ETV Bharat / city

ಎಂಆರ್​ಪಿಎಲ್​​​ ಉದ್ಯೋಗ ನೇಮಕಾತಿಯಲ್ಲಿ ಸ್ಥಳೀಯರ ಕಡೆಗಣನೆ ಆರೋಪ: ಪ್ರತಿಭಟನೆ - ಮಂಗಳೂರಿನಲ್ಲಿ ಡಿವೈಎಫ್ಐ ಪ್ರತಿಭಟನೆ

ದಕ್ಷಿಣ ಕನ್ನಡದಲ್ಲಿ ನೆಲೆಯೂರಿರುವ ಎಂಆರ್​​​ಪಿಎಲ್ ಸಂಸ್ಥೆ ಜಿಲ್ಲೆಯ ಯುವಕರಿಗೆ ಆದ್ಯತೆ ನೀಡುತ್ತಿಲ್ಲ ಎಂದು ಆರೋಪಿಸಿ ಡಿವೈಎಫ್ಐ ಪ್ರತಿಭಟನೆ ನಡೆಸಿತು.

ಎಂಆರ್​ಪಿಎಲ್​ ಉದ್ಯೋಗ ನೇಮಕಾತಿಯಲ್ಲಿ ಸ್ಥಳೀಯರಿಗೆ ಆಧ್ಯತೆ ನೀಡಬೇಕೆಂದು ಒತ್ತಾಯಿಸಿ ಪ್ರತಿಭಟನೆ
author img

By

Published : Oct 29, 2019, 7:50 PM IST

Updated : Oct 29, 2019, 11:58 PM IST

ಮಂಗಳೂರು: ಎಂಆರ್​ಪಿಎಲ್​ನಲ್ಲಿ ಉದ್ಯೋಗ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಅದರಲ್ಲಿ ಸ್ಥಳೀಯರಿಗೆ ಆದ್ಯತೆ ನೀಡದಿರುವುದನ್ನು ವಿರೋಧಿಸಿ ಎಂಆರ್​ಪಿಎಲ್ ಮುಖ್ಯ ದ್ವಾರದ ಎದುರು ಡಿವೈಎಫ್ಐ ಪ್ರತಿಭಟಿಸಿತು.

ಡಿವೈಎಫ್​ಐ ಪ್ರತಿಭಟನೆ

ಎಂಆರ್​ಪಿಎಲ್ ಇತ್ತೀಚೆಗೆ 233 ಹುದ್ದೆಗಳ ನೇಮಕಾತಿಗೆ ಪ್ರಕ್ರಿಯೆ ಆರಂಭಿಸಿದೆ. ದಕ್ಷಿಣ ಕನ್ನಡದಲ್ಲಿ ನೆಲೆಯೂರಿರುವ ಈ ಸಂಸ್ಥೆ ಜಿಲ್ಲೆಯ ಯುವಕರಿಗೆ ಆದ್ಯತೆ ನೀಡುತ್ತಿಲ್ಲ ಎಂದು ಆರೋಪಿಸಿ ಇಂದು ಪ್ರತಿಭಟನೆ ನಡೆಸಲಾಯಿತು. ಇನ್ನು ಎಂಆರ್​ಪಿಎಲ್ ಸಂಸ್ಥೆ ಸ್ಥಳೀಯರು ಮತ್ತು ಕನ್ನಡಿಗರನ್ನು ನೇಮಕಾತಿಯಲ್ಲಿ ಕಡೆಗಣಿಸಿರುವುದರಿಂದ ನೇಮಕಾತಿ ಪ್ರಕ್ರಿಯೆ ತಡೆ ಹಿಡಿಯಬೇಕೆಂದು ಇತ್ತೀಚೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗಭರಣ ನೋಟಿಸ್ ಕೂಡ ನೀಡಿದ್ದರು.

ಪ್ರತಿಭಟನೆ ವೇಳೆ ಮಾತನಾಡಿದ ಡಿವೈಎಫ್​ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಎಂಆರ್​ಪಿಎಲ್ ಆರಂಭದಲ್ಲಿ ಸ್ಥಳೀಯರಿಗೆ ಉದ್ಯೋಗದ ಭರವಸೆ ನೀಡಿ ಇದೀಗ ಮಾತು ತಪ್ಪಿದೆ. ನಮ್ಮ ನೆಲ-ಜಲ ಉಪಯೋಗಿಸುವ ಎಂಆರ್​ಪಿಎಲ್ ಸ್ಥಳೀಯರಿಗೆ ಉದ್ಯೋಗಾವಕಾಶ ನೀಡಬೇಕು. ಈಗಾಗಲೇ ನಡೆದಿರುವ ಉದ್ಯೋಗ ನೇಮಕಾತಿ ಪ್ರಕ್ರಿಯೆ ತಡೆಹಿಡಿದು, ಹೊಸ ಪ್ರಕಟಣೆ ನೀಡಬೇಕು ಎಂದು ಒತ್ತಾಯಿಸಿದರು.

Intro:ಮಂಗಳೂರು: ಎಂ ಆರ್ ಪಿ ಎಲ್ ನಲ್ಲಿ 233 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು ಇದರಲ್ಲಿ ಸ್ಥಳೀಯರಿಗೆ ಆದ್ಯತೆ ನೀಡದಿರುವುದನ್ನು ವಿರೋಧಿಸಿ ಎಂ ಆರ್ ಪಿ ಎಲ್ ಮುಖ್ಯದ್ವಾರದ ಎದುರು ಡಿವೈಎಫ್ಐ ನಿಂದ ಪ್ರತಿಭಟನೆ ನಡೆಯಿತು.

Body:ಎಂ ಆರ್ ಪಿ ಎಲ್ ಇತ್ತೀಚೆಗೆ 233 ಹುದ್ದೆಗಳ ನೇಮಕಾತಿಗೆ ಪ್ರಕ್ರೀಯೆ ಆರಂಭಿಸಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ನೆಲ ಜಲ ಬಳಸಿಕೊಂಡ ಈ ಸಾರ್ವಜನಿಕ ಉದ್ದಿಮೆ ದಕ್ಷಿಣ ಕನ್ನಡದ ಯುವಕರಿಗೆ, ಕರ್ನಾಟಕದ ಯುವಕರಿಗೆ ಆದ್ಯತೆ ನೀಡುತ್ತಿಲ್ಲ ಎಂದು ಆರೋಪಿಸಿ ಈ ಪ್ರತಿಭಟನೆ ನಡೆಯಿತು.
ಎಂ ಆರ್ ಪಿ ಎಲ್ ಸ್ಥಳೀಯರು ಮತ್ತು ಕನ್ನಡಿಗರನ್ನು ನೇಮಕಾತಿಯಲ್ಲಿ ಕಡೆಗಣಿಸಿರುವುದರಿಂದ ನೇಮಕಾತಿ ಪ್ರಕ್ರಿಯೆ ತಡೆಹಿಡಿಯಬೇಕೆಂದು ಇತ್ತೀಚೆಗೆ ಕನ್ನಡ ಅಭಿ ಪ್ರಾಧಿಕಾರದ ಅಧ್ಯಕ್ಷ ನಾಗಭರಣ ಅವರು ನೋಟೀಸ್ ಕೂಡ ನೀಡಿದ್ದರು.
ಇಂದು ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಡಿವೈಎಫ್ ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಅವರು ಎಂ ಆರ್ ಪಿ ಎಲ್ ಆರಂಭದಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುವ ಭರವಸೆ ನೀಡಿ ಇದೀಗ ಮಾತು ತಪ್ಪಿದೆ. ನಮ್ಮ ನೆಲ ಜಲ ಉಪಯೋಗಿಸುವ ಎಂ ಆರ್ ಪಿ ಎಲ್ ಸ್ಥಳೀಯರಿಗೆ ಉದ್ಯೋಗವಕಾಶ ನೀಡಬೇಕು. ಈಗಾಗಲೇ ಉದ್ಯೋಗ ನೇಮಕಾತಿ ಯ ಪ್ರಕಟನೆಯನ್ನು ತಡೆಹಿಡಿದು ಹೊಸ ಪ್ರಕಟನೆ ನೀಡಬೇಕೆಂದು ಒತ್ತಾಯಿಸಿದರು.

ಬೈಟ್- ಮುನೀರ್ ಕಾಟಿಪಳ್ಳ, ರಾಜ್ಯಾಧ್ಯಕ್ಷರು, ಡಿವೈಎಫ್ ಐ

Conclusion:
Last Updated : Oct 29, 2019, 11:58 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.