ಮಂಗಳೂರು: ನಗರದಲ್ಲಿ ಎರಡು ದಿನಗಳ ಕಾಲ ಕರ್ಫ್ಯೂ ಜಾರಿಗೊಳಿಸಿದ್ದ ಪರಿಣಾಮ ಅಗತ್ಯ ಬಳಕೆಯ ಹಾಲಿನ ವ್ಯವಹಾರದಲ್ಲಿಯೂ ಸಾಕಷ್ಟು ಪರಿಣಾಮ ಬೀರಿದೆ ಎಂದು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ತಿಳಿಸಿದ್ದಾರೆ.
ಪೌರತ್ವ ಕಾಯ್ದೆ ವಿಚಾರವಾಗಿ ನಗರದಲ್ಲಿ ಕರ್ಫ್ಯೂ ಜಾರಿಯಾದ್ದರಿಂದ ಪ್ರತಿದಿನ 70 ಸಾವಿರ ಲೀಟರ್ ಹಾಲಿನ ವ್ಯಾಪಾರ ನಷ್ಟವಾಗಿದೆ. ಹಿಂದೆ ಪ್ರತಿಭಟನೆ, ಕರ್ಫ್ಯೂ ಸಂದರ್ಭದಲ್ಲಿ ಹಾಲಿನ ವಾಹನಕ್ಕೆ, ಹಾಲಿನ ಮಾರಾಟಕ್ಕೆ ವಿನಾಯಿತಿ ಇತ್ತು. ಆದರೆ ಈ ಬಾರಿ ಹಾಲಿನ ವಾಹನ ಸಂಚಾರಕ್ಕೂ ತೊಡಕುಂಟಾಯಿತು ಎಂದು ವಿಷಾದ ವ್ಯಕ್ತಪಡಿಸಿದರು. ಮಾರಾಟವಾಗದೆ ಹಾಲು ಉಳಿದಿರುವುದರಿಂದ ಇದನ್ನು ಹಾಲಿನ ಪುಡಿ ಮಾಡಲು ಹಾಸನ ಮತ್ತು ಧಾರವಾಡಕ್ಕೆ ಕಳುಹಿಸಲಾಗಿದೆ. ಸಾಕಷ್ಟು ಹಾಲನ್ನು ಮೂರು ತಿಂಗಳು ಕೆಡದಂತೆ ಮಾಡಲಾಗಿದೆ. ಹಾಲು ಪುಡಿ ಮಾಡಿರುವುದರಿಂದ ಪ್ರತಿ ಲೀಟರ್ಗೆ ಹತ್ತು ರೂಪಾಯಿ ನಷ್ಟವಾಗಿದೆ ಎಂದರು.