ETV Bharat / city

ಮೋದಿ, ಅಮಿತ್​ ಶಾ ಎಂಬ ಡೈನೋಸಾರ್​ಗಳನ್ನ ನಾಶಪಡಿಸಬೇಕು.. ಎನ್​​ಎಸ್​​ಯುಐ ಪ್ರತಿಭಟನೆ

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಎನ್​​ಎಸ್​​ಯುಐನಿಂದ ಇಂದು ಸಂಜೆ ನಗರದ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಯಿತು.

ಎನ್​​ಎಸ್​​ಯುಐ ಪ್ರತಿಭಟನೆ
ಎನ್​​ಎಸ್​​ಯುಐ ಪ್ರತಿಭಟನೆ
author img

By

Published : Dec 18, 2019, 11:50 PM IST

ಮಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಎನ್​​ಎಸ್​​ಯುಐನಿಂದ ಇಂದು ಸಂಜೆ ನಗರದ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಯಿತು. ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿದರು.

ಎನ್​​ಎಸ್​​ಯುಐ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸವಾದ್ ಸುಳ್ಯ ಮಾತನಾಡಿ, ಜಾಮಿಯಾ ವಿವಿಯಲ್ಲಿ ವಿದ್ಯಾರ್ಥಿಗಳು ನ್ಯಾಯಯುತ ಹಾಗೂ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದಾಗ ದೆಹಲಿ ಪೊಲೀಸರು ಅವರ ಮೇಲೆ ದೌರ್ಜನ್ಯ ನಡೆಸಿದರು. ಇದನ್ನು ನಾವು ಖಂಡಿಸುತ್ತೇವೆ. ಹಾಗೆಯೇ ಕೇಂದ್ರದ ಎನ್​ಆರ್​ಸಿ ಹಾಗೂ ಸಿಎಬಿ ಜಾರಿ ಹಿಂಪಡೆಯಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.

ಎನ್​​ಎಸ್​​ಯುಐ ಪ್ರತಿಭಟನೆ..

ಜಿಲ್ಲಾಧ್ಯಕ್ಷ ಅಬ್ದುಲ್ಲಾ ಮಾತನಾಡಿ, ಬಹಳಷ್ಟು ಬಡವರಿರುವ ಈ ದೇಶದಲ್ಲಿ ಎಷ್ಟೋ ಮಂದಿಗೆ ಆಧಾರ್ ಕಾರ್ಡ್, ಮತದಾನ ಚೀಟಿಯೇ ಇಲ್ಲ. ಅಂತಹದರಲ್ಲಿ ಪೌರತ್ವದ ದಾಖಲೆ ಎಲ್ಲಿರಬಹುದು. ಇನ್ನೂ ಕಾಯ್ದೆಯನ್ನು ಜಾರಿಗೊಳಿಸುವುದೊಂದೇ ಬಾಕಿ. ಮುಸ್ಲಿಮೇತರರಿಗೆ ಪೌರತ್ವ ನೀಡಿರುವುದರಿಂದ ನಮಗೇನೂ ತೊಂದರೆ ಇಲ್ಲ. ಆದರೆ, ಮುಸ್ಲಿಮರಿಗೆ ಯಾಕೆ ಈ ದೇಶದ ಪೌರತ್ವ ನೀಡಲಿಲ್ಲ ಎಂಬುದೇ ಖೇದಕರ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ಈ ಕಾಯ್ದೆ ಜಾರಿಯಾದರೆ ಹಿಂದೂ-ಮುಸ್ಲಿಂ ಸಂಘರ್ಷವಾಗಲಿದೆ ಎಂಬುದು ಮೋದಿ ಸರ್ಕಾರಕ್ಕೆ ಸ್ಪಷ್ಟವಾಗಿ ತಿಳಿದಿದೆ. ಈ ಸಂಘರ್ಷ ನಡೆಯಬೇಕೆನ್ನುವುದೇ ಅವರ ಉದ್ದೇಶ. ಅಮಿತ್ ಶಾ ಹಾಗೂ ಮೋದಿಯಂತಹ ಡೈನೋಸಾರ್​​ಗಳನ್ನು ನಾಶಗೊಳಿಸಬೇಕಾಗಿದೆ ಎಂದು ಆರೋಪಿಸಿದರು.

Intro:ಮಂಗಳೂರು: ಪೌರತ್ವ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ
ಎನ್ ಎಸ್ ಯು ಐನಿಂದ ಇಂದು ಸಂಜೆ ನಗರದ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಯಿತು.

ಈ ಸಂದರ್ಭ ಪ್ರತಿಭಟನಾಕಾರರು ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ವಿರುದ್ಧ ಘೋಷಣೆ ಕೂಗಿದರು.

Body:ಈ ಸಂದರ್ಭ ಎನ್ ಎಸ್ ಯು ಐ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸವಾದ್ ಸುಳ್ಯ ಮಾತನಾಡಿ, ಜಾಮಿಯಾ ವಿವಿಯಲ್ಲಿ ವಿದ್ಯಾರ್ಥಿಗಳು ನ್ಯಾಯಯುತವಾಗಿ ಹಾಗೂ ಶಾಂತಿಯುತವಾಗಿ ತಮ್ಮ ಬೇಡಿಕೆಗಳನ್ನಿರಿಸಿ ಪ್ರತಿಭಟನೆ ನಡೆಸಿದಾಗ ಡೆಲ್ಲಿ ಪೊಲೀಸರು ವಿದ್ಯಾರ್ಥಿಗಳ ಮೇಲೆ ನಡೆಸಿದ ದೌರ್ಜನ್ಯದ ವಿರುದ್ಧ ನಾವು ಪ್ರತಿಭಟನೆ ನಡೆಸುತ್ತಿದ್ದೇವೆ. ಹಾಗೆಯೇ ಕೇಂದ್ರ ಸರಕಾರ ಈ ದೇಶದ ಸೌಹಾರ್ದತೆಯನ್ನು ನುಚ್ಚುನೂರು ಮಾಡುವಂತಹ ಎರಡು ಕಾಯ್ದೆಗಳಾದ ಎನ್ ಆರ್ ಸಿ ಹಾಗೂ ಸಿಎಬಿಯನ್ನು ಜಾರಿಗೊಳಿಸಿದೆ. ಈ ಕಾಯ್ದೆಗಳನ್ನು ಹಿಂಪಡೆಯದಿದ್ದಲ್ಲಿ ದ‌.ಕ.ಜಿಲ್ಲೆಯ ಕಾಲೇಜುಗಳನ್ನು ಬಂದ್ ಮಾಡಿ ಉಗ್ರ ರೀತಿಯಲ್ಲಿ ಹೋರಾಟ ನಡೆಸಲಾಗುತ್ತದೆ ಎಂದು ಹೇಳಿದರು.

ಈ ಸಂದರ್ಭ ಎನ್ ಎಸ್ ಯು ಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಅಬ್ದುಲ್ಲಾ ಮಾತನಾಡಿ, ಬಹಳಷ್ಟು ಬಡವರಿರುವ ಈ ದೇಶದಲ್ಲಿ ಆಧಾರ್ ಕಾರ್ಡ್, ಮತದಾನ ಚೀಟಿಯೇ ಇರುವುದು ಕಷ್ಟ ಅಂತದರಲ್ಲಿ ಪೌರತ್ವದ ದಾಖಲೆ ಎಲ್ಲಿರಬಹುದು. ಎನ್ ಆರ್ ಸಿ ಹಾಗೂ ಸಿಎಬಿ ಈಗಾಗಲೇ ರಾಜ್ಯಸಭೆ ಹಾಗೂ ಲೋಕಸಭೆಗಳಲ್ಲಿ ಅಂಗೀಕಾರಗೊಂಡಿದೆ‌. ಇದಕ್ಕೆ ರಾಷ್ಟ್ರಪತಿಯ ಅಂಕಿತವೂ ದೊರಕಿದೆ. ಇನ್ನೂ ಮಸೂದೆಯನ್ನು ಜಾರಿಗೊಳಿಸುವುದೊಂದೇ ಬಾಕಿ ಇದೆ. ಮುಸ್ಲಿಮೇತರರಿಗೆ ಪೌರತ್ವ ನೀಡಿರುವುದರಿಂದ ನಮಗೇನೂ ತೊಂದರೆ ಇಲ್ಲ. ಆದರೆ ಮುಸ್ಲಿಮರಿಗೆ ಯಾಕೆ ಈ ದೇಶದ ಪೌರತ್ವ ನೀಡಲಿಲ್ಲ ಎಂಬುದೇ ಖೇದಕರ ಸಂಗತಿ. ಆದ್ದರಿಂದ ಈ ಮಸೂದೆ ಜಾರಿಗೊಳಿಸಲು ಸಾಧ್ಯವೇ ಇಲ್ಲ. ಈ ಕಾಯ್ದೆ ಜಾರಿಯಾದರೆ ಹಿಂದೂ-ಮುಸ್ಲಿಂ ಸಂಘರ್ಷವಾಗಲಿದೆ ಎಂದು ಮೋದಿ ಸರಕಾರಕ್ಕೆ ಸ್ಪಷ್ಟವಾಗಿ ತಿಳಿದಿದೆ. ಈ ಸಂಘರ್ಷ ನಡೆಯಬೇಕೆನ್ನುವುದೇ ಅವರ ಉದ್ದೇಶ. ಅಮಿತ್ ಷಾ ಹಾಗೂ ಮೋದಿಯಂತಹ ಡೈನೋಸಾರ್ ಗಳನ್ನು ನಾಶಗೊಳಿಸಬೇಕಾಗಿದೆ ಎಂದು ಆಗ್ರಹಿಸಿದರು.

Reporter_Vishwanath Panjimogaru

Byte

ನೀಲಿ ಅಂಗಿ ಹಾಕಿದವರು ಸವಾದ್ ಸುಳ್ಯ

ಬಿಳಿ ಅಂಗಿಯವರು ಅಬ್ದುಲ್ಲಾ

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.