ಮೈಸೂರು: ಲಾಕ್ಡೌನ್ ಸಡಿಲಿಕೆಯಿಂದ ಆಟೋಗಳ ಸಂಚಾರಕ್ಕೆ ಅನುಮತಿ ಕೊಟ್ಟಿದ್ದರು, ಪ್ರಯಾಣಿಕರಿಲ್ಲದೇ ಚಾಲಕರು ಪರದಾಡುವಂತಾಗಿದೆ.
ಪ್ರಯಾಣಿಕರಿಲ್ಲದೇ ಆಟೋಗಳು ಸ್ಟ್ಯಾಂಡ್ ನಲ್ಲಿಯೇ ನಿಂತುಕೊಂಡಿದ್ದು, ಮಹಾಮಾರಿ ಕೊರೊನಾ ದಿಂದ ಭಯಭೀತರಾಗಿರುವ ಪ್ರಯಾಣಿಕರು ಆಟೋಗಳ ಬಳಿ ಬರುವುದನ್ನು ಕಡಿಮೆ ಮಾಡಿದ್ದಾರೆ. ಆದರೆ, ಪ್ರಯಾಣಿಕರು ಬರುತ್ತಾರೆ ಎಂಬ ಉತ್ಸುಕದಲ್ಲಿದ್ದ ಆಟೋ ಚಾಲಕರಿಗೆ ಭಾರೀ ನಿರಾಸೆಯಾಗಿದೆ.
ಸಾಕಷ್ಟು ಸಮಸ್ಯೆಗಳು, ನೋವಿನ ನಡುವೆ ಆಟೋಗಳ ಸೇವೆ ಆರಂಭವಾಗಿದೆ. ಮೈಸೂರಿನದ್ಯಾಂತ ಬೆರಳೆಣಿಕೆಯಷ್ಟು ಆಟೋಗಳು ರಸ್ತೆಗಿಳಿದಿವೆ. ಲಾಕ್ಡೌನ್ ಸಡಿಲಿಕೆಯಾದ್ರೂ ಪ್ರಯಾಣಿಕರು ಮಾತ್ರ ಬರುತ್ತಿಲ್ಲ. ನಮ್ಮ ಸಮಸ್ಯೆಗಳನ್ನೂ ಸಹ ಬಗೆ ಹರಿಸಬೇಕು ಎಂಬುದು ಚಾಲಕರ ಒತ್ತಾಯವಾಗಿದೆ.