ಮಂಗಳೂರು (ದಕ್ಷಿಣಕನ್ನಡ): ಜಿಲ್ಲೆಯ 23 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 290ಕ್ಕೆ ಏರಿಕೆಯಾಗಿದೆ.
ಸೌದಿ ಅರೇಬಿಯಾದಿಂದ ಜಿಲ್ಲೆಗೆ ಮರಳಿದ್ದ 17 ಪುರುಷರು, 4 ಮಹಿಳೆಯರು ಹಾಗೂ ಪಿ-5066ರ ಸಂಪರ್ಕ ಹೊಂದಿದ್ದ ವ್ಯಕ್ತಿ ಕ್ವಾರಂಟೈನ್ನಲ್ಲಿದ್ದರು. ಇಂದು ಇವರೆಲ್ಲರ ಗಂಟಲು ದ್ರವದ ತಪಾಸಣಾ ವರದಿ ಬಂದಿದ್ದು, 23 ಮಂದಿಯಲ್ಲೂ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಇವರನ್ನ ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜಿಲ್ಲೆಯ 290 ಸೋಂಕಿತರಲ್ಲಿ 153 ಮಂದಿ ಸೋಂಕಿತರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. 8 ಮಂದಿ ಮೃತಪಟ್ಟಿದ್ದು, 145 ಮಂದಿ ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.