ಮಂಗಳೂರು : ಇಷ್ಟು ಸಮಯಗಳ ಕಾಲ ಕೋವಿಡ್ ಸೋಂಕಿನಿಂದ ತೊಂದರೆಗಳಾದರೂ ನಾವು ಲೆಕ್ಕಿಸಲಿಲ್ಲ. ಅದೇ ರೀತಿ ಈ ಬಾರಿ ಕೂಡ ಭಕ್ತಾದಿಗಳು ಕೋವಿಡ್ಗೆ ಹೆದರದೆ ಎಲ್ಲರೂ ಒಂದಾಗಿ ಎದುರಿಸಬೇಕು ಎಂದು ಮಾಜಿ ಸಚಿವ ಬಿ. ಜನಾರ್ಧನ ಪೂಜಾರಿ ಪೂಜಾರಿ ಹೇಳಿದರು.
ಶ್ರೀ ಕ್ಷೇತ್ರ ಕುದ್ರೋಳಿಯಲ್ಲಿ ಮಂಗಳೂರು ದಸರಾವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ವರೂ ಸರ್ಕಾರ ಹೇಳಿರುವ ಕೋವಿಡ್ ನಿಯಮ ಪಾಲಿಸಬೇಕು. ಜನರಿಗೆ ತೊಂದರೆಯಾಗದ ರೀತಿ ಎಲ್ಲಾ ಭಕ್ತರು ನಿಯಮಗಳನ್ನು ಪಾಲಿಸಿಕೊಂಡು ಈವರೆಗೆ ಬಂದಿದ್ದಾರೆ. ಅದೇ ರೀತಿ ಇನ್ನೂ ಕೂಡ ಕೋವಿಡ್ ನಿಯಮ ಪಾಲಿಸಿ ದಸರಾ ಕಾರ್ಯಕ್ರಮವನ್ನು ನೆರವೇರಿಸಿ ಕೊಡಬೇಕು ಎಂದು ತಿಳಿಸಿದರು.
ಇದನ್ನೂ ಓದಿ: ವೈಭವದ ಮಂಗಳೂರು ದಸರಾ ಮಹೋತ್ಸವಕ್ಕೆ ಸಂಭ್ರಮದ ಚಾಲನೆ..
ಕುದ್ರೋಳಿಯ ಶ್ರೀ ದೇವರಲ್ಲಿ ಇಷ್ಟು ವರ್ಷಗಳ ಕಾಲ ಯಾವ ರೀತಿ ಪ್ರಾರ್ಥನೆ ಮಾಡಿಕೊಂಡು ಬಂದಿದ್ದೇನೋ, ಅದೇ ರೀತಿ ಮಾಡಿದ್ದೇನೆ. ಶ್ರೀದೇವಿ ಎಲ್ಲರಿಗೂ ಶುಭವನ್ನು ಅನುಗ್ರಹಿಸಲಿ ಎಂದು ಜನಾರ್ಧನ ಪೂಜಾರಿ ಹೇಳಿದರು.
ಇದನ್ನೂ ಓದಿ: 'ನಮ್ಮ ದಸರಾ-ನಮ್ಮ ಸುರಕ್ಷೆ'ಯಡಿ ಮಂಗಳೂರು ದಸರಾ: ಶ್ರೀ ಕ್ಷೇತ್ರ ಕುದ್ರೋಳಿಯಲ್ಲಿ ಕೋವಿಡ್ ಲಸಿಕೆಗೂ ವ್ಯವಸ್ಥೆ