಕೊಳ್ಳಲು ಅವಕಾಶ ಕೊಡಬಾರದು. ನಿಮ್ಮ ಮತ ನೀವು ಚಲಾಯಿಸಿ, ಆದ್ರೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗವಹಿಸಬೇಡಿ. ನಿಮ್ಮ ನಡವಳಿಕೆ ಬಗ್ಗೆ ಎಚ್ಚರವಿರಲಿ, ಜನಗಳು ಹೆದರದಂತೆ ವೇಷ ಭೂಷಣಗಳಲ್ಲಿ ಬದಲಾವಣೆ ಆಗಬೇಕು. ಜನಗಳಿಗೆ ಬೆದರಿಸಬಾರದು, ಪೊಲೀಸ್ ಇಲಾಖೆ ನಿಮ್ಮ ಮೇಲೆ ಹದ್ದಿನ ಕಣ್ಣಿದೆ ಎಂದು ರೌಡಿಗಳಿಗೆ ಬುದ್ಧಿವಾದ ಹೇಳಿ ಎಚ್ಚರಿಕೆ ನೀಡಿದರು.