ETV Bharat / city

ನಿರ್ಮಾಣ ಹಂತದ ಬಹುಮಹಡಿ ಕಟ್ಟಡದಿಂದ ಬಿದ್ದು ಯುವಕ ಸಾವು

ರಾತ್ರಿ ಸೆಕ್ಯುರಿಟಿಯವರಿಗೆ ಒಳಗೆ ಹೋಗಿರುವ ಒಬ್ಬ ವ್ಯಕ್ತಿ ಹೊರಗೆ ಬಾರದೆ ಇರುವುದು ಗೊತ್ತಾಗಿ, ಸಂಸ್ಥೆಯ ಮುಖ್ಯಸ್ಥರಿಗೆ ಮಾಹಿತಿ ನೀಡಿದ್ದರು. ಇದೇ ಸಂದರ್ಭ ಕತ್ತಲಾದರೂ ರಾಜೇಶ್‌ ಮನೆಗೆ ವಾಪಸ್‌ ಬಾರದಿರುವ ಕುರಿತು ಕರೆ ಬಂದಿತ್ತು. ಕೂಡಲೇ ಸಂಸ್ಥೆಯ ಸಿಬ್ಬಂದಿ ಬಂದು ಸಿಸಿಟಿವಿ ದೃಶ್ಯ ಆಧಾರದಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಹುಡುಕಾಡಿದ್ದರು..

author img

By

Published : Feb 18, 2022, 5:13 PM IST

ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಯುವಕ ಸಾವು
Youth dies after falling from construction site

ಉಳ್ಳಾಲ : ನಿರ್ಮಾಣ ಹಂತದ‌ ಕಟ್ಟಡದಿಂದ ಜಾರಿ ಬಿದ್ದು ಯುವಕನೋರ್ವ ಮೃತಪಟ್ಟಿರುವ ಘಟನೆ ನಗರದ ಮುಡಿಪುವಿನಲ್ಲಿ ನಡೆದಿದೆ. ಮೂಲ್ಕಿ ಕಿಲ್ಪಾಡಿ ಎಣ್ಣೆಗೇಣಿ ನಿವಾಸಿ ರಾಜೇಶ್ ದೇವಾಡಿಗ ಮೃತಪಟ್ಟ ಯುವಕ ಎಂದು ತಿಳಿದು ಬಂದಿದೆ.

ಸಂಜೆ ವೇಳೆ ಎಲ್ಲಾ ಕಟ್ಟಡ ಕಾರ್ಮಿಕರು ಕೆಲಸ ಮುಗಿಸಿ ಹೊರ ಬಂದಿದ್ದರು. ಆದರೆ, ರಾಜೇಶ್‌ 4 ಗಂಟೆ ಮೇಲೆ ಮೊಬೈಲ್‌ನಲ್ಲಿ ಮಾತನಾಡಿಕೊಂಡು ಕಟ್ಟಡದ ಒಳಗೆ ತೆರಳುವುದು ಸಿಸಿಟಿವಿಯಲ್ಲಿ ಪತ್ತೆಯಾಗಿದೆ.

ಬಳಿಕ ರಾಜೇಶ್ ಹೊರಗೆ ಬಂದಿರಲಿಲ್ಲ. ಸಂಜೆ ಎಲ್ಲರೂ ಕೆಲಸ ಮುಗಿಸಿ ತೆರಳಿದ್ದು, ಪ್ರತಿ ದಿನ ರಾಜೇಶ್ ಅವರೊಂದಿಗೆ ತೆರಳುವ ಸಿಬ್ಬಂದಿ ರಾಜೇಶ್‌ಗೆ ಕರೆ ಮಾಡಿದಾಗ ಮೊಬೈಲ್‌ ಸ್ವಿಚ್‌ ಆಫ್‌ ಆಗಿತ್ತು. ಈ ಸಂದರ್ಭದಲ್ಲಿ ರಾಜೇಶ್‌ ತೆರಳಿರುವುದಾಗಿ ಭಾವಿಸಿ ಸಹ ಸಿಬ್ಬಂದಿ ಮನೆಗೆ ತೆರಳಿದ್ದರು.

ರಾತ್ರಿ ಸೆಕ್ಯುರಿಟಿಯವರಿಗೆ ಒಳಗೆ ಹೋಗಿರುವ ಒಬ್ಬ ವ್ಯಕ್ತಿ ಹೊರಗೆ ಬಾರದೆ ಇರುವುದು ಗೊತ್ತಾಗಿ, ಸಂಸ್ಥೆಯ ಮುಖ್ಯಸ್ಥರಿಗೆ ಮಾಹಿತಿ ನೀಡಿದ್ದರು. ಇದೇ ಸಂದರ್ಭ ಕತ್ತಲಾದರೂ ರಾಜೇಶ್‌ ಮನೆಗೆ ವಾಪಸ್‌ ಬಾರದಿರುವ ಕುರಿತು ಕರೆ ಬಂದಿತ್ತು. ಕೂಡಲೇ ಸಂಸ್ಥೆಯ ಸಿಬ್ಬಂದಿ ಬಂದು ಸಿಸಿಟಿವಿ ದೃಶ್ಯ ಆಧಾರದಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಹುಡುಕಾಡಿದ್ದರು.

ಆದರೆ, ರಾತ್ರಿ ಸಮಯವಾದ್ದರಿಂದ ರಾಜೇಶ್ ಪತ್ತೆಯಾಗಿರಲಿಲ್ಲ. ಮರುದಿನ ಬೆಳಗ್ಗೆ ಪೊಲೀಸರ ಸಮ್ಮುಖದಲ್ಲಿ ಹುಡುಕಾಟ ನಡೆಸಿದಾಗ ಮೊದಲ ಮಹಡಿಯ ಪೈಪ್‌ಲೈನ್‌ ಎಳೆಯುವ ಖಾಲಿ ಜಾಗದಲ್ಲಿ ಬಿದ್ದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು.

ಇಲ್ಲೇ ಅವರ ಮೊಬೈಲ್‌ ಕೂಡ ಪತ್ತೆಯಾಗಿದೆ. ಕಟ್ಟಡದ ಮೇಲಿಂದ ಜಾರಿ ಬಿದ್ದು ಮೃತಪಟ್ಟಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಫಾರೆನ್ಸಿಕ್‌ ತಜ್ಞರು ಆಗಮಿಸಿ, ನಾಲ್ಕನೇ ಮಹಡಿಯಿಂದ ಬಿದ್ದು ತಲೆ ಮತ್ತು ಕೈ, ಕಾಲಿಗೆ ಪೆಟ್ಟು ಬಿದ್ದು ಸಾವನ್ನಪ್ಪಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಸದ್ಯ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

ಓದಿ : ಮಲ್ಯ ₹9000- ನೀರವ್‌ ಮೋದಿ ₹14000- ರಿಷಿ ಅಗರ್ವಾಲ್‌ ₹23000.. ಮೋದಿ ಸರ್ಕಾರದ ವಿರುದ್ಧ ವರುಣ್ ಗಾಂಧಿ ಟ್ವೀಟ್‌ ಅಸ್ತ್ರ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.