ETV Bharat / city

ಪ್ರವಾಹ ಬಂದಾಗ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಹೆಚ್ಚು: ಡಾ.ರಾಮಕೃಷ್ಣ ರಾವ್ - flood news

ಪ್ರವಾಹಗಳು ಬಂದಾಗ ತೆರೆದ ಬಾವಿಗಳು, ಕೊಳವೆ ಬಾವಿಗಳ ನೀರು ಕಲುಷಿತಗೊಳ್ಳುತ್ತದೆ. ಜನರು ಈ ಬಗ್ಗೆ ಬಹಳ ಜಾಗೃತಿ ವಹಿಸದಿದ್ದರೆ ಸಾಂಕ್ರಾಮಿಕ ರೋಗಗಳು ಹರಡುವ ಅಪಾಯವಿರುತ್ತದೆ ಎಂದು ದ.ಕ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಂ ರಾಮಕೃಷ್ಣ ರಾವ್ ಹೇಳಿದರು.

ಡಾ.ರಾಮಕೃಷ್ಣ ರಾವ್
author img

By

Published : Aug 12, 2019, 6:09 AM IST

ಮಂಗಳೂರು: ಪ್ರವಾಹಗಳು ಬಂದಾಗ ತೆರೆದ ಬಾವಿಗಳು, ಕೊಳವೆ ಬಾವಿಗಳ ನೀರು ಕಲುಷಿತಗೊಳ್ಳುತ್ತದೆ. ಜನರು ಈ ಬಗ್ಗೆ ಬಹಳ ಜಾಗೃತಿ ವಹಿಸದಿದ್ದರೆ ಸಾಂಕ್ರಾಮಿಕ ರೋಗಗಳು ಹರಡುವ ಅಪಾಯವಿರುತ್ತದೆ ಎಂದು ದ.ಕ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಂ ರಾಮಕೃಷ್ಣ ರಾವ್ ಹೇಳಿದರು.

ಸಾಂಕ್ರಾಮಿಕ ರೋಗಗಳ ಕುರಿತು ಡಾ.ರಾಮಕೃಷ್ಣ ರಾವ್ ಪ್ರತಿಕ್ರಿಯೆ

ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮುಖ್ಯವಾಗಿ ವಾಂತಿ, ಬೇಧಿ, ವಿಷಮಶೀತ ಜ್ವರ(ಟೈಫಾಯಿಡ್), ಇಲಿ ಜ್ವರ, ಕಾಮಾಲೆ ರೋಗ (ಜಾಂಡಿಸ್)ಗಳು ಕಲುಷಿತ ನೀರು ಬಳಸುವುದರಿಂದ ಹರಡುವ ರೋಗಗಳಾಗಿವೆ. ಕಲುಷಿತ ನೀರನ್ನು ಹಾಗೆಯೇ ಕುಡಿದಲ್ಲಿ ಈ ರೋಗಗಳು ಹರಡುತ್ತವೆ. ಆದ್ದರಿಂದ ನೀರನ್ನು 20 ನಿಮಿಷಗಳ ಕಾಲ ಕುದಿಸಿಯೇ ಸೇವನೆ ಮಾಡಬೇಕು. ಈ ರೀತಿಯಲ್ಲಿ ನೀರನ್ನು ಕುದಿಸಿದಾಗ ಅದರಲ್ಲಿರುವ ಬ್ಯಾಕ್ಟೀರಿಯಾಗಳು ನಾಶವಾಗುತ್ತದೆ. ಅಲ್ಲದೆ ನೀರು ಕುದಿಸುವ ಮೊದಲು ಗಾಳಿಸಿ ಅಥವಾ ಸೋಸ ಬೇಕು ಎಂದು ಆರೋಗ್ಯಾಧಿಕಾರಿ ಡಾ.ಎಂ.ರಾಮಕೃಷ್ಣ ರಾವ್ ಹೇಳಿದರು.

ಪೇಪರ್ ಕಪ್, ಪ್ಲಾಸ್ಟಿಕ್​ಗಳು, ಎಳನೀರು ಚಿಪ್ಪು, ಬಾಟಲಿಗಳು ಮುಂತಾದವುಗಳನ್ನು ಸರಿಯಾಗಿ ವಿಲೇವಾರಿ ಮಾಡದಿದ್ದರೆವ ಇವುಗಳಿಂದ ರೋಗವಾಹಕಗಳು ಹುಟ್ಟಿ ಜನರಿಗೆ ನಾನಾ ರೀತಿಯ ಸಾಂಕ್ರಾಮಿಕ ರೋಗಗಳನ್ನು ಹರಡುತ್ತವೆ. ನೀರು ನಿಂತ ಸ್ಥಳವಿದ್ದರೆ ಅದನ್ನು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡಬೇಕು‌. ಇಲ್ಲದಿದ್ದರೆ ಇದರಲ್ಲಿ ಸೊಳ್ಳೆಗಳು ವಂಶಾಭಿವೃದ್ಧಿಯಾಗಿ ಜನರಿಗೆ ಕಾಯಿಲೆಗಳು ಹರಡುತ್ತವೆ.

ಇಡೀ ಜಿಲ್ಲೆಯಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುವ ಲಾರ್ವಾವನ್ನು ನಾಶ ಮಾಡಲು ಜಿಲ್ಲಾಧಿಕಾರಿಯವರ ಆದೇಶ ಹಾಗೂ ನಿರ್ದೇಶನದೊಂದಿಗೆ ಮಹಾನಗರ ವ್ಯಾಪ್ತಿಯಲ್ಲಿ ನಾವು ನೂರರಷ್ಟು ತಂಡ ರಚಿಸಿ ಸುಮಾರು 15 ದಿನಗಳೊಳಗೆ ಸುಮಾರು 50,930 ಮನೆಗಳಲ್ಲಿ ಕಾರ್ಯಾಚರಣೆ ನಡೆದಿದ್ದೇವೆ. ಇದರಿಂದ ನಮಗೆ ಬಹಳಷ್ಟು ಮನೆಗಳಲ್ಲಿ ಲಾರ್ವಾ ಕಂಡು ಬಂದಿದೆ. ಹೆಚ್ಚಿನ ಮನೆಗಳಲ್ಲಿ ಶೇ.10 ರಷ್ಟು ಲಾರ್ವಾ ಕಂಡು ಬಂದಿದೆ. ಜೊತೆಗೆ ಜನರಿಗೆ ಎಲ್ಲಿಯೂ ಘನತ್ಯಾಜ್ಯ ವಸ್ತುಗಳನ್ನು ಎಸೆಯದಂತೆ ಜಾಗೃತಿಯನ್ನು ಮೂಡಿಸಲಾಗದೆ ಎಂದು ಡಾ.ಎಂ.ರಾಮಕೃಷ್ಣ ರಾವ್ ಹೇಳಿದರು.

Intro:ಮಂಗಳೂರು: ಪ್ರವಾಹಗಳು ಬಂದಾಗ ತೆರೆದ ಬಾವಿಗಳು, ಕೊಳವೆ ಬಾವಿಗಳ ನೀರು ಕಲುಷಿತಗೊಳ್ಳುತ್ತದೆ. ಜನರು ಈ ಬಗ್ಗೆ ಬಹಳ ಜಾಗೃತಿ ವಹಿಸದಿದ್ದರೆ ಸಾಂಕ್ರಾಮಿಕ ರೋಗಗಳು ಹರಡುವ ಅಪಾಯವಿರುತ್ತದೆ ಎಂದು ದ.ಕ.ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಂ.ರಾಮಕೃಷ್ಣ ರಾವ್ ಹೇಳಿದರು.

ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮುಖ್ಯವಾಗಿ ವಾಂತಿಬೇಧಿ, ವಿಷಮಶೀತ ಜ್ವರ(ಟೈಫಾಯಿಡ್), ಇಲಿಜ್ವರ, ಕಾಮಾಲೆ ರೋಗ(ಜಾಂಡಿಸ್)ಗಳು ಕಲುಷಿತ ನೀರು ಬಳಸುವುದರಿಂದ ಹರಡುವ ರೋಗಗಳು. ಕಲುಷಿತ ನೀರನ್ನು ಹಾಗೆಯೇ ಕುಡಿದಲ್ಲಿ ಈ ರೋಗಗಳು ಹರಡುತ್ತವೆ. ಆದ್ದರಿಂದ ನೀರನ್ನು 20 ನಿಮಿಷಗಳ ಕಾಲ ಕುದಿಸಿಯೇ ಸೇವನೆ ಮಾಡಬೇಕು. ಈ ರೀತಿಯಲ್ಲಿ ನೀರನ್ನು ಕುದಿಸಿದಾಗ ಅದರಲ್ಲಿರುವ ಬ್ಯಾಕ್ಟೀರಿಯಾ ಗಳು ನಾಶವಾಗುತ್ತದೆ. ಅಲ್ಲದೆ ನೀರು ಕುದಿಸುವ ಮೊದಲು ಗಾಳಿಸಿ ಅಥವಾ ಸೋಸಬೇಕು ಎಂದು ಆರೋಗ್ಯಾಧಿಕಾರಿ ಡಾ.ಎಂ.ರಾಮಕೃಷ್ಣ ರಾವ್ ಹೇಳಿದರು.

Body:ಅಲ್ಲದೆ ಪೇಪರ್ ಕಪ್, ಪ್ಲಾಸ್ಟಿಕ್ ಗಳು, ಎಳನೀರು ಚಿಪ್ಪು, ಬಾಟಲಿಗಳು ಮುಂತಾದವುಗಳನ್ನು ಸರಿಯಾಗಿ ವಿಲೇವಾರಿ ಮಾಡದಿದ್ದರೆ, ಇವುಗಳಿಂದ ರೋಗವಾಹಕಗಳು ಹುಟ್ಟಿ ಜನರಿಗೆ ನಾನಾ ರೀತಿಯ ಸಾಂಕ್ರಾಮಿಕ ರೋಗಗಳನ್ನು ಹರಡುತ್ತವೆ. ನೀರು ನಿಂತ ಸ್ಥಳವಿದ್ದರೆ ಅದನ್ನು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡಬೇಕು‌. ಇಲ್ಲದಿದ್ದರೆ ಇದರಲ್ಲಿ ಸೊಳ್ಳೆಗಳು ವಂಶಾಭಿವೃದ್ಧಿ ಯಾಗಿ ಜನರಿಗೆ ಕಾಯಿಲೆಗಳು ಹರಡುತ್ತವೆ ಎಂದು ಹೇಳಿದರು.

ಇಡೀ ಜಿಲ್ಲೆಯಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುವ ಲಾರ್ವಾವನ್ನು ನಾಶ ಮಾಡಲು ಜಿಲ್ಲಾಧಿಕಾರಿಯವರ ಆದೇಶ ಹಾಗೂ ನಿರ್ದೇಶನದೊಂದಿಗೆ ಮಹಾನಗರ ವ್ಯಾಪ್ತಿಯಲ್ಲಿ ನಾವು ನೂರರಷ್ಟು ತಂಡ ರಚಿಸಿ ಸುಮಾರು 15 ದಿನಗಳೊಳಗೆ ಸುಮಾರು 50,930 ಮನೆಗಳಲ್ಲಿ ಕಾರ್ಯಾಚರಣೆ ನಡೆದಿದ್ದೇವೆ. ಇದರಿಂದ ನಮಗೆ ಬಹಳಷ್ಟು ಮನೆಗಳಲ್ಲಿ ಲಾರ್ವಾ ಕಂಡು ಬಂದಿದೆ. ಹೆಚ್ಚಿನ ಮನೆಗಳಲ್ಲಿ ಶೇ.10ರಷ್ಟು ಲಾರ್ವಾ ಕಂಡು ಬಂದಿದೆ. ಜೊತೆಗೆ ಜನರಿಗೆ ಎಲ್ಲಿಯೂ ಘನತ್ಯಾಜ್ಯ ವಸ್ತುಗಳನ್ನು ಎಸೆಯದಂತೆ ಜಾಗೃತಿಯನ್ನು ಮೂಡಿಸಲಾಗದೆ ಎಂದು ಡಾ.ಎಂ.ರಾಮಕೃಷ್ಣ ರಾವ್ ಹೇಳಿದರು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.