ಮಂಗಳೂರು: ಬಿಜೆಪಿ ಪ್ರಚಂಡ ಜಯ ಗಳಿಸಿರುವ ಹಿನ್ನೆಲೆಯಲ್ಲಿ, ಬಿಜೆಪಿ ನಗರ ದಕ್ಷಿಣ ಮಂಡಲ ವತಿಯಿಂದ ವಿಜಯೋತ್ಸವ ಕಾರ್ಯಕ್ರಮ ನಡೆಯಿತು.
ನಗರದ ಕುದ್ಮಲ್ ರಂಗರಾವ್ ಪುರಭವನದದಿಂದ ಸಂಜೆ 5.30ಕ್ಕೆ ವಿಜಯೋತ್ಸವ ಕಾರ್ಯಕ್ರಮದ ಮೆರವಣಿಗೆ ಆರಂಭವಾಗಿ ಕ್ಲಾಕ್ ಟವರ್, ಗಣಪತಿ ಹೈಸ್ಕೂಲ್ ರಸ್ತೆಯಿಂದ ಕುದ್ರೋಳಿ ಮಾರ್ಗವಾಗಿ, ಮಣ್ಣಗುಡ್ಡ, ಬಲ್ಲಾಳ್ ಬಾಗ್ ಎಂ.ಜಿ.ರಸ್ತೆಯಾಗಿ, ಬೆಸೆಂಟ್ ಮೂಲಕ ಸಾಗಿ ಪಿವಿಎಸ್ ವೃತ್ತದ ಬಳಿ ಇರುವ ಬಿಜೆಪಿ ಕಚೇರಿಯಲ್ಲಿ ಸಮಾಪ್ತಿಗೊಂಡಿತು.
ಮೆರವಣಿಗೆಯಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ವೇದವ್ಯಾಸ ಕಾಮತ್, ಮಾಜಿ ಶಾಸಕ ಎನ್.ಯೋಗೀಶ್ ಭಟ್, ಬಿಜೆಪಿ ಮುಖಂಡರಾದ ಹರಿಕೃಷ್ಣ ಬಂಟ್ವಾಳ, ರವಿಶಂಕರ್ ಮಿಜಾರ್ ಮುಂತಾದವರು ತೆರೆದ ಜೀಪ್ನಲ್ಲಿ ಸಂಚರಿಸಿದರು. ಈ ಸಂದರ್ಭ ಸಾವಿರಾರು ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಮೆರವಣಿಗೆಯಲ್ಲಿ ಭಾಗವಹಿಸಿ, ಸಂಭ್ರಮಾಚರಣೆ ಮಾಡಿದರು.