ETV Bharat / city

ಬೆಳ್ತಂಗಡಿ ವಾರದ ಸಂತೆಗೆ ಶಾಶ್ವತ ಪರಿಹಾರ ನೀಡಿದ ಶಾಸಕ ಹರೀಶ್ ಪೂಂಜಾ..

ಇದೀಗ ಶಾಸಕ ಹರೀಶ್ ಪೂಂಜಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬೆಳ್ತಂಗಡಿಯ ವಾರದ ಸಂತೆಯನ್ನು ಖಾಯಂ ಆಗಿ ಎಪಿಎಂಸಿ ಯಾರ್ಡಿನಲ್ಲಿಯೇ ನಡೆಸಲು ತೀರ್ಮಾನಿಸಲಾಯಿತು.

Meeting
Meeting
author img

By

Published : Jun 2, 2020, 2:43 PM IST

ಬೆಳ್ತಂಗಡಿ : ಎಪಿಎಂಸಿ ಯಾರ್ಡ್​ನಲ್ಲಿ ಇನ್ನು ಮುಂದೆ ವಾರದ ಸಂತೆ ಖಾಯಂ ಆಗಿ ನಡೆಯಲಿದೆ. ಶಾಸಕ ಹರೀಶ್ ಪೂಂಜಾ ನೇತೃತ್ವದ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಂಡು ವಾರದ ಸಂತೆಯನ್ನು ಎಪಿಎಂಸಿಗೆ ಶಿಫ್ಟ್​ ಮಾಡುವ ಮೂಲಕ ಬೆಳ್ತಂಗಡಿ ಜನತೆಯ ಬಹುವರುಷದ ಕನಸನ್ನು ನನಸು ಗೊಳಿಸಿದ್ದಾರೆ.

ಈ ಮೊದಲು ವಾರದ ಸಂತೆಯು ಸಂತೆಕಟ್ಟೆ ಪರಿಸರದಲ್ಲಿ ನಡೆಯುತ್ತಿತ್ತು. ಅಲ್ಲಿ ಜಾಗದ ಕೊರತೆ, ವ್ಯಾಪಾರಿಗಳಿಗೆ, ಜನರಿಗೆ ಹಾಗೂ ವಾಹನ ನಿಲುಗಡೆಗೆ ತೊಂದರೆ ಆಗುತ್ತಿತ್ತು. ಆದ್ದರಿಂದ ಕೊರೊನಾ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ವೈಯಕ್ತಿಕ ಅಂತರ ಕಾಪಾಡುವ ಉದ್ದೇಶದಿಂದ ಪ್ರತಿ ಸೋಮವಾರ ನಡೆಯುವ ಬೆಳ್ತಂಗಡಿಯ ವಾರದ ಸಂತೆಯನ್ನು ಶಾಸಕ ಹರೀಶ್ ಪೂಂಜಾ ಅವರ ಸೂಚನೆಯಂತೆ ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿರುವ ಹಳೆಕೋಟೆಯ ಎಪಿಎಂಸಿ ಯಾರ್ಡ್​ಗೆ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿತ್ತು.

ಇದೀಗ ಶಾಸಕ ಹರೀಶ್ ಪೂಂಜಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬೆಳ್ತಂಗಡಿಯ ವಾರದ ಸಂತೆಯನ್ನು ಖಾಯಂ ಆಗಿ ಎಪಿಎಂಸಿ ಯಾರ್ಡಿನಲ್ಲಿಯೇ ನಡೆಸಲು ತೀರ್ಮಾನಿಸಲಾಯಿತು. ಅದೇ ರೀತಿ ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕಾಗಿರುವುದರಿಂದ ಕೃಷಿಕರು, ವ್ಯಾಪಾರಸ್ಥರು ಹಾಗೂ ಗ್ರಾಹಕರ ನಡುವೆ ಸಾಮಾಜಿಕ ಅಂತರ ಕಾಪಾಡಲು ಅವಕಾಶವಾಗಲಿ ಎಂಬ ಉದ್ದೇಶದಿಂದ ಸಾಕಷ್ಟು ಸ್ಥಳಾವಕಾಶವಿರುವ ಎಪಿಎಂಸಿ ಯಾರ್ಡಿನಲ್ಲಿಯೇ ಸಂತೆ ನಡೆಸಲು ತೀರ್ಮಾನಿಸಲಾಯಿತು.

ಈ ಬಗ್ಗೆ ಈಟಿವಿ ಭಾರತ್‌ನೊಂದಿಗೆ ತಾಲೂಕಿನ ಕೃಷಿಕರಾದ ವಕೀಲ ಸುದರ್ಶನ್ ರಾವ್ ಗಜಂತೋಡಿ ಮಾತನಾಡಿ, ಶಾಸಕರ ಹಾಗೂ ಆಡಳಿತ ಮಂಡಳಿಯ ನಿರ್ಧಾರ ಒಳ್ಳೆಯ ಬೆಳವಣಿಗೆ. ಈ ಕೆಲಸ ಯಾವತ್ತೋ ಆಗಬೇಕಾಗಿತ್ತು. ಹಲವಾರು ರಾಜಕೀಯ ಕಾರಣಗಳಿಂದ ಹಾಗೂ ಭ್ರಷ್ಟ ವ್ಯವಸ್ಥೆಯಿಂದ ಆಗಿರಲಿಲ್ಲ. ಈಗ ಆಗಿರುವುದರಿಂದ ಎಲ್ಲಾ ವ್ಯಾಪಾರಸ್ಥರಿಗೆ, ರೈತರಿಗೆ ಹಾಗೂ ಇತರರಿಗೆ ಅನುಕೂಲವಾಗಲಿದೆ. ಶಾಸಕರ ಈ ಕಾರ್ಯ ಶ್ಲಾಘನೀಯ. ತಾಲೂಕಿನ ಎಲ್ಲಾ ರೈತರ ಹಾಗೂ ಕೃಷಿಕರ ಪರವಾಗಿ ಶಾಸಕರಿಗೆ ಅಭಿನಂದಿಸುವೆ ಎಂದರು.

ಸಭೆಯಲ್ಲಿ ಎಪಿಎಂಸಿ ಅಧ್ಯಕ್ಷ ಕೇಶವ ಪಿ. ಬೆಳಾಲು, ಉಪಾಧ್ಯಕ್ಷ ಅಬ್ದುಲ್ ಗಫೂರ್, ತಹಶೀಲ್ದಾರ್ ಗಣಪತಿ ಶಾಸ್ತ್ರಿ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್, ಎಂಜಿನಿಯರ್ ಮಹಾವೀರ ಆರಿಗ ಮತ್ತಿತರರು ಭಾಗವಹಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.