ETV Bharat / city

ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಖಜಾನೆ ತುಂಬಿತ್ತು, ಬಿಜೆಪಿಯಲ್ಲಿ ಖಾಲಿಯಾಗಿದೆ: ರಮಾನಾಥ ರೈ

ಬಿಜೆಪಿಯವರು ಕೇವಲ ಉದ್ಘಾಟಿಸಿ ನಾವೇ ಕಾಮಗಾರಿ ನಡೆಸಿದ್ದು ಎಂದು ಹೇಳಿಕೊಂಡು ಬರುತ್ತಾರೆ. ಖಜಾನೆ ಖಾಲಿಯಾದವರಿಂದ ಎಷ್ಟು ಕೆಲಸಗಳಾಗಬಹುದು ಎಂದು ಶಾಸಕ ರಮಾನಾಥ ರೈ ವ್ಯಂಗ್ಯವಾಡಿದರು.

MLA Ramanath Rai Talking about bjp Development programs
author img

By

Published : Oct 28, 2019, 11:58 PM IST

ಮಂಗಳೂರು: ಕೇವಲ ಉದ್ಘಾಟಿಸಿ ನಾವೇ ಕಾಮಗಾರಿ ನಡೆಸಿದ್ದು ಎಂದು ಹೇಳಿಕೊಳ್ಳುವವರು ಬಿಜೆಪಿಯವರು. ಖಜಾನೆ ಖಾಲಿಯಾದವರಿಂದ ಎಷ್ಟು ಕೆಲಸಗಳಾಗಬಹುದು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಖಜಾನೆ ತುಂಬಿತ್ತು. ಆದ್ದರಿಂದ ನಾವು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದೇವೆ ಎಂದು ಶಾಸಕ ರಮಾನಾಥ ರೈ ಹೇಳಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಖಜಾನೆಯೇ ಖಾಲಿಯಾದ ಬಿಜೆಪಿಗರು ಏನು ಮಾಡಲು ಸಾಧ್ಯ. ಇಂದು ನೆರೆ ಪರಿಹಾರವೇ ಕೊಡಲಾರದಂತಹ ಸ್ಥಿತಿಯಲ್ಲಿದ್ದಾರೆ ಎಂದು ಟೀಕಿಸಿದರು.

ಶಾಸಕ ರಮಾನಾಥ ರೈ

ಸಂಸದ ಪ್ರಹ್ಲಾದ ಜೋಶಿ ಅವರು ಹಿಂದೆ ದಕ್ಷಿಣ ಕನ್ನಡ ಜಿಲ್ಲೆಗೆ ಬಂದಾಗ ನಾವು ತಿನ್ನೋದಿಲ್ಲ ತಿನ್ನಲು ಬಿಡೋದಿಲ್ಲ ಎಂದಿದ್ದರು. ಈ ಜಿಲ್ಲೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ಹಲವಾರು ಮಂದಿ ಕೇಂದ್ರ ಸಚಿವರಾಗಿದ್ದರು. ಇವರಲ್ಲಿ ಯಾರು ತಿಂದವರು, ಯಾರು ತಿನ್ನದವರು ಎಂದು ಈ ಜಿಲ್ಲೆಯ ಪ್ರಜ್ಞಾವಂತ ಜನರಿಗೆ ತಿಳಿದಿದೆ ಎಂದು ಆರೋಪಿಸಿದರು.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಅದರಲ್ಲಿರುವ ಎಲ್ಲರೂ ಯೋಗ್ಯರು. ಉಳಿದವರೆಲ್ಲರೂ ಸರಿಯಿಲ್ಲದವರು ಎಂಬುವಂತೆ ಬಿಂಬಿಸುತ್ತಾರೆ. ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ಸಮಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್​ ವಿರುದ್ಧ ಅಪಪ್ರಚಾರ ಶುರುವಾಗಿದೆ. ನಮ್ಮ ಮಹಾನಗರ ಪಾಲಿಕೆ ಪ್ರತಿಷ್ಠಿತ ಪಾಲಿಕೆ. ಒಂದು ಬಾರಿ ಹೊರತುಪಡಿಸಿ ಮಿಕ್ಕೆಲ್ಲ ಸಂದರ್ಭಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಿತ್ತು ಎಂದು ಹೇಳಿದರು.

Intro:ಮಂಗಳೂರು: ಬಿಜೆಪಿಯವರು ಕೇವಲ ಉದ್ಘಾಟನೆ ಮಾಡಿ ನಾವೇ ಕಾಮಗಾರಿ ನಡೆಸಿದ್ದು ಎಂದು ಹೇಳಿಕೊಂಡು ಬರುತ್ತಾರೆ. ಆದರೆ ಖಜಾನೆ ಖಾಲಿಯಾದವರಿಂದ ಎಷ್ಟು ಕೆಲಸಗಳಾಗಬಹುದು. ಕಾಂಗ್ರೆಸ್ ಖಜಾನೆ ಖಾಲಿಯಾಗಿರಲಿಲ್ಲ. ಖಜಾನೆ ಭರ್ತಿಯಾಗಿದ್ದರಿಂದ ನಾವು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದೇವೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು.

ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಖಜಾನೆಯೇ ಖಾಲಿಯಾದ ಬಿಜೆಪಿಗರು ಏನು ಮಾಡಲು ಸಾಧ್ಯ. ಇಂದು ನೆರೆ ಪರಿಹಾರವೇ ಕೊಡಲಾರದಂತಹ ಸ್ಥಿತಿಯಲ್ಲಿದ್ದಾರೆ. ಇನ್ನೂ ಸೂಕ್ತವಾದ ಪರಿಹಾರ ಕೊಡಲಿಲ್ಲ ಎಂದು ಹೇಳಿದರು.

Body:ಪ್ರಹ್ಲಾದ ಜೋಶಿಯವರು ಹಿಂದೆ ದ.ಕ.ಜಿಲ್ಲೆಗೆ ಬಂದಾಗ ನಾವು ತಿನ್ನೋದಿಲ್ಲ ತಿನ್ನಲು ಬಿಡೋದಿಲ್ಲ ಎಂದಿದ್ದರು. ಈ ಜಿಲ್ಲೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ಹಲವಾರು ಮಂದಿ ಕೇಂದ್ರದ ಮಂತ್ರಿಗಳಾಗಿದ್ದರು. ಇವರಲ್ಲಿ ಯಾರು ತಿಂದವರು, ಯಾರು ತಿನ್ಮದವರು ಎಂದು ಈ ಜಿಲ್ಲೆಯ ಪ್ರಜ್ಞಾವಂತ ಜನರಿಗೆ ತಿಳಿದಿದೆ. ಒಂದು ಸರಕಾರ ಅಧಿಕಾರಕ್ಕೆ ಬಂದಾಗ ಅವರಲ್ಲಿರುವ ಎಲ್ಲರೂ ಯೋಗ್ಯರು. ಉಳಿದವರೆಲ್ಲರೂ ಸರಿಯಿಲ್ಲದವರು ಎಂಬ ಅರ್ಥವನ್ನು ಕೊಡುತ್ತದೆ. ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯ ಈ ಅವಧಿಯಲ್ಲಿ ಮನಾಪದ ಮೇಲೆ ವಾಟ್ಸಾಪ್ ಗಳಲ್ಲಿ ಅಪಪ್ರಚಾರ ಶುರುವಾಗಿದೆ. ನಮ್ಮ ಮಹಾನಗರ ಪಾಲಿಕೆ ಪ್ರತಿಷ್ಠಿತ ಪಾಲಿಕೆ. ಇಲ್ಲಿವರೆಗೆ ಒಂದು ಬಾರಿ ಹೊರತುಪಡಿಸಿ ಮಿಕ್ಕೆಲ್ಲಾ ಸಂದರ್ಭಗಳಲ್ಲಿ ಕಾಂಗ್ರೆಸ್ ಅಧಿಕಾರ ವಹಿಸಿಕೊಂಡಿತ್ತು. ಸಾಕಷ್ಟು ಸವಾಲುಗಳನ್ನು ನಿಭಾಯಿಸಿದೆ. ನಮ್ಮ ಮಹಾಪೌರರು ಸಾಮಾಜಿಕ ಬದುಕಿನಲ್ಲಿ ಜನಪ್ರತಿನಿಧಿಗಳು ಯಾವ ರೀತಿಯಲ್ಲಿ ಇರಬೇಕೆಂದು ಮಾದರಿಯಾಗಿದ್ದಾರೆ ಎಂದು ಹೇಳಿದರು.

Reporter_Vishwanath Panjimogaru

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.