ETV Bharat / city

ಬ್ಯಾಂಕುಗಳ ವಿಲೀನ ಕರಾವಳಿಗೆ ಒಲ್ಲದ ಪ್ರಕ್ರಿಯೆ: ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ - ಕರಾವಳಿ ಬ್ಯಾಂಕ್​ ಉಳಿಸಿ ಹೋರಾಟ

ಸಮಾಜದ ಬೆಳವಣಿಗೆಗೆ ರಕ್ತದಂತಿರುವ ಧನವನ್ನು‌‌ ಕ್ರೋಢೀಕರಿಸಿ ಬೇಕಾದಾಗ ಎಲ್ಲರಿಗೂ ವಿತರಿಸಿ ಸಮಾಜದ ಅಭಿವೃದ್ಧಿಗೆ ಬಹುದೊಡ್ಡ ಕೊಡುಗೆಯನ್ನು ನೀಡಿದ ಕರಾವಳಿಯ ಬ್ಯಾಂಕ್​ ವಿಲೀನಿಕರಣ ಸಲ್ಲದು ಎಂದು ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.

sri-vishnu-prasanna-theertha-swamiji-
ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ
author img

By

Published : Feb 7, 2020, 8:52 PM IST

ಮಂಗಳೂರು: ದೇಹದ ಸುರಕ್ಷತೆಗೆ ನರನಾಡಿಗಳಲ್ಲಿ ರಕ್ತ ಸಂಚಾರವಾಗಬೇಕು. ಅದೇ ರೀತಿ ಸಮಾಜದ ಬೆಳವಣಿಗೆಗೆ ರಕ್ತದಂತಿರುವ ಧನವನ್ನು‌‌ ಕ್ರೋಢೀಕರಿಸಿ, ಬೇಕಾದಾಗ ಎಲ್ಲರಿಗೂ ವಿತರಿಸಿ ಸಮಾಜದ ಅಭಿವೃದ್ಧಿಗೆ ಬಹುದೊಡ್ಡ ಕೊಡುಗೆಯನ್ನು ನೀಡಿದ್ದು ಕರಾವಳಿಯ ಬ್ಯಾಂಕಿಂಗ್ ಕ್ಷೇತ್ರ ಎಂದು ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದರು.

ನಗರದ ಕೊಡಿಯಾಲ್ ಬೈಲ್​ನ ಸಭಾಂಗಣದಲ್ಲಿ ನಡೆದ ಕರಾವಳಿಯ ಬ್ಯಾಂಕುಗಳನ್ನು ಉಳಿಸಿ ಹೋರಾಟ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಕೊಡುಗೆ ನೀಡಿದ ಬ್ಯಾಂಕ್ ಗಳ ವಿಲೀನ ಬೇರೆಲ್ಲಾ ಕಡೆಗಳಲ್ಲಿ ಸಾಧುವಾಗಬಹುದು. ಆದರೆ ಕರಾವಳಿಗೆ ಒಲ್ಲದ ಪ್ರಕ್ರಿಯೆ. ಕರಾವಳಿಯ ಭೌಗೋಳಿಕ ಹಿನ್ನೆಲೆಗೂ, ಬೇರೆಡೆಗೂ ಬಹಳಷ್ಟು ವ್ಯತ್ಯಾಸವಿದೆ. ಆದ್ದರಿಂದ ಬ್ಯಾಂಕ್ ವಿಲೀನ ಪ್ರಕ್ರಿಯೆ ನಮ್ಮ ಭಾಗಕ್ಕೆ ಸಮಂಜಸವಲ್ಲ.

ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

ವಿಲೀನದಿಂದ ಜನರಿಗೆ ಅನಾನುಕೂಲತೆಯಾಗುವ ಸಂಭವವಿದೆ. ಉದ್ಯೋಗಾವಕಾಶಗಳು ಕ್ಷೀಣವಾಗುತ್ತದೆ. ಇಂತಹ ಅನೇಕ ದೋಷಗಳನ್ನು ಪರಿಗಣಿಸಿ ಕೇಂದ್ರ ಸರ್ಕಾರ ಬ್ಯಾಂಕ್ ವಿಲೀನ ಪ್ರಕ್ರಿಯೆಯನ್ನು ಕೈಬಿಡಬೇಕು ಎಂದು ವಿಶ್ವಪ್ರಸನ್ನ ತೀರ್ಥರು ಹೇಳಿದರು.

ಈ ಸಂದರ್ಭ ಕರಾವಳಿಯ ಬ್ಯಾಂಕುಗಳನ್ನು ಉಳಿಸಿ ಹೋರಾಟ ಸಮಿತಿಯ ಲೋಗೋ, ಕರಪತ್ರ ಹಾಗೂ ಕೇಂದ್ರ ಸರ್ಕಾರಕ್ಕೆ ಸಲ್ಲಿಸುವ ಮನವಿಯನ್ನು ಅನಾವರಣ ಗೊಳಿಸಲಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.