ಮಂಗಳೂರು: ಪಕ್ಷಿಕೆರೆಯಲ್ಲಿರುವ ಬದ್ರಿಯಾ ಮಸೀದಿಗೆ ಹಿಂದೂ ಕಲಾವಿದರೊಬ್ಬರು ಆಕರ್ಷಕವಾದ ಕಾಷ್ಠಶಿಲ್ಪ ನಿರ್ಮಿಸಿದ್ದಾರೆ. ಬದ್ರಿಯಾ ಜುಮ್ಮಾ ಮಸೀದಿಯ ಒಳಾಂಗಣ ವಿನ್ಯಾಸ ಕಾರ್ಯ ಇತ್ತೀಚೆಗೆ ನಡೆದಿದ್ದು, ಸುಮಾರು 1 ಸಾವಿರ ಚದರಡಿ ವ್ಯಾಪ್ತಿಯಲ್ಲಿ ಮರದ ಶಿಲ್ಪ ರಚಿಸಲಾಗಿದೆ. ಹಿಂದೂ ಶಿಲ್ಪಿಯೊಬ್ಬರು ಈ ಮಸೀದಿಯ ಒಳಭಾಗದ ಕೆತ್ತನೆ ಮಾಡಿರುವುದು ಗಮನಸೆಳೆಯುತ್ತಿದೆ.
ಉಡುಪಿ ಜಿಲ್ಲೆಯ ಕಾಪುವಿನ ಹರೀಶ್ ಆಚಾರ್ಯ ಎಂಬವರು ಮಸೀದಿಯ ಮರದ ಕೆತ್ತನೆ ಮಾಡಿದ್ದಾರೆ. ಕಾಪು ಬಳಿಯ ಮಜೂರು ಎಂಬಲ್ಲಿನ ಮಸೀದಿಗೂ ಇವರದ್ದೇ ಮರದ ಕೆತ್ತನೆ. ಅಲ್ಲದೇ 25 ದೇವಸ್ಥಾನಗಳಲ್ಲಿ ಮರದ ಕೆತ್ತನೆಯನ್ನು ಮಾಡಿದ ಅನುಭವ ಇವರಿಗಿದೆ.
ಮಜೂರುನಲ್ಲಿ ಮಸೀದಿಗೆ ಮೊದಲ ಬಾರಿಗೆ ಇಂಡೋ-ಇಸ್ಲಾಮಿಕ್ ಶೈಲಿಯಲ್ಲಿ ಇವರು ಮರದ ಕೆತ್ತನೆ ಮಾಡಿದ್ದರು. ಇದೀಗ ಪಕ್ಷಿಕೆರೆ ಜುಮ್ಮಾ ಮಸೀದಿಯಲ್ಲೂ ಅದ್ಬುತ ಕೌಶಲ್ಯ ಮೆರೆದಿದ್ದಾರೆ. ಮಸೀದಿಯಲ್ಲಿ ಮಾಡಲಾದ ವಿಶೇಷ ರಚನೆಯನ್ನು ಜಾತಿ-ಧರ್ಮ ಭೇದವಿಲ್ಲದೆ ಬಂದು ಜನರು ವೀಕ್ಷಿಸುತ್ತಿದ್ದಾರೆ.
ಇದನ್ನೂ ಓದಿ: ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸಲು ಆಗ್ರಹ; ಮಂಗಳೂರಿನ ಬೈಕರ್ಸ್ ವಿಭಿನ್ನ ಪ್ರಯತ್ನ!