ಮೈಸೂರು: ಮೈಸೂರು-ಯಲಹಂಕ ನಡುವಿನ ನೂತನ ಮೆಮು ರೈಲು ಸಂಚಾರಕ್ಕೆ ಸಂಸದ ಪ್ರತಾಪ್ ಸಿಂಹ ಸೋಮವಾರ ರಾತ್ರಿ ಚಾಲನೆ ನೀಡಿದರು.
ಮೈಸೂರು ರೈಲ್ವೆ ನಿಲ್ದಾಣದಿಂದ ಪ್ರತಿದಿನ 10.20 ಕ್ಕೆ ಹೊರಡುವ ರೈಲು ಗಾಡಿಯು, ರಾತ್ರಿ 1.30ಕ್ಕೆ ಯಲಹಂಕ ತಲುಪಲಿದೆ. ಮತ್ತೆ ರಾತ್ರಿ 2.30ಕ್ಕೆ ಯಲಹಂಕದಿಂದ ಹೊರಟು ಮುಂಜಾನೆ 5.30ಕ್ಕೆ ಮೈಸೂರು ತಲುಪಲಿದೆ. ಮೈಸೂರು, ಮಂಡ್ಯ, ಕೆಂಗೇರಿ, ಕೆಎಸ್‌ಆರ್ ಬೆಂಗಳೂರು, ಯಶವಂತಪುರ, ಯಲಹಂಕ ನಿಲ್ದಾಣದಲ್ಲಿ ಮಾತ್ರ ರೈಲು ನಿಲುಗಡೆಯಾಗಲಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಮೈಸೂರು-ಬೆಂಗಳೂರು ಪ್ರಯಾಣಿಕರಿಗೆ, ಅದರಲ್ಲೂ ತಡರಾತ್ರಿ ಪ್ರಯಾಣ ಮಾಡುವವರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.