ಮೈಸೂರು/ಹುಬ್ಬಳ್ಳಿ: ರಾಜ್ಯಾದ್ಯಂತ ಕೊರೊನಾ ಲಾಕ್ಡೌನ್ನಿಂದ ಕಂಗಾಲಾಗಿದ್ದ ಕ್ಷೌರಿಕರು ಇಂದಿನಿಂದ ಅಂಗಡಿಗಳನ್ನು ತೆರೆದಿದ್ದಾರೆ. ಎರಡು ತಿಂಗಳ ನಂತರ ಎಂದಿನಂತೆ ಸಲೂನ್ ಶಾಪ್‌ಗಳು ತೆರೆಯಲಾಗಿದ್ದು, ಗ್ರಾಹಕರ ಮೊಗದಲ್ಲಿ ಸಂತಸ ಮೂಡಿದೆ.
ಮೈಸೂರಿನಲ್ಲಿ ಓಪನ್ ಆದ ಹೇರ್ ಕಟಿಂಗ್ ಶಾಪ್:
ಮೈಸೂರಿನಲ್ಲಿ ಸಹ ಸಲೂನ್ ಶಾಪ್ ತೆರೆಯಲಾಗಿದ್ದು, ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತೆ ವಹಿಸಲಾಗಿದೆ. ಗ್ರಾಹಕರನ್ನು ಮುಟ್ಟಿದ ನಂತರ ಕಣ್ಣು, ಮೂಗು, ಬಾಯಿ ಮುಟ್ಟಿಕೊಳ್ಳದೆ ಜಾಗ್ರತೆಯಿಂದ ಕೆಲಸ ಮಾಡಲಾಗುತ್ತಿದೆ. ಮಾಸ್ಕ್, ಸ್ಯಾನಿಟೈಸರ್ ಬಳಸುವ ಮೂಲಕ ಕ್ಷೌರಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ.
ಹುಬ್ಬಳ್ಳಿಯಲ್ಲೂ ಬಾಗಿಲು ತೆರೆದ ಸಲೂನ್ ಅಂಗಡಿಗಳು:
ಜಿಲ್ಲೆಯಲ್ಲಿ ಸುಮಾರು 50 ದಿನಗಳ ಬಳಿಕ ಸಲೂನ್ ಸೆಂಟರ್ ಪ್ರಾರಂಭವಾಗಿದ್ದು, ಜನರು ಕಟಿಂಗ್ ಮಾಡಿಸಿಕೊಳ್ಳಲು ಬರುತ್ತಿದ್ದಾರೆ. ಇದರಿಂದ ಸಲೂನ್ ಮಾಲೀಕರು ಹಾಗೂ ಕ್ಷೌರಿಕರು, ಗ್ರಾಹಕರು ಸರ್ಕಾರದ ನಿಯಮಗಳಂತೆ ಒಬ್ಬೊಬ್ಬರಾಗಿ ಬರುವಂತೆ ಸೂಚನೆ ನೀಡಿದ್ದಾರೆ. ಇನ್ನೂ ಮುಂಜಾಗ್ರತಾ ಕ್ರಮವಾಗಿ ಕಟಿಂಗ್ ಸಾಮಗ್ರಿಗಳನ್ನು ಸ್ಯಾನಿಟೈಸರ್ ನಿಂದ ಸ್ವಚ್ಚಗೊಳಿಸಿ, ಮಾಸ್ಕ್ ಹಾಕಿಕೊಂಡು ಕಟಿಂಗ್ ಮಾಡುತ್ತಿರುವ ದೃಶ್ಯ ಎಲ್ಲೆಡೆ ಕಂಡು ಬರುತ್ತಿದೆ.
ವಿಜಯಪುರ ನಗರದಲ್ಲಿ 200 ಕ್ಕೂ ಅಧಿಕ ಕಟಿಂಗ್ ಶಾಪ್‌ಗಳು ಇಂದು ಆರಂಭಗೊಂಡಿದ್ದು, ಕಳೆದ ಒಂದೂವರೆ ತಿಂಗಳಿಂದ ಕಟಿಂಗ್ ಮಾಡಿಸಿಕೊಳ್ಳಲು ಶಾಪ್‌ಗಳತ್ತ ಧಾವಿಸುತ್ತಿದ್ದಾರೆ. ಹಲವು ದಿನಗಳಿಂದ ಹೇರ್ ಕಟ್ ಮಾಡಿಸಿಕೊಳ್ಳಲು ಬೆಳಗ್ಗೆ 7 ಗಂಟೆಯಿಂದ ಜನರು ಆಗಮಿಸುತ್ತಿದ್ದಾರೆ. ಇನ್ನು ಜಿಲ್ಲೆಯಲ್ಲಿ 60 ಜನರಿಗೆ ಕೊರೊನಾ ವೈರಸ್ ತಗುಲಿದ್ದ ಪರಿಣಾಮ ಹೆಚ್ಚು ಜನರು ಹೇರ್ ಕಟ್ ಮಾಡಿಸಿಕೊಳ್ಳಲು ಹಿಂದೂ ಮುಂದು ನೋಡುವಂತಾಗಿದೆ.