ETV Bharat / city

ಮಂಗಳೂರು ಗುಡ್ಡ ಕುಸಿತ ಪ್ರಕರಣ: ಮಣ್ಣಿನಡಿ ಸಿಲುಕಿದ್ದ ಇಬ್ಬರು ಮಕ್ಕಳು ಶವವಾಗಿ ಪತ್ತೆ!

ಗುರುಪುರದ ಬಂಗ್ಲೆಗುಡ್ಡೆಯಲ್ಲಿ ಮನೆಯ ಮೇಲೆ ಗುಡ್ಡ ಕುಸಿದಿದೆ. ಘಟನೆಯಿಂದ ಇಬ್ಬರು ಮಕ್ಕಳು ಮಣ್ಣಿನಡಿ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ. ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

hill-collapse-two-children-trapped-under-mud
ಮನೆಯ ಮೇಲೆ ಗುಡ್ಡ ಕುಸಿತ
author img

By

Published : Jul 5, 2020, 5:08 PM IST

Updated : Jul 5, 2020, 6:30 PM IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಗುರುಪುರದ ಬಂಗ್ಲೆಗುಡ್ಡೆಯಲ್ಲಿ ಮನೆಗಳ ಮೇಲೆ ಗುಡ್ಡ ಕುಸಿದ ಪರಿಣಾಮ ಒಂದೇ ಮನೆಯ ಇಬ್ಬರು ಮಕ್ಕಳು ಮಣ್ಣಿನಡಿ ಸಿಲುಕಿದ್ದರು. ಈಗ ಆ ಇಬ್ಬರು ಮಕ್ಕಳು ಶವವಾಗಿ ಪತ್ತೆಯಾಗಿದ್ದಾರೆ.

ಮೃತರನ್ನು ಬಂಗ್ಲಗುಡ್ಡ ನಿವಾಸಿ ಮಹಮ್ಮದ್ ಶರೀಫ್ ಎಂಬವರ ಪುತ್ರ ಸಫ್ವಾನ್(16) ಹಾಗೂ ಪುತ್ರಿ ಸಹಾಲ(10) ಎಂದು ಗುರತಿಸಲಾಗಿದೆ.

ಮನೆಯ ಮೇಲೆ ಗುಡ್ಡ ಕುಸಿತ, ಇಬ್ಬರು ಮಕ್ಕಳು ದುರ್ಮರಣ

ಅಗ್ನಿಶಾಮಕ ದಳ, ಎನ್​ಡಿಆರ್​ಎಫ್, ಪೊಲೀಸರು, ಸ್ಥಳೀಯರ ಸಹಕಾರದಿಂದ ಮಣ್ಣು ತೆರವು ಕಾರ್ಯಾಚರಣೆ ನಡೆಸಿದ್ದು, ಮಣ್ಣಿನಡಿಯಲ್ಲಿ ಸಿಲುಕಿರುವ ನಜ್ಜುಗುಜ್ಜಾಗಿರುವ ಆಟೋರಿಕ್ಷಾ ಹಾಗೂ ಬೈಕ್​ಗಳನ್ನು ತೆರವುಗೊಳಿಸಲಾಗಿದೆ. ನಾಲ್ಕು ಮನೆಗಳು ಸಂಪೂರ್ಣ ಕುಸಿದಿದ್ದು, ನಿರ್ಮಾಣ ಹಂತದಲ್ಲಿರುವ ಒಂದು ಮನೆಯೂ ಬೀಳುವ ಹಂತದಲ್ಲಿದೆ. ಅಲ್ಲದೆ ಗುಡ್ಡದ ಮೇಲಿರುವ ಇನ್ನೂ 32 ಮನೆಗಳು ಅಪಾಯದ ಅಂಚಿನಲ್ಲಿವೆ.

ಮಧ್ಯಾಹ್ನ ಸುಮಾರು 2 ಗಂಟೆಗೆ ಘಟನೆ ನಡೆದಿದ್ದು, ಮಂಗಳೂರಿನ ಕದ್ರಿ ಹಾಗೂ ಪಾಂಡೇಶ್ವರದ ಎರಡು ಅಗ್ನಿಶಾಮಕ ವಾಹನಗಳು ತಕ್ಷಣ ಸ್ಥಳಕ್ಕಾಗಮಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಘಟನಾ ಸ್ಥಳದಲ್ಲಿ ಎಸಿ ಮದನ್ ಮೋಹನ್, ಬಜ್ಪೆ ಪೊಲೀಸ್ ಅಧಿಕಾರಿಗಳು ಬೀಡುಬಿಟ್ಟಿದ್ದಾರೆ.

Last Updated : Jul 5, 2020, 6:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.