ETV Bharat / city

ಶಿವಮೊಗ್ಗ ಗಲಭೆ ಪ್ರಕರಣ: ಈಶ್ವರಪ್ಪ, ರಾಘವೇಂದ್ರ ವಿರುದ್ಧವೂ ಕೇಸ್ ದಾಖಲಿಸುವಂತೆ ಡಿಸೋಜಾ ಒತ್ತಾಯ - ಹರ್ಷ ಹತ್ಯೆ ಬಗ್ಗೆ ಐವಾನ್​ ಡಿಸೋಜಾ ಮಾತು

ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆಯಾದ ಬಳಿಕ ನಡೆದ ಮೃತದೇಹ ಮೆರವಣಿಗೆ ವೇಳೆ ಮುಂಚೂಣಿಯಲ್ಲಿ ನಿಂತ ಸಚಿವ ಕೆ.ಎಸ್. ಈಶ್ವರಪ್ಪ, ಸಂಸದ ಬಿ.ವೈ. ರಾಘವೇಂದ್ರ ಅವರ ಮೇಲೆ ರಾಜ್ಯ ಸರ್ಕಾರ ತಕ್ಷಣ ಕೇಸ್ ದಾಖಲಿಸಿ ಕ್ರಮ ಕೈಗೊಳ್ಳಲಿ ಎಂದು ಎಐಸಿಸಿ ಕಾರ್ಯದರ್ಶಿ ಐವಾನ್ ಡಿಸೋಜಾ ಆಗ್ರಹಿಸಿದರು.

ivan-dsouza
ಐವಾನ್ ಡಿಸೋಜಾ
author img

By

Published : Mar 5, 2022, 6:46 PM IST

ಮಂಗಳೂರು: ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆಯಾದ ಬಳಿಕ ನಡೆದ ಮೃತದೇಹ ಮೆರವಣಿಗೆ ವೇಳೆ ಮುಂಚೂಣಿಯಲ್ಲಿ ನಿಂತ ಸಚಿವ ಕೆ.ಎಸ್. ಈಶ್ವರಪ್ಪ, ಸಂಸದ ಬಿ.ವೈ. ರಾಘವೇಂದ್ರ ಅವರ ಮೇಲೆ ರಾಜ್ಯ ಸರ್ಕಾರ ತಕ್ಷಣ ಕೇಸ್ ದಾಖಲಿಸಿ ಕ್ರಮ ಕೈಗೊಳ್ಳಲಿ ಎಂದು ಎಐಸಿಸಿ ಕಾರ್ಯದರ್ಶಿ ಐವಾನ್ ಡಿಸೋಜಾ ಆಗ್ರಹಿಸಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಗಲಭೆಯಲ್ಲಿ ಸಮಯದಾಯವೊಂದನ್ನು ಗುರಿಯಾಗಿರಿಸಿಕೊಂಡು ಕೇಸ್ ದಾಖಲಿಸಲಾಗಿದೆ. ಆದರೆ, ಈ ಮೆರವಣಿಗೆಯ ನೇತೃತ್ವ ವಹಿಸಿರುವ ಸಚಿವ ಕೆ.ಎಸ್. ಈಶ್ವರಪ್ಪ, ಸಂಸದ ಬಿ.ವೈ. ರಾಘವೇಂದ್ರ ಮೇಲೆ ಯಾವುದೇ ಕೇಸ್ ದಾಖಲಾಗಿಲ್ಲ. ಬಂಧನವೂ ಆಗಿಲ್ಲ‌ ಎಂದರು.

ಮೇಕೆದಾಟು ಪಾದಯಾತ್ರೆ ಮಾಡಿದರೆ ನಮ್ಮ ಮೇಲೆ ಕೇಸುಗಳು ದಾಖಲಾಗುತ್ತವೆ. ಯಾವುದೇ ಗಲಭೆಗಳ ಸಂದರ್ಭದಲ್ಲಿ ಯಾರು ಅದರ ನೇತೃತ್ವ ವಹಿಸುತ್ತಾರೋ ಅವರನ್ನೇ ಹೊಣೆಗಾರರನ್ನಾಗಿಸಬೇಕೆಂದು ಸುಪ್ರೀಂಕೋರ್ಟ್ ಆದೇಶಿಸಿದೆ. ಆದರೆ, ಇಲ್ಲಿ ಸಚಿವರೇ ಮೆರವಣಿಗೆಯ ನೇತೃತ್ವ ವಹಿಸಿದ್ದಾರೆ. ಅವರ ಮುಂದೆಯೇ ಎಲ್ಲಾ ಅಕ್ರಮಗಳು ನಡೆದಿವೆ. ಆದರೆ, ಅವರ ಮೇಲೆ ಕೇಸ್​ ದಾಖಲಿಸಿಲ್ಲ. ಹೀಗಾಗಿ ತಕ್ಷಣ ಈ ಇಬ್ಬರ ಮೇಲೆ ಸರ್ಕಾರ ಕೇಸ್ ದಾಖಲಿಸಲಿ ಎಂದು ಒತ್ತಾಯಿಸಿದರು.

ಹರ್ಷನಂತೆ ಬೇರೆಯವರಿಗೂ ಪರಿಹಾರ ನೀಡಿ: ಹತ್ಯೆಯಾದ ಹರ್ಷನ ಕುಟುಂಬಕ್ಕೆ ಸರ್ಕಾರ 25 ಲಕ್ಷ ರೂಪಾಯಿ ಪರಿಹಾರ ನೀಡಿದೆ. ಆದರೆ, ಬೆಳ್ತಂಗಡಿಯಲ್ಲಿ ದಲಿತ ಸಮುದಾಯದ ದಿನೇಶ್ ಹತ್ಯೆ ನಡೆದಿದೆ. ಬಿಜೆಪಿ, ಬಜರಂಗದಳದ ಕಾರ್ಯಕರ್ತರೇ ಹತ್ಯೆ ಮಾಡಿದ ಆರೋಪವಿದೆ. ಅವರ ಕುಟುಂಬಕ್ಕೂ ಪರಿಹಾರ ನೀಡಬೇಕು. ಹರ್ಷನ ಕುಟುಂಬಕ್ಕೆ ನೀಡಿದಷ್ಟೇ ಪರಿಹಾರವನ್ನು ದಿನೇಶ್ ಕುಟುಂಬಕ್ಕೂ ನೀಡಲಿ ಎಂದು ಒತ್ತಾಯಿಸಿದರು.

ಓದಿ: ಕಾಂಗ್ರೆಸ್​ನಲ್ಲಿ ಐಟಿ ದಾಳಿಯಾದವರಿಗೆ ಬೆಲೆ ಜಾಸ್ತಿ: ಸಿಎಂ ಇಬ್ರಾಹಿಂ ವ್ಯಂಗ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.