ETV Bharat / city

ಜೆಟ್ ಏರ್ ಸಂಸ್ಥೆಯ ಹಣ ದುರುಪಯೋಗ: ಅಧಿಕಾರಿಗೆ ಶಿಕ್ಷೆ ವಿಧಿಸಿದ ಕೋರ್ಟ್​​​​ - senior officer got punished after 23 years

ಜೆಟ್ ಏರ್ ಲಿಮಿಟೆಡ್ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ಹಣ ದುರುಪಯೋಗ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ 23 ವರ್ಷಗಳ ಹಿಂದಿನ ಪ್ರಕರಣವೊಂದಕ್ಕೆ ಮಂಗಳೂರಿನ 2 ನೇ ಸಿಜೆಎಂ ನ್ಯಾಯಾಲಯ ಆರೋಪಿಗೆ ಒಟ್ಟು ಮೂರು ವರ್ಷ ಆರು ತಿಂಗಳು ಜೈಲು ಶಿಕ್ಷೆ ಮತ್ತು 12 ಲಕ್ಷ ರೂ ದಂಡ ವಿಧಿಸಿ ತೀರ್ಪು ನೀಡಿದೆ. ಶಿಕ್ಷೆಗೊಳಗಾದವರನ್ನು ವರದನಾಯಕ್ ಎಂದು ಗುರುತಿಸಲಾಗಿದೆ.

money laundering case , officer got punished by the mangaluru cjm court
http://10.10.50.85//karnataka/05-March-2022/kn-mng-02-judgement-photo-7202146_05032022104832_0503f_1646457512_396.jpg
author img

By

Published : Mar 5, 2022, 12:52 PM IST

ಮಂಗಳೂರು: ಜೆಟ್ ಏರ್ ಲಿಮಿಟೆಡ್ ಸಂಸ್ಥೆಯ ಹಿರಿಯ ಅಧಿಕಾರಿ ಹಣ ದುರುಪಯೋಗ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಮಂಗಳೂರಿನ 2 ನೇ ಸಿಜೆಎಂ ನ್ಯಾಯಾಲಯ 23 ವರ್ಷಗಳ ಹಿಂದಿನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆರೋಪಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ವರದರಾಯ ನಾಯಕ್ ( 57 ) ಶಿಕ್ಷೆಗೊಳಗಾದವರು ಎಂದು ತಿಳಿದು ಬಂದಿದೆ. ಇವರಿಗೆ ಒಟ್ಟು ಮೂರು ವರ್ಷ ಆರು ತಿಂಗಳು ಜೈಲು ಶಿಕ್ಷೆ ವಿಧಿಸಿ ಆದೇಶಿಸಲಾಗಿದೆ ಎಂದು ತಿಳಿದು ಬಂದಿದೆ.

ನಗರದ ಕೊಡಿಯಾಲ್ ಬೈಲ್‌ನಲ್ಲಿರುವ ಜೆಟ್ ಏರ್‌ ಲಿ . ಸಂಸ್ಥೆಯಲ್ಲಿ ಇವರು ಹಿರಿಯ ಅಧಿಕಾರಿಯಾಗಿ 1993 -1999ರವರೆಗೆ ಈ ಹಿಂದೆ ಕರ್ತವ್ಯ ನಿರ್ವಹಿಸಿದ್ದರು. ಈ ಅವಧಿಯಲ್ಲಿ ಇವರು ಸಂಸ್ಥೆಯ 18,78,507 ರೂ . ದುರುಪಯೋಗ ಪಡಿಸಿಕೊಂಡಿದ್ದಾಗಿ ಆರೋಪಿಸಿ ಬಂದರು ಪೊಲೀಸ್ ಠಾಣೆಯಲ್ಲಿ 1999 ರ ಮಾ . 3 ರಂದು ಪ್ರತ್ಯೇಕ 6 ಪ್ರಕರಣ ದಾಖಲಾಗಿದ್ದವು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ಸಿಜೆಎಂ ನ್ಯಾಯಾಲಯದ ನ್ಯಾಯಾಧೀಶೆ ಶಿಲ್ಪಾ ಎ.ಜಿ. ಅವರು ವಿಚಾರಣೆ ನಡೆಸಿ ಆರೋಪಿ ವರದರಾಯ ನಾಯಕ್ ಅವರಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ಆರೋಪಿಗೆ ಒಟ್ಟು ಆರು ಪ್ರಕರಣಗಳಲ್ಲಿ ಶಿಕ್ಷೆ ಹಾಗೂ ಒಟ್ಟು 12 ಲಕ್ಷ ರೂ . ದಂಡ ವಿಧಿಸಲಾಗಿದ್ದು, ಪ್ರತಿಯೊಂದು ಪ್ರಕರಣದಲ್ಲಿ ದಂಡದ ಮೊತ್ತ 1.50 ಲಕ್ಷ ರೂ. ಪಾವತಿಯಾದ ಬಳಿಕ, ಒಂಬತ್ತು ಲಕ್ಷ ರೂ ಜೆಟ್ ಏ‌.ಲಿ . ಸಂಸ್ಥೆಗೆ ಪಾವತಿಸುವಂತೆ ನ್ಯಾಯಾಲಯ ಆದೇಶಿಸಿದೆ. ಸರಕಾರದ ಪರ ಎರಡನೇ ಸಿಜೆಎಂ ನ್ಯಾಯಾಲಯದ ಹಿರಿಯ ಸರಕಾರಿ ಅಭಿಯೋಜಕ ಮೋಹನ್ ಕುಮಾರ್ ಬಿ ವಾದ ಮಂಡಿಸಿದ್ದರು.

ಓದಿ : ಉಕ್ರೇನ್​ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳಿಂದ ಜೀತ - ಪೋಷಕರ ಆರೋಪ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.