ETV Bharat / city

ಅರ್ಧ ದಿನ ಕೂಲಿ ಮಾಡಿ, ಅರ್ಧ ದಿನ ಸುರಂಗ ಕೊರೆಯುತ್ತಿದ್ದ ಶ್ರಮಜೀವಿ.. ದಕ್ಷಿಣ ಕನ್ನಡದ ಈ 'ಭಗೀರಥ'ನ ಬದುಕೇ ರೋಚಕ!

ಕೃಷಿಗೆ ನೀರು ಹಾಯಿಸಲು ಪಂಪ್​ಸೆಟ್ ಸೌಲಭ್ಯಗಳೇ ಇಲ್ಲದ ಕಾಲದಲ್ಲಿ ಸುರಂಗ ನೀರಿನ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟವರು ದಕ್ಷಿಣ ಕನ್ನಡದ ಮಹಾಲಿಂಗ ನಾಯ್ಕ. ಅದರಲ್ಲೇ ದೊಡ್ಡ ಮಟ್ಟದ ಸಾಧನೆ ಮಾಡಿದ ಬಂಟ್ವಾಳ ತಾಲೂಕಿನ ಅಡ್ಯನಡ್ಕ ಸಮೀಪದ ಅಮೈ ನಿವಾಸಿ ಮಹಾಲಿಂಗ ನಾಯ್ಕ ಅವರ ಶ್ರಮದ ಹಾದಿ ಕುರಿತ ವಿಶೇಷ ಸ್ಟೋರಿ ಇಲ್ಲಿದೆ ನೋಡಿ..

Padma Shri for Amai Mahalinga Naik
ಅಮೈ ಮಹಾಲಿಂಗ ನಾಯ್ಕರಿಗೆ ಪದ್ಮಶ್ರೀ
author img

By

Published : Jan 26, 2022, 4:45 PM IST

Updated : Jan 26, 2022, 8:04 PM IST

ಬಂಟ್ವಾಳ (ದಕ್ಷಿಣ ಕನ್ನಡ): ಕಳೆದ ಬಾರಿ ದಕ್ಷಿಣ ಕನ್ನಡ ಜಿಲ್ಲೆಯವರೇ ಆದ ಅಕ್ಷರ ಸಂತ ಹರೇಕಳ ಹಾಜಬ್ಬ ಅವರನ್ನು ಗುರುತಿಸಿ ಕೇಂದ್ರ ಸರ್ಕಾರ ಪದ್ಮಶ್ರೀ ಗೌರವ ಪ್ರಶಸ್ತಿ ನೀಡಿತ್ತು. ತನಗೆ ಅಕ್ಷರಭ್ಯಾಸ ಗೊತ್ತಿಲ್ಲ. ಆದ್ರೆ ತನ್ನಂತೆ ಇತರರು ಕಷ್ಟ ಪಡಬಾರದೆಂದು ಹಣ್ಣಿನ ವ್ಯಾಪಾರ ಮಾಡಿ ಬಂದ ಹಣದಲ್ಲೇ ಶಾಲೆ ಕಟ್ಟಿಸಿದ ಹರೇಕಳ ಹಾಜಬ್ಬ ಅವರಿಗೆ ಈ ಗೌರವ ಅರಸಿ ಬಂದಿತ್ತು. ಅದೇ ರೀತಿ ಈ ಬಾರಿಯೂ ಅಕ್ಷರ ಕಲಿಯದಿದ್ದರೂ ತನ್ನ ಶ್ರಮದಿಂದ ಜೀವಜಲ ಹರಿಸಿದ ಜಿಲ್ಲೆಯ ಮತ್ತೋರ್ವ ಸಾಧಕನನ್ನು ಗುರುತಿಸಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸಲಾಗಿದೆ.

ಪದ್ಮಶ್ರೀ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕ ಅವರ ಸಾಧನೆ ಹೀಗಿದೆ...

ಪದ್ಮಶ್ರೀ ಗೌರವ: ಹೌದು, ಜಿಲ್ಲೆಯ ಬೋಳುಗುಡ್ಡೆಯಲ್ಲಿ ಏಕಾಂಗಿಯಾಗಿ ಸುರಂಗ ಕೊರೆದು ಜೀವಜಲವನ್ನು ತರಿಸಿದ ಭಗೀರಥನಿಗೆ ಪದ್ಮಶ್ರೀ ಒಲಿದಿದೆ. ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಅಮೈ ಮಹಾಲಿಂಗ ನಾಯ್ಕ ಅವರಿಗೆ ಪದ್ಮಶ್ರೀ ಗೌರವಕ್ಕೆ ಪಾತ್ರರಾಗಿದ್ದಾರೆ.

ಬೋಳುಗುಡ್ಡೆಯಲ್ಲಿ ನೀರು ತರಿಸಿದ ಸಾಧಕ: ಕೃಷಿಗೆ ಪ್ರಧಾನವಾಗಿ ಬೇಕಾದದ್ದು ನೀರು. ಕೃಷಿ ಭೂಮಿ ಇದ್ದರೂ ನೀರಿಲ್ಲದೇ ಕೃಷಿಯೇ ಮಾಡಲು ಅಸಾಧ್ಯ ಎಂಬ ಪರಿಸ್ಥಿತಿಯಲ್ಲಿ ತನ್ನ ಅಪರಿಮಿತ ಪರಿಶ್ರಮದಿಂದ ಬೋಳುಗುಡ್ಡೆಯಲ್ಲಿ ನೀರು ತಂದವರು ಅಮೈ ಮಹಾಲಿಂಗ ನಾಯ್ಕ ಅವರು. ಇವರ ಸಾಧನೆಗೆ ಇದೀಗ ಪದ್ಮಶ್ರೀ ಪ್ರಶಸ್ತಿ ಒಲಿದುಬಂದಿದೆ.

Tunnel Man Amai Mahalinga Naik
ಪದ್ಮಶ್ರೀ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕ

ಬರಡು ಭೂಮಿಯಲ್ಲಿ ನಿರಂತರ ಶ್ರಮ : ಅಮೈ ಮಹಾಲಿಂಗ ನಾಯ್ಕ ಅವರು ಕೇಪು ಗ್ರಾಮದ ಅಮೈ ಎಂಬ ಊರಿನವರು. ಇವರಿಗೆ ಸ್ವಂತ ಕೃಷಿ ಭೂಮಿ ಇರಲಿಲ್ಲ. ಅವರು ಅಮೈ ಮಹಾಬಲ ಭಟ್ಟ ಅವರ ಕೃಷಿಭೂಮಿಯಲ್ಲಿ ಕೂಲಿ ಕೆಲಸಕ್ಕೆ ಹೋಗಿದ್ದರು. 1978 ರಲ್ಲಿ ಮಹಾಲಿಂಗ ನಾಯ್ಕ ಅವರಿಗೆ ಮಹಾಬಲ ಭಟ್ ಅವರಿಂದ ಎರಡು ಎಕರೆ ಭೂಮಿ ಸಿಕ್ಕಿತ್ತು. ಆದರೆ ಸಿಕ್ಕ ಭೂಮಿಯಲ್ಲಿ ನೀರಿನ ಒರತೆ ಇಲ್ಲದೇ ಇದ್ದ ಕಾರಣ ಅದು ಪ್ರಯೋಜನಕ್ಕೆ ಬಂದಿರಲಿಲ್ಲ. ಅಲ್ಲಿಯೇ ಅವರು ಮನೆಯೊಂದನ್ನು ಕಟ್ಟಿದ್ದರು. ಕುಡಿಯುವ ನೀರಿಗೂ ನೆರೆಮನೆಯವರನ್ನು ಆಶ್ರಯಿಸಿದ್ದರು.

Tunnel Man Amai Mahalinga Naik
ಪದ್ಮಶ್ರೀ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕ

7ನೇ ಸುರಂಗದಲ್ಲಿ ಸಿಕ್ಕಿತು ಸಂಪದ್ಭರಿತ ನೀರು: ಈ ಬರಡು ಭೂಮಿಯಲ್ಲಿ ಬಾವಿ ತೋಡಿದರೂ ನೀರು ಸಿಗುವುದು ಅಸಾಧ್ಯ ಎಂಬುದನ್ನರಿತ ಮಹಾಲಿಂಗ ನಾಯ್ಕ ಸುರಂಗ ಕೊರೆಯುವ ಯೋಜನೆಯನ್ನು ರೂಪಿಸಿದರು. ಇದಕ್ಕಾಗಿ ಅರ್ಧ ದಿನ ಕೂಲಿ ಮಾಡಿ ಉಳಿದ ಸಮಯದಲ್ಲಿ ಸುರಂಗ ಕೊರೆಯಲು ಆರಂಭಿಸಿದರು. ಮೊದಲ ಸುರಂಗ ನಿರ್ಮಾಣ ಮಾಡಿದಾಗ ಅದರಲ್ಲಿ ನೀರು ಬಂದಿರಲಿಲ್ಲ. ಹೀಗೆ 25 ಮೀಟರ್ ಉದ್ದದ 5 ಸುರಂಗ ಕೊರೆದರೂ ನೀರು ಸಿಕ್ಕಿರಲಿಲ್ಲ. ಆದರೂ ಛಲ ಬಿಡದೆ 6ನೇ ಸುರಂಗ ಮಾಡಿದಾಗ ಅದರಲ್ಲಿ ನೀರು ಸಿಕ್ಕಿತ್ತು. ಆದರೆ ಅದು ಕೃಷಿಗೆ ಸಾಕಾಗುವಷ್ಟು ಇಲ್ಲದೇ ಇದ್ದುದರಿಂದ 7ನೇ ಸುರಂಗ ನಿರ್ಮಿಸಿದರು. ಈ ಏಳನೇ ಸುರಂಗದಲ್ಲಿ ಸಂಪದ್ಭರಿತ ನೀರು ಸಿಕ್ಕ ಹಿನ್ನೆಲೆ, ಅಲ್ಲಿಂದ ಬಂದ ನೀರನ್ನು ಸಂಗ್ರಹಿಸಲು ಕೆರೆ ನಿರ್ಮಿಸಿದರು. ಆ ಬಳಿಕ ತನ್ನ ಬರಡುಭೂಮಿಯಲ್ಲಿ ಯಾರೂ ಊಹಿಸದ ರೀತಿ ಭತ್ತ, ಅಡಕೆ, ತೆಂಗು, ಬಾಳೆ ಗಿಡಗಳ ಕೃಷಿ ಮಾಡಿ ಯಶಸ್ವಿಯಾದರು.

ಇದನ್ನೂ ಓದಿ: ಬೋಳುಗುಡ್ಡೆಯಲ್ಲಿ ಏಕಾಂಗಿಯಾಗಿ ಜೀವಜಲ ತರಿಸಿದ ಭಗೀರಥ.. ಅಮೈ ಮಹಾಲಿಂಗ ನಾಯ್ಕರಿಗೆ ಪದ್ಮಶ್ರೀ ಗೌರವ

ನೀರೇ ಇಲ್ಲದ ಬರಡು ಭೂಮಿಯಲ್ಲಿ ಸುರಂಗ ನಿರ್ಮಾಣ ಮಾಡಿ ನೀರು ಬರಿಸಿದ ಆಧುನಿಕ ಭಗೀರಥ ಮಹಾಲಿಂಗ ನಾಯ್ಕ್ ಅವರಿಗೆ ಇದೀಗ ಪದ್ಮಶ್ರೀ ಪ್ರಶಸ್ತಿ ಗೌರವ ಲಭಿಸಿದೆ.

ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Jan 26, 2022, 8:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.