ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯಗೆ ಅಭಿಮಾನಿಗಳು ಬೃಹತ್ ಸೇಬಿನ ಹಾರ ಹಾಕುವ ಮೂಲಕ ಹೆಚ್. ಡಿ. ಕೋಟೆಗೆ ಭವ್ಯ ಸ್ವಾಗತ ನೀಡಿದ್ದಾರೆ.
ನಿನ್ನೆ ಸಿದ್ದರಾಮಯ್ಯ ಮೈಸೂರು ಜಿಲ್ಲೆಯ ಹೆಚ್. ಡಿ. ಕೋಟೆಯಲ್ಲಿ ಕನಕ ಸಮುದಾಯ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದರು. ಈ ವೇಳೆ ಅವರನ್ನು ನಗರದ ಮುಖ್ಯ ರಸ್ತೆಯಲ್ಲಿ ತೆರೆದ ವಾಹನದ ಮೂಲಕ ಕರೆ ತಂದು ಸುಮಾರು 500 ಕೆ.ಜಿ ತೂಕದ ಬೃಹತ್ ಸೇಬಿನ ಹಾರವನ್ನು ಹಾಕಿ ಸ್ವಾಗತಿಸಿದರು.
![Apple garland politics in Karnataka congress](https://etvbharatimages.akamaized.net/etvbharat/prod-images/kn-mys-8-siddaramayya-news-7208092_08112019171116_0811f_1573213276_916.jpg)
![Apple garland politics in Karnataka congress](https://etvbharatimages.akamaized.net/etvbharat/prod-images/kn-mys-8-siddaramayya-news-7208092_08112019171116_0811f_1573213276_1018.jpg)
ಗುರುವಾರ ಮೈಸೂರಿಗೆ ಆಗಮಿಸಿದ ಡಿ. ಕೆ. ಶಿವಕುಮಾರ್ಗೆ ಕಾಂಗ್ರೆಸ್ ಕಚೇರಿಯ ಮುಂದೆ ಬೃಹತ್ ಗಾತ್ರದ ಸೇಬಿನ ಹಾರ ಹಾಕಿ ಸ್ವಾಗತಿಸಿದ್ದರು. ಅದೇ ರೀತಿ ಶುಕ್ರವಾರ ಸಿದ್ದರಾಮಯ್ಯಗೂ ಬೃಹತ್ ಸೇಬಿನ ಹಾರದ ಸ್ವಾಗತ, ಹಲವಾರು ರಾಜಕೀಯ ಚರ್ಚೆಗಳನ್ನು ಹುಟ್ಟು ಹಾಕಿದೆ.