ETV Bharat / city

ಕಂತಿನ ಹಣ ಕಟ್ಟಿಲ್ಲ ಎಂದು ಫೈನಾನ್ಸ್ ಕಂಪನಿಯಿಂದ ಮನೆಗೆ ಬೀಗ.. ಮಹಿಳೆಯ ಪರದಾಟ - ಕಂತಿನ ಹಣ ಕಟ್ಟಿಲ್ಲ ಎಂದು ಫೈನಾನ್ಸ್ ಕಂಪನಿಯಿಂದ ಮನೆಗೆ ಬೀಗ

ಎರಡು ತಿಂಗಳ ಕಂತಿನ ಹಣ ಕಟ್ಟಿಲ್ಲ ಎಂದು ಖಾಸಗಿ ಮೈಕ್ರೋ ಫೈನಾನ್ಸ್ ಕಂಪನಿ ಬಡ ಮಹಿಳೆಯ ಮನೆಗೆ ಬೀಗ ಹಾಕಿದ್ದು, ಈಗ ಆ ಮಹಿಳೆ ತನ್ನ ಮನೆ ಒಳಗೆ ಹೋಗಲು ಜೀವನ ಸಾಗಿಸಲು ಹರಸಾಹಸ ಪಡುತ್ತಿದ್ದಾರೆ.

ಮನೆಗೆ ಬೀಗ
author img

By

Published : Nov 19, 2019, 3:50 PM IST

ಮೈಸೂರು: ಎರಡು ತಿಂಗಳ ಕಂತಿನ ಹಣ ಕಟ್ಟಿಲ್ಲ ಎಂದು ಖಾಸಗಿ ಮೈಕ್ರೋ ಫೈನಾನ್ಸ್ ಕಂಪನಿ ಬಡ ಮಹಿಳೆಯ ಮನೆಗೆ ಬೀಗ ಹಾಕಿ ಅಮಾನವೀಯತೆ ಮೆರೆದಿರುವ ಘಟನೆ ನಂಜನಗೂಡು ತಾಲೂಕಿನ ತಗಡೂರು ಗ್ರಾಮದಲ್ಲಿ ನಡೆದಿದೆ.

ಕಂತಿನ ಹಣ ಕಟ್ಟಿಲ್ಲ ಎಂದು ಫೈನಾನ್ಸ್ ಕಂಪನಿಯಿಂದ ಮನೆಗೆ ಬೀಗ..

ಜಿಲ್ಲೆಯ ನಂಜನಗೂಡು ತಾಲೂಕಿನ ತಗಡೂರು ಗ್ರಾಮದ ಪದ್ಮ ಹಾಗೂ ಸುಶೀಲಾ ಎಂಬುವರ ಮನೆಗೆ ಬೀಗ ಹಾಕಿದ್ದಲ್ಲದೇ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಮಹಿಳೆಯರು ಆರೋಪಿಸಿದ್ದಾರೆ.

ಗ್ರಾಮಶಕ್ತಿ ಮೈಕ್ರೋ ಫೈನಾನ್ಸ್ ಕಂಪನಿಯಿಂದ ಗುಂಪು ಸಾಲ ಪಡೆದಿದ್ದರು. 11 ತಿಂಗಳ ಕಂತಿನ ಹಣವನ್ನು ಈಗಾಗಲೇ ಪಾವತಿಸಿದ್ದು, ಉಳಿದ ಕಂತಿನ ಹಣವನ್ನು ಪಾವತಿ ಮಾಡಿರಲಿಲ್ಲ. ಹೀಗಾಗಿ ಮನೆಗೆ ಬೀಗ ಹಾಕಿದ ಕಂಪನಿಯವರು ಅಮಾನವೀಯವಾಗಿ ವರ್ತಿಸಿದ್ದು, ಈಗ ಆ ಮಹಿಳೆ ತನ್ನ ಮನೆ ಒಳಗೆ ಹೋಗಲು ಹರಸಾಹಸ ಪಡುತ್ತಿದ್ದಾರೆ. ಮನೆಯ ಹೊರಗೆ ಇರುವ ಮೆಟ್ಟಿಲುಗಳ ಸಹಾಯದಿಂದ ಹತ್ತಿ ಮನೆಯ ಒಳಗೆ ಏಣಿ ಸಹಾಯದಿಂದ ಇಳಿದು ಭಯದಿಂದಲೇ ಜೀವನ ಸಾಗಿಸುತ್ತಿದ್ದಾರೆ.

ಇನ್ನು, ಘಟನೆಗೆ ಸಂಬಂಧಿಸಿದಂತೆ ಯಾವುದೇ ದೂರು ದಾಖಲಾಗಿಲ್ಲ.

Intro:ಮೈಸೂರು: ಎರಡು ತಿಂಗಳ ಕಂತಿನ ಹಣ ಕಟ್ಟಿಲ್ಲ ಎಂದು ಖಾಸಗಿ ಮೈಕ್ರೋ ಫೈನಾನ್ಸ್ ಕಂಪನಿ ಬಡ ಮಹಿಳೆಯ ಮನೆಗೆ ಬೀಗ ಹಾಕಿ ಅಮಾನವೀಯತೆ ಮೆರೆದಿರುವ ಘಟನೆ ನಂಜನಗೂಡು ತಾಲ್ಲೂಕಿನ ತಗಡೂರು ಗ್ರಾಮದಲ್ಲಿ ನಡೆದಿದೆ.Body:

ಜಿಲ್ಲೆಯ ನಂಜನಗೂಡು ತಾಲ್ಲೂಕಿನ ತಗಡೂರು ಗ್ರಾಮದ ದಲಿತ ಕುಟುಂಬದ ಪದ್ಮ ಹಾಗೂ ಸುಶೀಲಾ ಕಿರುಕುಳಕ್ಕೆ ಒಳಗಾದವರು.
ಗ್ರಾಮಶಕ್ತಿ ಮೈಕ್ರೋ ಫೈನಾನ್ಸ್ ಕಂಪನಿಯಿಂದ ಗುಂಪು ಸಾಲ ಪಡೆದಿದ್ದರು, ಈ ಸಾಲವನ್ನು
೧೦ ತಿಂಗಳ ಕಂತಿನ ಹಣವನ್ನು ಈಗಾಗಲೇ ಪಾವತಿಸಿದ್ದು, ಉಳಿದ ೨ ಕಂತಿನ ಹಣವನ್ನು ಪಾವತಿ ಮಾಡಿರಲಿಲ್ಲ,
ಅದಕ್ಕೆ ಉಳಿದ ಕಂತಿನ ಹಣವನ್ನು ಕಟ್ಟಿಲ್ಲ ಎಂದು ಮನೆಗೆ ಬೀಗ ಹಾಕಿದ ಕಂಪನಿಯವರು ಅಮಾನವೀಯವಾಗಿ ವರ್ತಿಸಿದ್ದು, ಈಗ ಆ ಮಹಿಳೆ ತನ್ನ ಮನೆಗೆ ಹೋಗಲು ಹರಸಾಹಸ ಪಡುತ್ತಿದ್ದಾರೆ. ಮನೆಯ ಹೊರಗೆ ಇರುವ ಮೆಟ್ಟಿಲು ಸಹಾಯದಿಂದ ಹತ್ತಿ ಮನೆಯ ಒಳಗೆ ಏಣಿ ಸಹಾಯದಿಂದ ಇಳಿದು ಭಯದಿಂದಲೇ ಜೀವನ ಸಾಗಿಸುತ್ತಿದ್ದಾರೆ. ಮನೆಗೆ ಯಾವುದೇ ವಿಧದ ಪದಾರ್ಥಗಳು ಬೇಕಿದ್ದರೆ ಏಣಿ ಮುಖಾಂತರವೇ ಪ್ರವೇಶಿಸಿಬೇಕಾದ ದುರ್ಗತಿಗೆ ಬಂದು ನಿಂತಿದೆ.
ಫೈನಾನ್ಸ್ ಸಿಬ್ಬಂದಿಗಳ ಅವಾಚ್ಯ ಶಬ್ದಗಳಿಂದ ನಿಂದನೆಗೆ ಅಟ್ಟಹಾಸಕ್ಕೆ ಬಡ ದಲಿತ ಮಹಿಳೆಯರು ನಲುಗಿದ್ದು ಸಂಬಂಧಪಟ್ಟ ಯಾವ ಅಧಿಕಾರಿಗಳು ಸ್ಪಂದಿಸದೆ ನಿರ್ಲಕ್ಷ್ಯ ವಹಿಸಿದ್ದು, ನೊಂದ ಮಹಿಳೆಯ ತನ್ನ ನೋವನ್ನು ಹೇಳಿಕೊಂಡಿದ್ದಾರೆ. ‌ಈ ಘಟನೆಗೆ ಸಂಬಂಧಿಸಿದಂತೆ ಯಾವುದೇ ದೂರು ದಾಖಲಾಗಿಲ್ಲ.Conclusion:

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.