ETV Bharat / city

ಆನ್​ಲೈನ್ ಕ್ಲಾಸ್​ ಸಮಸ್ಯೆಗೆ ವಿದ್ಯಾಗಮವೇ ಪರಿಹಾರ ಅಂತಿದೆ ಶಿಕ್ಷಣ ಇಲಾಖೆ - Public Education Department

ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವ ಬಡ ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಆನ್​ಲೈನ್ ಪಾಠದ ಸಮಸ್ಯೆ ಎದುರಾಗುತ್ತಿದ್ದು, ಶಿಕ್ಷಣ ಇಲಾಖೆ ಇದಕ್ಕೆ ವಿದ್ಯಾಗಮವೇ ಪರಿಹಾರ ಎನ್ನುತ್ತಿದೆ.

Education  Department says vidyagama is solution to the online class problem
ಆನ್​ಲೈನ್ ಕ್ಲಾಸ್​ ಸಮಸ್ಯೆಗೆ ವಿದ್ಯಾಗಮವೇ ಪರಿಹಾರ ಅಂತಿದೆ ಶಿಕ್ಷಣ ಇಲಾಖೆ
author img

By

Published : Sep 5, 2020, 8:03 PM IST

ಮಂಗಳೂರು: ಕೊರೊನಾ ವೈರಸ್ ಮಕ್ಕಳ ಶೈಕ್ಷಣಿಕ ಬದುಕಿನ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರಿದೆ. ನಗರಗಳಲ್ಲಿರುವ ಖಾಸಗಿ ಶಾಲೆಗಳು ಆನ್​ಲೈನ್​ ಪಾಠದ ಮೊರೆ ಹೋಗಿದ್ದರೆ, ಸರ್ಕಾರಿ ಶಾಲೆಗಳು ಕೂಡ ಗಮನಹರಿಸಿವೆ. ಆದರೆ, ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವ ಬಡ ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಆನ್​ಲೈನ್ ಪಾಠದ ಸಮಸ್ಯೆ ಎದುರಾಗುತ್ತಿದ್ದು, ಇದಕ್ಕೆ ವಿದ್ಯಾಗಮವೇ ಪರಿಹಾರವೆನ್ನುತ್ತಿದೆ ಶಿಕ್ಷಣ ಇಲಾಖೆ.

ಆನ್​ಲೈನ್ ಕ್ಲಾಸ್​ ಸಮಸ್ಯೆಗೆ ವಿದ್ಯಾಗಮವೇ ಪರಿಹಾರ ಅಂತಿದೆ ಶಿಕ್ಷಣ ಇಲಾಖೆ

ಕೊರೊನಾ ವೈರಸ್​ ವ್ಯಾಪಕಗೊಂಡ ಬಳಿಕ ಶಿಕ್ಷಣ ವ್ಯವಸ್ಥೆ ಮೇಲೆ ಕರಿನೆರಳು ಬಿದ್ದಿದೆ. ಸರ್ಕಾರ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆನ್​ಲೈನ್​ ಪಾಠವನ್ನು ಆರಂಭಿಸಿದೆ. ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಆನ್​ಲೈನ್ ಪಾಠಗಳು ನಡೆದರೆ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಚಂದನವಾಹಿನಿ ಮೂಲಕ ತರಗತಿಗಳು ನಡೆಯುತ್ತಿವೆ. ಆದರೆ, ಇವೆಲ್ಲದರಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ಇಂಟರ್​ನೆಟ್​, ಟಿವಿ ಹಾಗೂ ಮೊಬೈಲ್ ಇಲ್ಲದ ಬಡ ವಿದ್ಯಾರ್ಥಿಗಳಿಗೆ ಇದರಿಂದ ಸಮಸ್ಯೆಯಾಗುತ್ತಿದೆ.

ಇದಕ್ಕಾಗಿ ರಾಜ್ಯ ಸರ್ಕಾರ ವಿದ್ಯಾಗಮದ ಮೂಲಕ ಪರಿಹಾರ ಕಂಡುಕೊಂಡಿದೆ. ಟಿವಿ ಮೊಬೈಲ್ ಮೂಲಕ ಕಲಿಯಲು ಅಸಾಧ್ಯವಾಗಿರುವ ವಿದ್ಯಾರ್ಥಿಗಳನ್ನು ಗುರುತಿಸಿ, ಅವರನ್ನು ಒಂದೆಡೆ ಸೇರಿಸಿ ಶಿಕ್ಷಕರಿಂದ ಬೋಧನೆ ಮಾಡಿಸಲಾಗುತ್ತಿದೆ, ಇದಕ್ಕೆ ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿದೆ ಎನ್ನುತ್ತಾರೆ ದಕ್ಷಿಣ ಕನ್ನಡ ಸಾರ್ವಜನಿಕ ಶಿಕ್ಷಣ ಇಲಾಖೆಯ ಡಿಡಿಪಿಐ ಮಲ್ಲೆಸ್ವಾಮಿ.

ಕೊರೊನಾ ಕಾರಣದಿಂದ ಸ್ಥಗಿತವಾಗಿದ್ದ ಶೈಕ್ಷಣಿಕ ವರ್ಷಕ್ಕೆ ಡಿಜಿಟಲ್ ರೂಪ ನೀಡಿದ ಪರಿಣಾಮ, ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ನೋಂದಣಿಯ ಸಂಖ್ಯೆ ಹೆಚ್ಚಳವಾಗಿದೆ. ಒಟ್ಟಿನಲ್ಲಿ ಶೈಕ್ಷಣಿಕ ವರ್ಷ ಆರಂಭವಾಗುವವರೆಗೆ ಡಿಜಿಟಲ್ ಓದು ಅನಿವಾರ್ಯವಾಗಿದ್ದು, ಇದರಲ್ಲಿ ಲೋಪ ಬಾರದಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.