ETV Bharat / city

ಐವರು ಸಾಹಸಿ ಯುವತಿಯರಿಗೆ ಉಳ್ಳಾಲ ತೀರದಲ್ಲಿ ಸಚಿವರು, ಶಾಸಕರಿಂದ ಅದ್ಧೂರಿ ಸ್ವಾಗತ - ಶಿಖರಾರೋಹಣ

ಶಿಖರಾರೋಹಣ ಹಾಗೂ ಸಾಗರಯಾನ ಅಭಿಯಾನದಲ್ಲಿ ಭಾಗವಹಿಸಿರುವ ರಾಜ್ಯದ ಐವರು ಯುವತಿಯರಿಗೆ ಉಳ್ಳಾಲದ ಕಡಲ ತೀರದಲ್ಲಿ ಇಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಶಾಸಕ ಯು.ಟಿ. ಖಾದರ್ ಅದ್ಧೂರಿ ಸ್ವಾಗತ ಕೋರಿದರು.

grand welcome to achievers by politician in ullala
ಸಾಹಸಿ ಯುವತಿಯರಿಗೆ ಉಳ್ಳಾಲ ತೀರದಲ್ಲಿ ಸಚಿವರು, ಶಾಸಕರಿಂದ ಅದ್ಧೂರಿ ಸ್ವಾಗತ
author img

By

Published : Nov 2, 2021, 9:51 AM IST

ಮಂಗಳೂರು: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಕೈಗೊಳ್ಳಲಾಗಿದ್ದ ಐತಿಹಾಸಿಕ ಶಿಖರಾರೋಹಣ ಹಾಗೂ ಸಾಗರಯಾನ ಅಭಿಯಾನದಲ್ಲಿ ಭಾಗವಹಿಸಿರುವ ರಾಜ್ಯದ ಐವರು ಯುವತಿಯರಿಗೆ ಉಳ್ಳಾಲದ ಕಡಲ ತೀರದಲ್ಲಿಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಶಾಸಕ ಯು.ಟಿ. ಖಾದರ್ ಅದ್ಧೂರಿ ಸ್ವಾಗತ ಕೋರಿದರು.

ಶಿವಮೊಗ್ಗದ ಐಶ್ವರ್ಯಾ ವಿ., ಬೆಂಗಳೂರಿನ ಧನಲಕ್ಷ್ಮೀ, ಆಶಾ, ಮೈಸೂರಿನ ಬಿಂದು, ಕೊಡಗಿನ ಪುಷ್ಪಾ ಎಂಬ ಯುವತಿಯರನ್ನು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಯು.ಟಿ. ಖಾದರ್ ಅದ್ಧೂರಿ ಸ್ವಾಗತಿಸಿದರು.

grand welcome to achievers by politician in ullala
ಸಾಹಸಿ ಯುವತಿಯರಿಗೆ ಉಳ್ಳಾಲ ತೀರದಲ್ಲಿ ಸಚಿವರು, ಶಾಸಕರಿಂದ ಅದ್ಧೂರಿ ಸ್ವಾಗತ

ಕಾರವಾರದಿಂದ ಕಯಾಕ್ ಮೂಲಕ ಹೊರಟ ಈ ಐವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಯುವತಿಯರ ತಂಡವು ನವೆಂಬರ್ 1ರಂದು ಉಳ್ಳಾಲ ಕಡಲ ತೀರಕ್ಕೆ ಬಂದು ಈ ಸಾಹಸ ಯಾತ್ರೆಯನ್ನು ಪೂರ್ಣಗೊಳಿಸಿದ್ದಾರೆ.‌ ಕಾಶ್ಮೀರದ ಕೊಲ್ಹೋಯಿ (5,425 ಮೀ.) ಶಿಖರವನ್ನು ಏರಿದ ಈ ಯುವತಿಯರು ಜಗತ್ತಿನ ಅತಿ ಎತ್ತರದ ರಸ್ತೆಯಾದ ಲಡಾಖ್​ನ ಕರ್ ದೂಂಗ್ಲ ಪಾಸ್ ಮೂಲಕ 3,350 ಕಿ.ಮೀ‌ ಸೈಕಲ್ ಯಾನ ಮಾಡಿದ್ದಾರೆ‌. ಅಲ್ಲಿಂದ ಕಾರವಾರ ತಲುಪಿ ರಾಜ್ಯದ ಕರಾವಳಿ ಸಮುದ್ರದಲ್ಲಿ 300 ಕಿ.ಮೀ. ಕಯಾಕಿಂಗ್ ಯಾನ ಮಾಡಿ ಮಂಗಳೂರಿನ ಉಳ್ಳಾಲದ ಕಡಲ ತೀರವನ್ನು ತಲುಪಿದ್ದಾರೆ.

ಇದನ್ನೂ ಓದಿ: ಅಪ್ಪು ಪುಣ್ಯಸ್ಮರಣೆ: 3 ಗಂಟೆಗಳಲ್ಲಿ 100 ಗಿಡ ನೆಟ್ಟು ಗೌರವ ಸೂಚಿಸಿದ ಅಭಿಮಾನಿಗಳು

ಯುವತಿಯರ ಈ ಯಾತ್ರೆಗೆ 2021ರ ಆಗಸ್ಟ್‌ 16 ರಂದು ಕ್ರೀಡಾ ಸಚಿವರು ಚಾಲನೆ ನೀಡಿದ್ದರು. ಸುಮಾರು 70 ದಿನಗಳ ಸಾಹಸ ಯಾತ್ರೆಯಾಗಿದ್ದು, ಸ್ತ್ರೀಶಕ್ತಿ ಸಾಹಸ, ಧೈರ್ಯ, ಸಮಾನತೆ, ಸ್ತ್ರೀಸಬಲೀಕರಣ ತತ್ವವನ್ನು ಬಿಂಬಿಸುವ ವಿಭಿನ್ನವಾದ ಪ್ರಯತ್ನವಾಗಿದೆ. ಭಾರತೀಯ ಪರ್ವತಾರೋಹಣ ಸಂಸ್ಥೆಯ ದಕ್ಷಿಣ ವಲಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯ ಸಹಯೋಗದೊಂದಿಗೆ ಈ ಸಾಹಸ ಯಾತ್ರೆಯನ್ನು ನಡೆಸಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.