ಮಂಗಳೂರು: ನಗರದಲ್ಲಿ ಮತ್ತೆ ಐಟಿ ದಾಳಿ ಮುಂದುವರಿದಿದ್ದು, ಶಾಸಕ ಯು.ಟಿ. ಖಾದರ್ ಸಹೋದರ ಇಫ್ತಿಕಾರ್ ಮನೆ ಮೇಲೆ ಐಟಿ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ.
ನಗರದ ಲೈಟ್ ಹೌಸ್ ಹಿಲ್ ರೋಡ್ನಲ್ಲಿರುವ ಮೋತಿಶಾಮ್ ಅಕ್ರೋಪೊಲಿಸ್ ಬಿಲ್ಡಿಂಗ್ನ 8ನೇ ಮಹಡಿಯಲ್ಲಿನ ಇಫ್ತಿಕಾರ್ ಮನೆ ಮೇಲೆ ಐಟಿ ರೈಡ್ ನಡೆಸಿದೆ. ಮೂಲಗಳ ಪ್ರಕಾರ ಇಫ್ತಿಕಾರ್ ಮನೆಗೂ ಐಟಿ ಇಲಾಖೆ ನಿನ್ನೆಯೇ ದಾಳಿ ನಡೆಸಿದ್ದು, ರಾತ್ರಿ ಪೂರ್ತಿ ದಾಖಲೆಗಳನ್ನು ಪರಿಶೀಲನೆ ನಡೆಸಿದೆ. ಇಂದೂ ಕೂಡ ದಾಖಲೆಗಳ ಪರಿಶೀಲನೆ ಮುಂದುವರಿದಿದೆ ಎಂದು ತಿಳಿದು ಬಂದಿದೆ.
ಓದಿ-ಮಂಗಳೂರಲ್ಲಿ ಐಟಿ ದಾಳಿ... ರೇಡ್ಗೂ ಮುನ್ನ ಹೇಗಿತ್ತು ಗೊತ್ತಾ ಅಧಿಕಾರಿಗಳ ಪ್ಲಾನ್!?
ಅಲ್ಲದೆ, ನಿನ್ನೆ ಬೆಳ್ಳಂಬೆಳಗ್ಗೆ ನಗರದ ನಾಲ್ವರು ಪ್ರತಿಷ್ಠಿತ ಉದ್ಯಮಿಗಳ ಒಡೆತನದ ಮನೆ, ಕಚೇರಿ, ಆಸ್ಪತ್ರೆ ಹಾಗೂ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿ ಭರ್ಜರಿ ಬೇಟೆಯಾಡಿದ್ದರು. ಕಾರ್ಯಾಚರಣೆಯಲ್ಲಿ ಕೋಟ್ಯಂತರ ರೂ. ನಗದು ಮತ್ತು ಭಾರೀ ಪ್ರಮಾಣದ ಚಿನ್ನ ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.