ಮೈಸೂರು: ಕಾಡಂಚಿನ ಗ್ರಾಮಗಳಲ್ಲಿನ ಜನರಿಗೆ ಕಾಡುಪ್ರಾಣಿಗಳ ಕಾಟ ತಪ್ಪಿದ್ದಲ್ಲ. ನಿನ್ನೆ ಆಹಾರ ಹುಡುಕಿಕೊಂಡು ನಾಡಿಗೆ ಬಂದಿದ್ದ ಚಿರತೆಯೊಂದು ಮನೆಯೊಳಗೆ ನುಗ್ಗಿದ ಘಟನೆ ಮೈಸೂರಿನಲ್ಲಿ ನಡೆದಿದೆ.
ನಂಜನಗೂಡು ತಾಲೂಕಿನ ಯಡಹಳ್ಳ ಗ್ರಾಮದಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದೆ. ನಗು ಜಲಾಶಯದ ಹಿನ್ನೀರು ಪ್ರದೇಶದ ಕಾಡಂಚಿನಲ್ಲಿರುವ ಯಡಹಳ್ಳಿ ಗ್ರಾಮದ ರೈತ ಚೆನ್ನಪ್ಪ ಅವರ ಮನೆಗೆ ಚಿರತೆ ನುಗ್ಗಿ, ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡಿದೆ. ಚಿರತೆ ಮನೆಯೊಳಗೆ ಬಂದ ತಕ್ಷಣ ಕುಟುಂಬಸ್ಥರೆಲ್ಲರೂ ಹೊರ ಓಡಿ ಹೋಗಿದ್ದಾರೆ. ಬಳಿಕ ತಕ್ಷಣವೇ ಹೊರಗಡೆಯಿಂದ ಬಾಗಿಲು ಹಾಕಿದ್ದಾರೆ.
ಸದ್ಯ ಮನೆಯ ಒಳಗೆ ಚಿರತೆ ಓಡಾಡುತ್ತಿದೆ. ಅರಣ್ಯಾಧಿಕಾರಿಗಳಿಗೆ ಕುಟುಂಬಸ್ಥರು ಚಿರತೆ ಮನೆಯೊಳಗೆ ಸೆರೆಯಾದ ಬಗ್ಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಉದ್ಯೋಗಿನಿ, ಆಧಾರ ಯೋಜನೆಗಳಲ್ಲಿ ನಿಗದಿಪಡಿಸಿದ ಭೌತಿಕ ಹಾಗೂ ಆರ್ಥಿಕ ಗುರಿ ಎಷ್ಟು?