ETV Bharat / city

ಬಂಟ್ವಾಳ ಸರ್ಕಾರಿ ಪಿಯು ಕಾಲೇಜಿನ ಕಟ್ಟಡ ಶಿಲಾನ್ಯಾಸ ನೆರವೇರಿಸಿದ ಶಾಸಕ ರಾಜೇಶ್

author img

By

Published : Sep 18, 2020, 4:34 PM IST

ಪೆಟ್ರೋನೆಟ್ ಕಂಪನಿಯು ಸಿಎಸ್​ಆರ್ ನಿಧಿಯಿಂದ ಕೊಡುಗೆಯಾಗಿ ನೀಡಿದ ವಿಜ್ಞಾನ ಪ್ರಯೋಗಾಲಯದ ಎರಡು ಕೊಠಡಿಗಳನ್ನು ಶಾಸಕ ರಾಜೇಶ್ ನಾಯ್ಕ್ ಉದ್ಘಾಟಿಸಿದರು..

ಸರ್ಕಾರಿ ಪಿಯು ಕಾಲೇಜಿನ ಕಟ್ಟಡ ಶಿಲಾನ್ಯಾಸ
ಸರ್ಕಾರಿ ಪಿಯು ಕಾಲೇಜಿನ ಕಟ್ಟಡ ಶಿಲಾನ್ಯಾಸ

ಬಂಟ್ವಾಳ : ಬಿ ಸಿ ರೋಡಿನ ಬಿ.ಮೂಡ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಹೆಚ್ಚುವರಿ ಕೊಠಡಿ, ಪ್ರಯೋಗಾಲಯ ಕೊಠಡಿ ಮತ್ತು ಶೌಚಾಲಯವನ್ನೊಳಗೊಂಡ ಸುಮಾರು 1 ಕೋಟಿ ರೂ. ವೆಚ್ಚದ ಕಟ್ಟಡ ನಿರ್ಮಾಣ ಕಾಮಗಾರಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಶಿಲಾನ್ಯಾಸ ನೆರವೇರಿಸಿದರು.

ನೂತನ ಕಟ್ಟಡದ ನೆಲ ಅಂತಸ್ತಿನಲ್ಲಿ 3 ತರಗತಿ ಕೊಠಡಿ, ಪ್ರಥಮ ಅಂತಸ್ತಿನಲ್ಲಿ 2 ಪ್ರಯೋಗ ಶಾಲೆ ಕೊಠಡಿಗಳ ನಿರ್ಮಾಣ ಹಾಗೂ ಮಹಿಳಾ ಶೌಚಾಲಯ ನಿರ್ಮಾಣ ಮಾಡಲಾಗುವ ಕುರಿತು ಮಂಜೂರಾದ ಅಂದಾಜು ಪಟ್ಟಿಯಲ್ಲಿದೆ. ಇದೇ ವೇಳೆ ಪೆಟ್ರೋನೆಟ್ ಕಂಪನಿಯು ಸಿಎಸ್​ಆರ್ ನಿಧಿಯಿಂದ ಕೊಡುಗೆಯಾಗಿ ನೀಡಿದ ವಿಜ್ಞಾನ ಪ್ರಯೋಗಾಲಯದ ಎರಡು ಕೊಠಡಿಗಳನ್ನು ಶಾಸಕ ರಾಜೇಶ್ ನಾಯ್ಕ್ ಉದ್ಘಾಟಿಸಿದರು.

ಸರ್ಕಾರಿ ಪಿಯು ಕಾಲೇಜಿನ ಕಟ್ಟಡ ಶಿಲಾನ್ಯಾಸ

ಈ ಸಂದರ್ಭ ಮಾತನಾಡಿದ ಅವರು, ಕೊರೊನಾವನ್ನು ದೇಶ ಸಮರ್ಥವಾಗಿ ಎದುರಿಸುತ್ತಿದೆ. ಇಂಥ ಕಠಿಣ ಸಂದರ್ಭದಲ್ಲೂ ವಿದ್ಯಾರ್ಥಿಗಳಿಗೆ ಬೇಕಾದ ಅನುಕೂಲಗಳನ್ನು ಸರ್ಕಾರ ಕಲ್ಪಿಸಿ ಕೊಡುತ್ತಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.