ಮಂಗಳೂರು: ಲಾರಿಯಲ್ಲಿ ಕೊಲ್ಲಾಪುರದಿಂದ ಕಾಸರಗೋಡಿಗೆ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಏಳು ಮಂದಿಯನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.
ಕಾರು ಮತ್ತು ಲಾರಿಯಲ್ಲಿದ್ದ ವೇಣೂರಿನ ಹೈದರ್, ಕಾಸರಗೋಡು ಆಲಂಬಾಡಿಯ ಅಬ್ದುಲ್ ರಹಿಮಾನ್, ಪಡ್ರೆ ನಿವಾಸಿ ಬಾಬು , ಹಾಸನದ ಮಂಜೇಗೌಡ, ಕಾಸರಗೋಡು ಆಲಂಬಾಡಿಯ ಅಬ್ದುಲ್ ರಹಿಮಾನ್, ಮುಹಮ್ಮದ್ ಮುಸ್ತಫಾ ಮತ್ತು ಮುಹಮ್ಮದ್ ಅಕ್ಬರ್ ಬಂಧಿತರು.
ಲಾರಿಯಲ್ಲಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಸಬರಬೈಲುವಿನಲ್ಲಿ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. ಲಾರಿಯಲ್ಲಿ 12 ಕೋಣ, 5 ಎಮ್ಮೆ ಸಾಗಾಟ ಮಾಡಲಾಗುತ್ತಿತ್ತು. ಆರೋಪಿಗಳನ್ನು ಬಂಧಿಸಿದ ಪೊಲೀಸರು 2 ವಾಹನ ಮತ್ತು 17ಜಾನುವಾರುಗಳನ್ನು ವಶಪಡಿಸಿಕೊಂಡಿದ್ದಾರೆ.