ಮೈಸೂರು: ಕಾರು ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ, ಸಹೋದರರಿಬ್ಬರು ಮೃತಪಟ್ಟಿರುವ ದಾರುಣ ಘಟನೆ ಇಲವಾಲ ಸಮೀಪದ ಹೊಸರಾಮನಹಳ್ಳಿ ಸೇತುವೆ ಬಳಿ ಭಾನುವಾರ ತಡರಾತ್ರಿ ನಡೆದಿದೆ.
ಹೊಸಕೋಟೆ ಗ್ರಾಮದ ವಿಶ್ವ (21) ಮತ್ತು ವಿಷ್ಣು(19) ಮೃತ ಸಹೋದರರು ಎಂದು ಗುರುತಿಸಲಾಗಿದೆ. ಹೊಸಕೋಟೆಯಿಂದ ಬೈಕ್ ಮೂಲಕ ಕೆ.ಆರ್.ನಗರಕ್ಕೆ ತೆರಳುತ್ತಿದ್ದ ವೇಳೆ ಎದುರಿಗೆ ಬರುತ್ತಿದ್ದ ಕಾರು ಬೈಕ್ಗೆ ಗುದ್ದಿದೆ. ಗುದ್ದಿದ ರಭಸಕ್ಕೆ ಓರ್ವ ಕೆರೆಗೆ ಬಿದ್ದಿದ್ದು, ಮತ್ತೊರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಸದ್ಯ ಕಾವೇರಿ ಹಿನ್ನೀರಿನಲ್ಲಿ ಪೊಲೀಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ಮೃತ ದೇಹ ಶೋಧಕ್ಕೆ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂಬಂಧ ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Watch - ಕ್ರಿಸ್‌ಮಸ್ ಮೆರವಣಿಗೆಯಲ್ಲಿದ್ದ ಜನರ ಮೇಲೆ ಹರಿದ ಕಾರು.. 20 ಮಂದಿಗೆ ತೀವ್ರ ಗಾಯ, ಕೆಲವರ ಸಾವು