ಬಂಟ್ವಾಳ(ದಕ್ಷಿಣ ಕನ್ನಡ) : ಕೆಲಸ ಮುಗಿಸಿ ಕೈ ಕಾಲು ತೊಳೆಯಲು ಎಂದು ನೇತ್ರಾವತಿ ನದಿಗೆ ಇಳಿದ ವ್ಯಕ್ತಿಯೋರ್ವ ಆಯತಪ್ಪಿ ನದಿಗೆ ಬಿದ್ದು ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ನಾಪತ್ತೆಯಾದ ಘಟನೆ ಬಿ ಸಿ ರೋಡ್ ನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಛತ್ತೀಸ್ಗಢ ರಾಜ್ಯದ ಬಸ್ತರ ಜಿಲ್ಲೆಯ ಬಡ್ಡೆಬಂದಮ ಗ್ರಾಮದ ಜಮ್ಮವಾಡ ನಿವಾಸಿ ಆನಂದ ಕಶ್ಯಪ (28) ಕಾಣೆಯಾದ ವ್ಯಕ್ತಿ ಎಂದು ತಿಳಿದುಬಂದಿದೆ.
ಕಳೆದ ಒಂದು ತಿಂಗಳಿನಿಂದ ಬಂಟ್ವಾಳ ರೈಲ್ವೆ ಸ್ಟೇಷನ್ನ ಪಕ್ಕದಲ್ಲಿ ರೈಲ್ವೆ ವಿದ್ಯುದೀಕರಣ ಕಾಮಗಾರಿಯನ್ನು ಕಶ್ಯಪ್ ಮಾಡಿಕೊಂಡಿದ್ದರು. ಆನಂದ ಕಶ್ಯಪ ಅವರು ಕೆಲಸ ಮುಗಿಸಿ ಬಳಿಕ ಅಲ್ಲೇ ಸಮೀಪದ ನೇತ್ರಾವತಿ ನದಿಗೆ ಕೈಕಾಲು ತೊಳೆಯುವ ಉದ್ದೇಶದಿಂದ ನೀರಿಗಿಳಿದ ವೇಳೆ ಆಯತಪ್ಪಿ ನದಿಗೆ ಬಿದ್ದಿದ್ದಾರೆ.
ನದಿಗೆ ಬಿದ್ದಾಗ ಬೊಬ್ಬೆ ಹೊಡೆದಾಗ ಆತನೊಂದಿಗೆ ಇತರ ಕೆಲಸಗಾರರು ಓಡಿ ಹೋಗಿ ನೋಡಿದಾಗ ಆತ ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವುದು ಕಂಡಿದೆ. ಈ ಬಗ್ಗೆ ನಗರ ಪೋಲೀಸ್ ಠಾಣೆಗೆ ಸಹೋದ್ಯೋಗಿಗಳು ದೂರು ನೀಡಿದ್ದಾರೆ. ದೂರಿನನ್ವಯ ಪೊಲೀಸರು ಹುಡುಕಾಟ ಕಾರ್ಯವನ್ನು ಆರಂಭಿಸಿದ್ದಾರೆ.
ಇದನ್ನೂ ಓದಿ : ವಿಜಯಪುರದಲ್ಲಿ ಡೋಣಿ ನದಿ ಪ್ರವಾಹ: ಆಂಜನೇಯ ಸ್ವಾಮಿ ದೇಗುಲ ಜಲಾವೃತ