ಮಂಗಳೂರು: ಬಾಲಕ ಆಟವಾಡುತ್ತಿದ್ದಾಗ ಹಗ್ಗ ಕುತ್ತಿಗೆಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ಮಂಗಳೂರಿನ ಕೃಷ್ಣಾಪುರದಲ್ಲಿ ಗುರುವಾರ ನಡೆದಿದೆ.
ಸುರತ್ಕಲ್ ಕೃಷ್ಣಾಪುರದ ದರ್ಶನ್ (14) ಮೃತ ಬಾಲಕ. ಕಾಟಿಪಳ್ಳದ ಖಾಸಗಿ ಶಾಲೆಯಲ್ಲಿ 9 ನೇ ತರಗತಿ ಓದುತ್ತಿದ್ದ. ಸಂಜೆಯ ವೇಳೆ ಶಾಲೆಯಿಂದ ಬಂದು ಮನೆಯಲ್ಲಿಯೇ ಕಿಟಿಕಿ ಬಳಿ ಹಗ್ಗದೊಂದಿಗೆ ಆಟವಾಡುತ್ತಿದ್ದ. ಈ ವೇಳೆ ಹಗ್ಗ ಕುತ್ತಿಗೆಗೆ ಬಿಗಿದು ಉಸಿರುಗಟ್ಟಿ ಬಾಲಕ ಸಾವನ್ನಪ್ಪಿದ್ದಾನೆ.
ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.