ಮಂಗಳೂರು: ಇಲ್ಲಿನ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಏರ್ಪೋರ್ಟ್ ಕೌನ್ಸಿಲ್ ಇಂಟರ್‌ನ್ಯಾಶನಲ್ ( ಎಸಿಐ) ಒಂದು ವರ್ಷದ ಮಾನ್ಯತೆಯ ಪ್ರಮಾಣಪತ್ರ ನೀಡಿದೆ. ವಿಮಾನಯಾನ ಗ್ರಾಹಕರ ಅನುಭವದ ಸುಧಾರಣೆಗೆ ವಿಮಾನ ನಿಲ್ದಾಣದ ಬದ್ಧತೆಯನ್ನು ಗುರುತಿಸಿ ಈ ಪ್ರಮಾಣಪತ್ರ ನೀಡಲಾಗಿದೆ.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಫೆಬ್ರವರಿ 2021ರಲ್ಲಿ ಸ್ವೀಕರಿಸಿದ ಪ್ರತಿಷ್ಠಿತ ಎಸಿಐ, ವರ್ಲ್ಡ್ ವಾಯ್ಸ್ ಆಫ್ ದಿ ಕಸ್ಟಮರ್ ಪ್ರಶಸ್ತಿಯ ಬೆನ್ನಲ್ಲೇ ಈ ಮಾನ್ಯತೆ ಪಡೆದಿದೆ. ಏಷ್ಯಾ ಪೆಸಿಫಿಕ್ ವಲಯದಿಂದ ಮಾನ್ಯತೆಯನ್ನು ಪಡೆದ ಭಾರತದ 3ನೇ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಇದು ಜಾಗತಿಕವಾಗಿ ಸ್ಥಾಪಿಸಲಾದ ಏರ್ಪೋಟ್ ಸೇವಾ ಗುಣಮಟ್ಟ (ಎಎಸ್‌ಕ್ಯೂ ) ಕಾರ್ಯಕ್ರಮದ ಒಂದು ಭಾಗವಾಗಿದೆ.
ಇದನ್ನೂ ಓದಿ: ಶ್ರೀ ಬಪ್ಪನಾಡು ದುರ್ಗೆ ಶಯನ ಸೇವೆ: 2 ಕೋಟಿ ರೂ. ಮೌಲ್ಯದ ಮಲ್ಲಿಗೆಯಲ್ಲಿ ದೇವಿ ಅಲಂಕಾರ