ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಿನ್ನ ಸಾಗಿಸುತ್ತಿದ್ದ ಆರೋಪಿಯನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದು, ₹31,73,920 ಮೌಲ್ಯದ 664 ಗ್ರಾಂ. ಚಿನ್ನ ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ...ಗಾಂಜಾ ಸೇವನೆ, ಮಾರಾಟ ಆರೋಪ: ಇಬ್ಬರ ಬಂಧನ
ಮಂಗಳೂರಿನ ಕಸಬಾ ಬೆಂಗ್ರೆ ಮೊಹಮ್ಮದ್ ಅರ್ಷದ್ ಬಂಧಿತ. ವಿದೇಶದಿಂದ ಮಂಗಳೂರಿಗೆ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಆರೋಪಿ ಚಿನ್ನವನ್ನು ಪೌಡರ್ ರೂಪದಲ್ಲಿನ ಅಂಟಿನೊಂದಿಗೆ ಮಿಶ್ರಣ ಮಾಡಿದ್ದ.