ETV Bharat / city

ವೈದ್ಯರ ಪ್ರತಿಭಟನೆ: ಖಾಸಗಿ ಆಸ್ಪತ್ರೆಗಳು ಬಂದ್, ಕೆ.ಆರ್.ಆಸ್ಪತ್ರೆಯಲ್ಲಿ ಹೆಚ್ಚಿದ ಒತ್ತಡ - undefined

ಕೋಲ್ಕತ್ತದಲ್ಲಿ ವೈದ್ಯರ ಮೇಲೆ ಹಲ್ಲೆ ಖಂಡಿಸಿ ಇಂದು ದೇಶಾದ್ಯಂತ ಬಂದ್​​ಗೆ ಐಎಂಎ ಕರೆ ನೀಡಿದ್ದು, ಖಾಸಗಿ ಆಸ್ಪತ್ರೆಗಳು ಬಂದ್ ಆಗಿರುವುದರಿಂದ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಹೊರರೋಗಿಗಳು ಬರುತ್ತಿದ್ದಾರೆ.

ಕೆ.ಆರ್.ಆಸ್ಪತ್ರೆ
author img

By

Published : Jun 17, 2019, 11:54 AM IST

ಮೈಸೂರು: ಪಶ್ಚಿಮ ಬಂಗಾಳದ ಕೋಲ್ಕತ್ತ ಆಸ್ಪತ್ರೆಯೊಂದರಲ್ಲಿ ಕಿರಿಯ ವೈದ್ಯರ ಮೇಲಾದ ಹಲ್ಲೆ ಖಂಡಿಸಿ ಭಾರತೀಯ ವೈದ್ಯರ ಸಂಘ (ಐಎಂಎ) ದೇಶವ್ಯಾಪಿ ಕರೆ ನೀಡಿರುವ ಬಂದ್​​ಗೆ ವ್ಯಾಪಕ ಬೆಂಬಲ ಸಿಕ್ಕಿದ್ದು, ಮೈಸೂರಿನ ಐಎಂಎ ಜಿಲ್ಲಾ ಘಟಕ ಹಾಗೂ ಖಾಸಗಿ ಆಸ್ಪತ್ರೆಗಳೂ ಸಂಪೂರ್ಣ ಬೆಂಬಲ ನೀಡಿವೆ.

ನಗರದ ಖಾಸಗಿ ಆಸ್ಪತ್ರೆಗಳು ಬಂದ್ ಆಗಿರುವುದರಿಂದ ಹೊರರೋಗಿಗಳು ಚಿಕಿತ್ಸೆ ಕೆ.ಆರ್.ಆಸ್ಪತ್ರೆಗೆ ಬರುತ್ತಿದ್ದಾರೆ. ಕೆ.ಆರ್.ಆಸ್ಪತ್ರೆಯಲ್ಲಿ ಎಲ್ಲ ಕಿರಿಯ ವೈದ್ಯರು ಬಂದ್ ಬೆಂಬಲಿಸಿ ಕರ್ತವ್ಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಹಿರಿಯ ವೈದ್ಯರು ಸೇವೆಯಲ್ಲಿ ತೊಡಗಿದ್ದಾರೆ. ಹೀಗಾಗಿ ರೋಗಿಗಳಿಗೆ ತೊಂದರೆಯಾಗಬಾರದೆಂದು ಒಪಿಡಿ ಬಂದ್ ಮಾಡಿಲ್ಲ.

ಕೆ.ಆರ್.ಆಸ್ಪತ್ರೆ

ಈ ಸಂಬಂಧ ಈಟಿವಿ ಭಾರತ್ ಜೊತೆ ಮಾತನಾಡಿದ ಡಾ.ರಾಜೇಶ್ ಕುಮಾರ್, ಮುಷ್ಕರಕ್ಕೆ ಕಿರಿಯ ವೈದ್ಯರು ಬೆಂಬಲ ನೀಡಿದ್ದು, ಹಿರಿಯ ವೈದ್ಯರು ಕರ್ತವ್ಯದಲ್ಲಿ ತೊಡಗಿದ್ದಾರೆ. ರೋಗಿಗಳಿಗೆ ತೊಂದರೆ ಎದುರಾಗದಂತೆ ಎಚ್ಚರಿಕೆ ವಹಿಸಲಾಗಿದೆ ಎಂದರು.

Intro:ವೈದ್ಯರ ಪ್ರತಿಭಟನೆ

Body:ವೈದ್ಯರ ಪ್ರತಿಭಟನೆ

Conclusion:ವೈದ್ಯರ ಪ್ರತಿಭಟನೆ ಖಾಸಗಿ ಆಸ್ಪತ್ರೆಗಳು ಬಂದ್, ಕೆ.ಆರ್.ಆಸ್ಪತ್ರೆಯಲ್ಲಿ ಹೆಚ್ಚಿದ ಒತ್ತಡ
ಮೈಸೂರು: ಪಶ್ಚಿಮ ಬಂಗಾಳದ ಕೊಲ್ಕತ್ತ ಆಸ್ಪತ್ರೆಯೊಂದರಲ್ಲಿ ಕಿರಿಯ ವೈದ್ಯರ ಮೇಲೆ ಹಲ್ಲೆ ಖಂಡಿಸಿ ಭಾರತೀಯ ವೈದ್ಯರ ಸಂಘ(ಐಎಂಎ) ದೇಶ ವ್ಯಾಪಿ ಕರೆ ನೀಡಿರುವ ಬಂದ್ ವ್ಯಾಪಕ ಬೆಂಬಲವಾಗಿದ್ದು, ಮೈಸೂರಿನ ಐಎಂಎ ಜಿಲ್ಲಾ ಘಟಕ ಹಾಗೂ ಖಾಸಗ ಆಸ್ಪತ್ರೆಗಳು ಸಂಪೂರ್ಣ ಬೆಂಬಲ ನೀಡಿವೆ.
ನಗರದ ಖಾಸಗಿ ಆಸ್ಪತ್ರೆಗಳು ಬಂದ್ ಆಗಿರುವುದರಿಂದ ಹೊರರೋಗಿಗಳು ಚಿಕಿತ್ಸೆಗಾಗಿ ಪರದಾಡಿ ಕೆ.ಆರ್.ಆಸ್ಪತ್ರೆಗೆ ದಾಗುಡಿ ಇಡುತ್ತಿದ್ದಾರೆ.ಇತ್ತ ಕೆ.ಆರ್.ಆಸ್ಪತ್ರೆಯಲ್ಲಿ ಎಲ್ಲ ಕಿರಿಯ ವೈದ್ಯರು ಬಂದ್ ಬೆಂಬಲಿಸಿ ಕರ್ತವ್ಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಎಲ್ಲ ಹಿರಿಯ ವೈದ್ಯರು ಸೇವೆ ತೊಡಗಿಕೊಂಡಿದ್ದಾರೆ.ರೋಗಿಗಳಿಗೆ ತೊಂದರೆಯಾಗದಂತೆ ಒಪಿಡಿ ಬಂದ್ ಮಾಡಲಾಗಿಲ್ಲ. ಅಲ್ಲದೇ ಮುನ್ನೆಚ್ಚರಿಕೆ ಕ್ರಮವಾಗಿ ವೈದ್ಯರು ರೆಡಿಯಾಗಿದ್ದಾರೆ.
ಈ ಸಂಬಂಧ 'ಈಟಿವಿ ಭಾರತ್' ನೊಂದಿಗೆ ಮಾತನಾಡಿದ ಆರ್ ಎಂಒ ಡಾ.ರಾಜೇಶ್ ಕುಮಾರ್, ಮುಷ್ಕರಕ್ಕೆ ಕಿರಿಯ ವೈದ್ಯರು ಬೆಂಬಲ ನೀಡಿದ್ದು, ಹಿರಿಯ ವೈದ್ಯರು ಕರ್ತವ್ಯದಲ್ಲಿ ತೊಡಗಿದ್ದಾರೆ.ರೋಗಿಗಳಿಗೆ ತೊಂದರೆ ಎದುರಾಗದಂತೆ ಎಚ್ಚರಿಕೆ ವಹಿಸಲಾಗಿದೆ ಎಂದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.