ಭಟ್ಕಳ: ತಾಲೂಕಿನ ತಗ್ಗರಗೋಡದಲ್ಲಿ ಮನೆ ಬಾಗಿಲು ಮುರಿದು ಲಕ್ಷಾಂತರ ರೂ. ಮೌಲ್ಯದ ಆಭರಣ ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಟ್ಕಳ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶೇಡುಕುಳಿ ಹೊಂಡ ನಿವಾಸಿ ಖಾಜಾ ಅಬ್ದುಲ್ ಸತ್ತಾರ್ ಬಂಧಿತ ಆರೋಪಿ. ಈತ ಕಳೆದ ಆಗಸ್ಟ 28 ರಂದು ತಾಲೂಕಿನ ತಗ್ಗರಗೋಡದ ಬಿಬಿ ಫಾತಿಮಾ ಅಬ್ದುಲ್ ರಜಾಕ್ ಶೇಖ್ ಎನ್ನುವರ ಮನೆ ಬಾಗಿಲು ಒಡೆದು 3 ಕಿವಿ ಓಲೆ, 2 ಉಂಗುರ, 1 ನೆಕ್ಲೆಸ್, ಬಂಗಾರದ ಬಳೆ, ಮೊಬೈಲ್ ಸೇರಿದಂತೆ ಒಟ್ಟು 5 ಲಕ್ಷ 20 ಸಾವಿರ ರೂ. ಮೌಲ್ಯದ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದ.
ಈ ಕುರಿತು ಪ್ರಕರಣ ದಾಖಲಿಸಿಕೊಂಡ ಭಟ್ಕಳ ನಗರ ಠಾಣೆ ಪೊಲೀಸರು, ತನಿಖೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.