ಮಂಗಳೂರು: ದೇಶದಲ್ಲಿ ಸ್ಮಾರ್ಟ್ ಸಿಟಿಗೆ ಒಳಪಟ್ಟ 114 ನಗರಗಳು ಫೆ.1 ರಿಂದ ಫೆ.29ರ ವರೆಗೆ ನಡೆಯಲಿರುವ ಸುಲಲಿತ ಜೀವನ ಸೂಚ್ಯಂಕ ಸಮೀಕ್ಷೆಯಲ್ಲಿ ಭಾಗವಹಿಸುತ್ತಿದೆ. ಮಂಗಳೂರಿನ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಸಮೀಕ್ಷೆಯಲ್ಲಿ ಭಾಗವಹಿಸಿ ಎಂದು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ಮೊಹಮ್ಮದ್ ನಜೀರ್ ಹೇಳಿದರು.
ನಗರದ ಮಂಗಳೂರು ಮಹಾನಗರ ಪಾಲಿಕೆಯ ಸ್ಮಾರ್ಟ್ ಸಿಟಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ನಗರಗಳ ಶಿಕ್ಷಣ, ಆರೋಗ್ಯ, ಮೂಲಭೂತ ಸೌಕರ್ಯ, ಸಾರಿಗೆ ಸಂಪರ್ಕ, ಸುರಕ್ಷತೆ ಮುಂತಾದವುಗಳ ಗುಣಮಟ್ಟ ತಿಳಿಯಲು ಕೇಂದ್ರ ಸರಕಾರ ಈ ಸಮೀಕ್ಷೆಯನ್ನು ಕೈಗೊಂಡಿದೆ ಎಂದರು.
ಈ ವರ್ಷ ಸಮೀಕ್ಷೆಯಲ್ಲಿ 114 ನಗರಗಳು ಭಾಗವಹಿಸುತ್ತಿದೆ. ಅದರಲ್ಲಿ ಮಂಗಳೂರು ನಗರವೂ ಒಂದು. ಆದರೆ, ಸಮೀಕ್ಷೆಯಲ್ಲಿ ಶುಕ್ರವಾರ ಮಧ್ಯಾಹ್ನದ ವರೆಗೆ 2,200 ಮಂದಿ ಭಾಗವಹಿಸಿದ್ದು, ಇನ್ನೂ ಬಹಳಷ್ಟು ಜನ ಭಾಗವಹಿಸಬೇಕಾಗಿದೆ. ಕನಿಷ್ಠ 10 ಸಾವಿರ ಮಂದಿಯಾದರೂ ಭಾಗವಹಿಸಬೇಕೆಂಬುದು ನಮ್ಮ ಗುರಿ. ನಾಗರಿಕರು http://eol2019.org/CitizenFeedback@smartcitiesMission, ಫೇಸ್ ಬುಕ್, @easeofliving2019, @easeofliving 19 ಮೂಲಕ ತಮ್ಮ ಅಭಿಪ್ರಾಯಗಳನ್ನು ತಿಳಿಸಬಹುದು ಎಂದು ನಜೀರ್ ತಿಳಿದರು.