ETV Bharat / city

ಮಂಗಳೂರು: ವಸತಿಗೃಹವೊಂದರಲ್ಲಿ ಅಪ್ರಾಪ್ತೆ, ಯುವಕ ಪತ್ತೆ - ಮಂಗಳೂರು ಲೇಟೆಸ್ಟ್​ ನ್ಯೂಸ್

ಮಂಗಳೂರಿನ ವಸತಿಗೃಹವೊಂದರಲ್ಲಿ ಅಪ್ರಾಪ್ತೆ ಹಾಗೂ ಯುವಕನೋರ್ವ ನಕಲಿ ಪಾಸ್ ಬಳಸಿ ರೂಮ್​ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.

Mangalore
ವಸತಿಗೃಹವೊಂದರಲ್ಲಿ ಅಪ್ರಾಪ್ತೆ, ಯುವಕ ಪತ್ತೆ
author img

By

Published : Jun 28, 2021, 6:54 AM IST

ಮಂಗಳೂರು: ನಗರದ ಕೆ‌.ಎಸ್.ರಾವ್ ರಸ್ತೆಯಲ್ಲಿರುವ ವಸತಿಗೃಹವೊಂದರಲ್ಲಿ ಅಪ್ರಾಪ್ತೆ ಹಾಗೂ ಯುವಕನೋರ್ವ ನಕಲಿ ಪಾಸ್ ಬಳಸಿ ರೂಮ್​ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಅಪ್ರಾಪ್ತೆಯು ತರಿಕೇರಿ ಮೂಲದವಳಾಗಿದ್ದು, ನಗರದ ಕಾಲೇಜೊಂದರಲ್ಲಿ ಓದುತ್ತಿದ್ದಾಳೆ. ಯುವಕ ಕುದ್ರೋಳಿ ನಿವಾಸಿಯಾಗಿದ್ದಾನೆ.

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಎರಡು ದಿನಗಳ ವಾರಾಂತ್ಯ ಕರ್ಫ್ಯೂ ಘೋಷಣೆಯಾಗಿದ್ದರೂ ಅಪ್ರಾಪ್ತ ವಿದ್ಯಾರ್ಥಿನಿ ಹಾಗೂ ಯುವಕ ಲಾಡ್ಜ್​​​​​​ನಲ್ಲಿ ರೂಮ್ ಮಾಡಿರುವ ಬಗ್ಗೆ ಬಂದರು ಪೊಲೀಸರಿಗೆ ಮಾಹಿತಿ ಲಭ್ಯವಾಗಿದ್ದು, ತಕ್ಷಣ ಕಾರ್ಯಾಚರಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರೂ ಪ್ರತ್ಯೇಕ ರೂಮ್​ನಲ್ಲಿದ್ದರೆಂದು ತಿಳಿದುಬಂದಿದೆ. ಇವರಿಬ್ಬರನ್ನೂ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ರೇಖಾ ಕದಿರೇಶ್ ಕೊಲೆ ಪ್ರಕರಣ : ನಾದಿನಿ,‌ ಆಕೆಯ ಮಗನ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.