ETV Bharat / city

ಅಗಲಿದ 'ತುಳು ಸಾಹಿತ್ಯ ರತ್ನಾಕರ': ಸೀತಾರಾಮ ಕುಲಾಲ್ ನಿಧನಕ್ಕೆ ಕಂಬನಿ - ಸೀತಾರಾಮ ಕುಲಾಲ್ ಅಭಿಮಾನಿಗಳ ಕಂಬನಿ

ತುಳು ಹಿರಿಯ ಸಾಹಿತಿ ಸೀತಾರಾಮ ಕುಲಾಲ್ ಅವರು ನಿಧನ ಹೊಂದಿದ್ದಾರೆ. ತುಳು ಸಾಹಿತ್ಯಕ್ಕೆ ತನ್ನದೇ ರೀತಿಯ ವಿಶಿಷ್ಟ ಕೊಡುಗೆ ನೀಡಿದ ಕುಲಾಲ್‌ ಅಗಲಿಕೆಗೆ ಗಣ್ಯರು ಕಂಬನಿ ಮಿಡಿದಿದ್ದಾರೆ.

Tulu Literature Sitaram Kulal passed away
author img

By

Published : Jul 28, 2019, 7:30 PM IST

Updated : Jul 28, 2019, 7:36 PM IST

ಮಂಗಳೂರು: ತುಳು ಭಾಷೆಯ ಹಿರಿಯ ಸಾಹಿತಿ ಹಾಗೂ ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಸೀತಾರಾಮ ಕುಲಾಲ್ ಇಂದು ನಿಧನರಾಗಿದ್ದಾರೆ.

ಸೀತಾರಾಮ್ ಕುಲಾಲ್ ಅವರು ನೆಲೆಯೂರಿದ್ದು ಮಂಗಳೂರಿನ ಬಿಜೈಯಲ್ಲಿ. 'ದಾಸಿ ಪುತ್ರ' ಎಂಬ ಕನ್ನಡ ನಾಟಕದ ಮೂಲಕ ಅವರು ರಂಗಭೂಮಿ ಪ್ರವೇಶಿಸಿದ್ದರು. ಅಲ್ಲದೇ, ತುಳುಚಿತ್ರ ರಸಿಕರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಉಳಿಯುವಂತಹ ಚಲನಚಿತ್ರ ಗೀತೆಗಳನ್ನು ಅವರು ರಚಿಸಿದ್ದಾರೆ.

'ಮೋಕೆದ ಸಿಂಗಾರಿ', 'ಪಕ್ಕಿಲು ಮೂಜಿ ಒಂಜೇ ಗೂಡು', 'ಪರಶುರಾಮನ ಕೊಡಲಿಗ್ ಪುಟ್ಟಿನ ತುಳುನಾಡ್', 'ಬ್ರಹ್ಮನ ಬರವು ಮಾಜಂದೆ ಪೊಂಡಾ', 'ಅಪ್ಪೆ ಮನಸ್ ಬಂಗಾರ ಅಮ್ಮ ತೆನಸ್ ಸಿಂಗಾರ', 'ಡಿಂಗಿರಿ ಮಾಮ ಪೊಡಿದ್ ಪಾರಡಾ'....ಹೀಗೆ ಹಲವಾರು ಸೂಪರ್‌ ಹಿಟ್ ತುಳು ಹಾಡುಗಳನ್ನು ಅವರು ಬರೆದಿದ್ದಾರೆ. ಈ ಹಾಡುಗಳು ಇಂದು ಕೂಡಾ ತುಳುನಾಡಿನ ಜನರ ನೆನಪಲ್ಲಿ ಅಚ್ಚಳಿಯದೆ ಉಳಿದಿವೆ.

ಕಳೆದ 45 ವರ್ಷಗಳಿಂದ ತಾವು ರಚಿಸಿರುವ ಯಾವುದೇ ಕೃತಿಗಾಗಲಿ, ನಾಟಕ ಹಾಗೂ ಹಾಡುಗಳಿಗಾಗಲಿ ಸಂಭಾವನೆಯನ್ನು ಪಡೆದುಕೊಳ್ಳದೆ ಸೇವೆ ಸಲ್ಲಿಸಿರುವುದು ಅವರ ಕಲಾಪ್ರೇಮಕ್ಕೆ ಸಾಕ್ಷಿಯಾಗಿದೆ. ಅವರಿಗೆ ‘ರಂಗಕಲಾಭೂಷಣ’ ‘ತುಳು ರತ್ನ’, ‘ಪೆರ್ಮೆದ ತುಳುವೆ’, ‘ತುಳುಸಿರಿ’, ‘ತುಳು ಸಾಹಿತ್ಯ ರತ್ನಾಕರ’, ‘ತೌಳವ ಪ್ರಶಸ್ತಿ’ ಸೇರಿದಂತೆ ಹಲವಾರು ಪ್ರಶಸ್ತಿ ಸಂದಿವೆ. ಇದರೊಂದಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು 2014ರ ಸಾಲಿನ ಗೌರವ ಪ್ರಶಸ್ತಿ ನೀಡಿದೆ.

Intro:ಮಂಗಳೂರು: ಹಿರಿಯ ತುಳು ಸಾಹಿತಿ, ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಸೀತಾರಾಮ ಕುಲಾಲ್ ಇಂದು ನಿಧನರಾಗಿದ್ದಾರೆ.

ಮಂಗಳೂರಿನ ಬಿಜೈಯಲ್ಲಿ ನೆಲೆಯೂರಿದ್ದ ಸೀತಾರಾಮ್ ಕುಲಾಲ್ ರವರು "ದಾಸಿ ಪುತ್ರ " ಎನ್ನುವ ಕನ್ನಡ ನಾಟಕದ ಮೂಲಕ ರಂಗ ಭೂಮಿ ಪ್ರವೇಶಿಸಿದ್ದ ಅವರು ಮುಂದೆ ತುಳುಚಿತ್ರ ರಸಿಕರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಉಳಿಯುವಂತಹ ಹಲವಾರು ಚಲನಚಿತ್ರ ಗೀತೆಗಳನ್ನು ರಚಿಸಿದ್ದಾರೆ.ಮೋಕೆದ ಸಿಂಗಾರಿ, ಪಕ್ಕಿಲು ಮೂಜಿ ಒಂಜೇ ಗೂಡುಡು, ಪರಶುರಾಮನ ಕೊಡಲಿಗ್ ಪುಟ್ಟಿನ ತುಳುನಾಡ್, ಬ್ರಹ್ಮನ ಬರವು ಮಾಜಂದೆ ಪೊಂಡಾ, ಅಪ್ಪೆ ಮನಸ್ ಬಂಗಾರ ಅಮ್ಮ ತೆನಸ್ ಸಿಂಗಾರ, ಡಿಂಗಿರಿ ಮಾಮ ಡಿಂಗಿರಿ ಮಾಮ ಪೊಡಿದ್ ಪಾರಡಾ ಮುಂತಾದ ಹಲವಾರು ಸೂಪರ್‌ ಹಿಟ್ ತುಳು ಹಾಡುಗಳನ್ನು ಚಲನಚಿತ್ರಕ್ಕಾಗಿ ಅವರು ಬರೆದಿದ್ದಾರೆ. ಈ ಹಾಡುಗಳು ಇಂದು ಕೂಡಾ ತುಳುನಾಡಿನ ಜನರ ನೆನಪಲ್ಲಿ ಅಚ್ಚಳಿಯದೆ ಉಳಿದು, ತುಳುವರು ಯಾವಾಗಲೂ ಗುನುಗುವಂತೆ ಮಾಡುತ್ತಿದೆ.

Body:ಕಳೆದ 45 ವರ್ಷಗಳಿಂದ ಕಲಾಸೇವೆ ಮಾಡಿದ ಇವರು ತಾವು ರಚಿಸಿರುವ ಯಾವುದೇ ಕೃತಿಗಾಗಲಿ, ನಾಟಕ ಹಾಗೂ ಹಾಡುಗಳಿಗಾಗಲಿ ಯಾವುದೇ ಸಂಭಾವನೆಯನ್ನು ಪಡೆದುಕೊಳ್ಳದೆ ಸೇವೆ ಸಲ್ಲಿಸಿರುವುದು ಇವರ ಕಲಾಪ್ರೇಮಕ್ಕೆ ಸಾಕ್ಷಿಯಾಗಿದೆ.

ಇವರಿಗೆ ‘ರಂಗಕಲಾಭೂಷಣ’ ‘ತುಳು ರತ್ನ’ ‘ಪೆರ್ಮೆದ ತುಳುವೆ’ ‘ತುಳುಸಿರಿ’ ‘ತುಳು ಸಾಹಿತ್ಯ ರತ್ನಾಕರ’ ‘ತೌಳವ ಪ್ರಶಸ್ತಿ’ ಇತ್ಯಾದಿ ಹಲವಾರು ಪ್ರಶಸ್ತಿ ಸಂದಿದ್ದು, ಇದರೊಂದಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 2014ರ ಸಾಲಿನ ಗೌರವ ಪ್ರಶಸ್ತಿ ನೀಡಿ ಗೌರವಿಸಿದೆ.

Reporter_Vishwanath PanjimogaruConclusion:
Last Updated : Jul 28, 2019, 7:36 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.