ETV Bharat / city

ಈ ವರ್ಷ ಹಳೆಯ ವಸ್ತ್ರಸಂಹಿತೆ ಮುಂದುವರಿಸಿ: ಮಂಗಳೂರು ವಿವಿಯ ಹಿಜಾಬ್ ಪರ ವಿದ್ಯಾರ್ಥಿನಿ ಬೇಡಿಕೆ - ಮಂಗಳೂರು

ಮಂಗಳೂರು ವಿವಿ ಕಾಲೇಜಿನಲ್ಲಿ ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಹಿಜಾಬ್ ಪರ ಇರುವ‌ ವಿದ್ಯಾರ್ಥಿನಿಯರು ಈ ವರ್ಷ ಹಳೆಯ ವಸ್ತ್ರ ಸಂಹಿತೆ ಮುಂದುವರಿಸಿ ನಮಗೆ ಶಿಕ್ಷ ಪಡೆಯಲು ಅವಕಾಶ ಕಲ್ಪಿಸಿ ಎಂದು ಹಿಜಾಬ್ ಪರ ವಿದ್ಯಾರ್ಥಿನಿಯರು ಬೇಡಿಕೆ ಮುಂದಿರಿಸಿದ್ದಾರೆ.

author img

By

Published : Jun 3, 2022, 5:28 PM IST

ಮಂಗಳೂರು: ನಾವು ಹಿಂದಿನ ಪ್ರಾಸ್ಪೆಕ್ಟಸ್​ನಲ್ಲಿನ ನಿಯಮಗಳನ್ನು ಒಪ್ಪಿ ಕಾಲೇಜಿಗೆ ಬಂದಿದ್ದೇವೆ. ಹಿಂದಿನಿಂದಲೂ ಸಮವಸ್ತ್ರದ ಶಾಲನ್ನು ಹಿಜಾಬ್ ಆಗಿ ಧರಿಸಿ ಕಾಲೇಜಿಗೆ ಬರುತ್ತೀದ್ದೇವೆ. ಇದೀಗ ಹಿಜಾಬ್ ಧರಿಸದಂತೆ ಕಾಲೇಜಿನ ಈ ಆದೇಶದ ಹಿಂದೆ ಹೈ ಕೋರ್ಟ್ ಆದೇಶ ಇಲ್ಲ. ಹೀಗಾಗಿ ಇದು ಎಬಿವಿಪಿ ಒತ್ತಡ. ಈ ವರ್ಷ ಹಳೆಯ ವಸ್ತ್ರ ಸಂಹಿತೆಯನ್ನು ಮುಂದುವರಿಸಿ ನಮಗೆ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸಿ ಎಂದು ಹಿಜಾಬ್ ಪರ ವಿದ್ಯಾರ್ಥಿನಿಯರು ಬೇಡಿಕೆ ಮುಂದುವರಿಸಿದ್ದಾರೆ.

ಇದರ ಬಗ್ಗೆ ಕಾನೂನು ಹೋರಾಟ ಮಾಡಿದರೆ ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಪ್ರಾಂಶುಪಾಲರು ಶಿರವಸ್ತ್ರ ತೆಗೆಯುವ ಯಾವುದೇ ಉದ್ದೇಶ ಇಲ್ಲ ಅಂದಿದ್ದಾರೆ. ಎಬಿವಿಪಿ ಒತ್ತಡದಿಂದಲೇ ಪ್ರಾಂಶುಪಾಲರು ಈ ಆದೇಶ ಮಾಡಿದ್ದಾರೆ. ತಮ್ಮ ಬೆಂಬಲಕ್ಕೆ ಧಾರ್ಮಿಕ ಮುಖಂಡರು ಬರುವಂತೆ ಮನವಿ ಮಾಡುತ್ತೇವೆ‌ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಂಗಳೂರು ವಿವಿ ಸಮನ್ವಯ ಸಮಿತಿ ಅಧ್ಯಕ್ಷ ರಿಯಾಜ್ ಅವರು ಹಿಜಾಬ್ ಗೊಂದಲ ಸರಿಪಡಿಸಲು ನಾವು ಎರಡು ದಿನದ ಗಡುವು ದ.ಕ ಜಿಲ್ಲಾಡಳಿತಕ್ಕೆ ಕೊಡುತ್ತೇವೆ. ಇಲ್ಲದಿದ್ದರೆ ಜಿಲ್ಲಾದ್ಯಂತ ಬೃಹತ್ ಹೋರಾಟ ನಡೆಸುತ್ತೇವೆ ಎಂದರು.

ಇದನ್ನೂ ಓದಿ: ನೀಟ್ ಮಾದರಿಯಲ್ಲೇ ಸಿಇಟಿ... ಹಿಜಾಬ್ ನಿಷೇಧ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.