ಮೈಸೂರು: ಸಾಂಸ್ಕೃತಿಕ ನಗರಿಯ ರಸ್ತೆಗಳು ಈಗ ಗುಂಡಿ ಬಿದ್ದ ರಸ್ತೆಗಳಾಗಿವೆ. ಈ ಬಗ್ಗೆ ಅಧಿಕಾರಿಗಳನ್ನ ಗಮನ ಸೆಳೆಯಲು ವಿದ್ಯಾರ್ಥಿಯೊಬ್ಬ ತನ್ನ ಕುಂಚದಲ್ಲೇ ಗುಂಡಿ ರಸ್ತೆ ಮಧ್ಯೆ ಕಲಾಕೃತಿಯನ್ನ ನಿರ್ಮಿಸಿ,ಅಧಿಕಾರಿಗಳ ಗಮನ ಸೆಳೆಯಲು ಯತ್ನಿಸಿದ್ದಾನೆ.
ಕಳೆದ ವರ್ಷ ಬಿದ್ದ ಭಾರೀ ಮಳೆಗೆ ನಗರದ ಪ್ರಮುಖ ರಸ್ತೆಗಳು ಗುಂಡಿಮಯವಾಗಿದ್ದು, ರಸ್ತೆ ಗುಂಡಿ ಮುಚ್ಚಲು ಯಾವ ಅಧಿಕಾರಿಗಳು, ಕ್ರಮ ಕೈಗೊಂಡಿಲ್ಲ. ಇದರಿಂದ ಕಾವಾ ಕಾಲೇಜಿನ ವಿದ್ಯಾರ್ಥಿ ಶಿವರಂಜನ್, ನಗರದ ಹೃದಯ ಭಾಗದ ಹಾರ್ಡಿಕ್ ವೃತ್ತದ ರಸ್ತೆ ಮಧ್ಯದಲ್ಲಿರುವ ದೊಡ್ಡ ಗುಂಡಿಗೆ, ಬಾಯಿ ಹಾಗೂ ಹಲ್ಲುಗಳ ಮಧ್ಯ ನಾಲಿಗೆಯನ್ನ ಹೊರಚಾಚಿ ಸಾವಿಗೆ ಸಿದ್ದವಾಗಿರುವ ಗುಂಡಿ ಎಂದು ಕಲಾಕೃತಿ ರಚಿಸುವ ಮೂಲಕ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲು ಪ್ರಯತ್ನಿಸಿದ್ದಾನೆ.
ಕಲಾಕೃತಿ ನಿರ್ಮಾಣ ಮಾಡಿದ ತಕ್ಷಣ ಎಚ್ಚೆತ್ತ ಪೋಲಿಸರು, ಇದರ ಸುತ್ತ ಬ್ಯಾರಿಕೇಡ್ ಹಾಕಿ ಮಾನ ಮುಚ್ಚಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.