ETV Bharat / city

ಮಂಗಳೂರು: ಅಗ್ನಿ ಅವಘಡದಲ್ಲಿ ಅನಾಹುತ ತಪ್ಪಿಸಿದ್ದ ಇಬ್ಬರು ಮಕ್ಕಳಿಗೆ ಅಂಚೆ ಇಲಾಖೆಯಿಂದ ಸನ್ಮಾನ

2020ರ ಫೆಬ್ರವರಿ 23ರಂದು ಗಾಂಧಿನಗರ ಅಂಚೆ ಕಚೇರಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿತ್ತು. ಈ ಸಂದರ್ಭ ಅಲ್ಲೇ ಇದ್ದ ಮಕ್ಕಳಿಬ್ಬರು ನೆರೆಹೊರೆಯವರಿಗೆ ತಿಳಿಸಿ ನಡೆಯಲಿದ್ದ ಹೆಚ್ಚಿನ ಅನಾಹುತ ತಪ್ಪಿಸಿದ್ದರು. ಈ ಕಾರಣ ಅಂಚೆ ಇಲಾಕೆ ಅವರಿಗೆ ಸನ್ಮಾನಿಸಿದೆ.

mangalore
ಮಂಗಳೂರು
author img

By

Published : Jan 27, 2021, 9:01 PM IST

ಮಂಗಳೂರು: ನಗರದ ಮಣ್ಣಗುಡ್ಡೆಯಲ್ಲಿರುವ ಗಾಂಧಿನಗರ ಅಂಚೆ ಕಚೇರಿಯಲ್ಲಿ ಕಳೆದ ವರ್ಷ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಅಗ್ನಿ ಅವಘಡ ಸಂಭವಿಸಿತ್ತು. ತಕ್ಷಣ ಈ ವಿಚಾರದ ಬಗ್ಗೆ ನೆರೆಹೊರೆಯವರಿಗೆ ಮಾಹಿತಿ ನೀಡಿ ಸಂಭಾವ್ಯ ಅನಾಹುತ ತಪ್ಪಿಸಿದ ಇಬ್ಬರು ಮಕ್ಕಳನ್ನು ಅಂಚೆ ಅಧೀಕ್ಷಕರ ಕಚೇರಿಯಲ್ಲಿ ಸನ್ಮಾನ ಮಾಡಲಾಯಿತು.

ಮಂಗಳೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಶ್ರೀಹರ್ಷ ಬಲ್ಮಠದ ಹಿರಿಯ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ಮಕ್ಕಳಿಗೆ ಸನ್ಮಾನ ಮಾಡಿ ಅಭಿನಂದಿಸಿದರು. ಪಣಂಬೂರಿನ ಕೇಂದ್ರೀಯ ವಿದ್ಯಾಲಯದ 5ನೇ ತರಗತಿ ವಿದ್ಯಾರ್ಥಿ ಸೃಜನ್ ಮತ್ತು 6ನೇ ತರಗತಿ ವಿದ್ಯಾರ್ಥಿನಿ ಶರಣ್ಯಾ ಸಮಯಪ್ರಜ್ಞೆ ಮೆರೆದ ಮಕ್ಕಳು.

ಇದನ್ನೂ ಓದಿ: ಉಜಿರೆ ಬಾಲಕನ ಅಪಹರಣ ಪ್ರಕರಣದ ಆರೋಪಿಗಳಿಗೆ ಜಾಮೀನು ನಿರಾಕರಣೆ

2020ರ ಫೆಬ್ರವರಿ 23ರಂದು ಗಾಂಧಿನಗರ ಅಂಚೆ ಕಚೇರಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿತ್ತು. ಈ ಸಂದರ್ಭ ಅಲ್ಲೇ ಇದ್ದ ಸೃಜನ್ ಮತ್ತು ಶರಣ್ಯಾ ತಕ್ಷಣ ಈ ವಿಚಾರವನ್ನು ನೆರೆಹೊರೆಯವರಿಗೆ ತಿಳಿಸಿ ನಡೆಯಲಿದ್ದ ಹೆಚ್ಚಿನ ಅನಾಹುತ ತಪ್ಪಿಸಿದ್ದರು. ಈ ಇಬ್ಬರು ಮಕ್ಕಳ ಸಮಯಪ್ರಜ್ಞೆಯನ್ನು ಗುರುತಿಸಿದ ಮಂಗಳೂರು ಅಂಚೆ ವಿಭಾಗವು ಇಬ್ಬರಿಗೂ ಪ್ರಶಂಸನಾ ಪತ್ರ ಹಾಗೂ ಮೈ ಸ್ಟಾಂಪ್ (ಮಕ್ಕಳ ಭಾವಚಿತ್ರ ಹೊಂದಿರುವ ಸ್ಟಾಂಪ್) ನೀಡಿ ಸನ್ಮಾನಿಸಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.